Google Play ಸೇವಾ ನಿಯಮಗಳು

ಮಾರ್ಚ್ 15, 2023 (ಆರ್ಕೈವ್ ಮಾಡಿದ ಆವೃತ್ತಿಯನ್ನು ವೀಕ್ಷಿಸಿ)

1. ಪರಿಚಯ

ಅನ್ವಯಿಸುವ ನಿಯಮಗಳು. Google Play ಬಳಸಿದ್ದಕ್ಕಾಗಿ ಧನ್ಯವಾದಗಳು. Google Play ಎಂಬುದು 1600 Amphitheatre Parkway, Mountain View California 94043, USA ಇಲ್ಲಿ ಇರುವ Google LLC ("Google", "ನಾವು" ಅಥವಾ "ನಮಗೆ"), ಒದಗಿಸುವ ಸೇವೆಯಾಗಿದೆ. Google Play ಮತ್ತು ಅದರ ಮೂಲಕ ಲಭ್ಯವಿರುವ ಅಪ್ಲಿಕೇಶನ್‌ಗಳು (Android ತತ್‌ಕ್ಷಣ ಆಪ್‌ಗಳು ಸೇರಿದಂತೆ), ಸಿಸ್ಟಂ ಸೇವೆಗಳು, ಗೇಮ್‌ಗಳು,, ಚಲನಚಿತ್ರಗಳು, ಪುಸ್ತಕಗಳು, ನಿಯತಕಾಲಿಕೆಗಳು ಅಥವಾ ಇತರ ಡಿಜಿಟಲ್ ಕಂಟೆಂಟ್ ಅಥವಾ ಸೇವೆಗಳನ್ನು (ಇದನ್ನು ಒಟ್ಟಾಗಿ "ಕಂಟೆಂಟ್" ಎಂದು ಉಲ್ಲೇಖಿಸಲಾಗುತ್ತದೆ) ನೀವು ಬಳಸುವುದು Google Play ಸೇವಾ ನಿಯಮಗಳು (“Play ToS”) ಮತ್ತು Google ಸೇವಾ ನಿಯಮಗಳು ("Google ToS") ( ಇವುಗಳನ್ನು ಒಟ್ಟಾಗಿ "ನಿಯಮಗಳು" ಎಂದು ಉಲ್ಲೇಖಿಸಲಾಗುತ್ತದೆ) ಇವುಗಳಿಗೆ ಒಳಪಟ್ಟಿರುತ್ತದೆ. Google Play ಎಂಬುದು Google ToS ನಲ್ಲಿ ವಿವರಿಸಿರುವಂತೆ, ಒಂದು "ಸೇವೆ"ಯಾಗಿದೆ. Play ToS ಹಾಗೂ Google ToS ನಡುವೆ ಯಾವುದೇ ಸಂಘರ್ಷವಿದ್ದರೆ, Play ToS ಮೇಲುಗೈ ಹೊಂದಿರುತ್ತವೆ.

2. Google Play ಅನ್ನು ನೀವು ಬಳಸುವುದು

ಕಂಟೆಂಟ್‌ಗೆ ಪ್ರವೇಶ ಪಡೆಯುವುದು ಮತ್ತು ಅದನ್ನು ಬಳಸುವುದು. ನಿಮ್ಮ ಮೊಬೈಲ್, ಕಂಪ್ಯೂಟರ್, ಟಿವಿ, ವಾಚ್ ಅಥವಾ ಇತರ ಬೆಂಬಲಿತ ಸಾಧನದಿಂದ ("ಸಾಧನ") ಕಂಟೆಂಟ್ ಅನ್ನು ಬ್ರೌಸ್ ಮಾಡಲು, ಹುಡುಕಲು, ವೀಕ್ಷಿಸಲು, ಸ್ಟ್ರೀಮ್ ಮಾಡಲು ಅಥವಾ ಡೌನ್‌ಲೋಡ್ ಮಾಡಲು ನೀವು Google Play ಅನ್ನು ಬಳಸಬಹುದು. Google Play ಬಳಸಲು, ಸಂಬಂಧಿತ ಕಂಟೆಂಟ್‍ಗಾಗಿ ಸಿಸ್ಟಂ ಮತ್ತು ಹೊಂದಾಣಿಕೆಯ ಆವಶ್ಯಕತೆಗಳನ್ನು ಪೂರೈಸುವ ಸಾಧನ, ಕೆಲಸ ಮಾಡುವ ಇಂಟರ್ನೆಟ್ ಸಂಪರ್ಕ ಮತ್ತು ಅದಕ್ಕೆ ತಕ್ಕ ಸಾಫ್ಟ್‌ವೇರ್ ಅನ್ನು ನೀವು ಹೊಂದಿರಬೇಕು. ಕಂಟೆಂಟ್ ಮತ್ತು ವೈಶಿಷ್ಟ್ಯಗಳ ಲಭ್ಯತೆಯಲ್ಲಿ ದೇಶಗಳ ನಡುವೆ ವ್ಯತ್ಯಾಸವಿರಬಹುದು ಮತ್ತು ಎಲ್ಲಾ ಕಂಟೆಂಟ್ ಅಥವಾ ವೈಶಿಷ್ಟ್ಯಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು. ಕೆಲವೊಂದು ಕಂಟೆಂಟ್ ಅನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಬಹುದು. ಕಂಟೆಂಟ್ ಅನ್ನು Google ಒದಗಿಸಬಹುದು ಅಥವಾ Google ಸಹಭಾಗಿಗಳಲ್ಲದ ಥರ್ಡ್-ಪಾರ್ಟಿಗಳು ಒದಗಿಸಬಹುದು. Google ಹೊರತುಪಡಿಸಿ ಬೇರೆ ಮೂಲಗಳು ಒದಗಿಸಿರುವ, Google Play ಮೂಲಕ ಲಭ್ಯವಿರುವ ಯಾವುದೇ ಕಂಟೆಂಟ್‌ಗೆ Google ಜವಾಬ್ದಾರನಾಗಿರುವುದಿಲ್ಲ ಮತ್ತು ಅದನ್ನು ಅನುಮೋದಿಸುವುದಿಲ್ಲ.

ವಯಸ್ಸಿನ ನಿರ್ಬಂಧಗಳು. Google Play ಬಳಸಲು, ಈ ಕೆಳಗಿನ ವಯಸ್ಸಿನ ನಿರ್ಬಂಧಗಳಿಗೆ ಒಳಪಟ್ಟು, ನೀವು ಮಾನ್ಯವಾದ Google ಖಾತೆಯನ್ನು ("Google ಖಾತೆ") ಹೊಂದಿರಬೇಕು. ನಿಮ್ಮ ದೇಶದಲ್ಲಿ ನಿಮ್ಮನ್ನು ಅಪ್ರಾಪ್ತರೆಂದು ಪರಿಗಣಿಸಿದರೆ, Google Play ಬಳಸಲು ಮತ್ತು ನಿಯಮಗಳಿಗೆ ಸಮ್ಮತಿಸಲು, ಹೆತ್ತವರ ಅಥವಾ ಕಾನೂನುಬದ್ಧ ಪೋಷಕರ ಅನುಮತಿಯನ್ನು ನೀವು ಹೊಂದಿರಬೇಕು. Google Play ನಲ್ಲಿ ನಿರ್ದಿಷ್ಟ ಕಂಟೆಂಟ್ ಅಥವಾ ವೈಶಿಷ್ಟ್ಯಗಳನ್ನು ಬಳಸಲು, ಅನ್ವಯಿಸಬಹುದಾದ ಯಾವುದೇ ಹೆಚ್ಚುವರಿ ವಯಸ್ಸಿನ ನಿರ್ಬಂಧಗಳನ್ನು ನೀವು ಅನುಸರಿಸಬೇಕು. ಕುಟುಂಬ ನಿರ್ವಾಹಕರು ಮತ್ತು ಕುಟುಂಬದ ಸದಸ್ಯರು ಸಹ ಈ ಹೆಚ್ಚುವರಿ ಆವಶ್ಯಕತೆಗಳನ್ನು ಪೂರೈಸಬೇಕು.

ಥರ್ಡ್-ಪಾರ್ಟಿ ಶುಲ್ಕಗಳು. ಕಂಟೆಂಟ್ ಹಾಗೂ Google Play ಅನ್ನು ನೀವು ಬಳಸುವುದಕ್ಕೆ ಮತ್ತು ವೀಕ್ಷಿಸುವುದಕ್ಕೆ ಸಂಬಂಧಿಸಿದಂತೆ ಥರ್ಡ್-ಪಾರ್ಟಿಗಳು (ಉದಾಹರಣೆಗೆ, ನಿಮ್ಮ ಇಂಟರ್ನೆಟ್ ಪೂರೈಕೆದಾರರು ಅಥವಾ ಮೊಬೈಲ್ ವಾಹಕ) ವಿಧಿಸುವ ಪ್ರವೇಶ ಶುಲ್ಕ ಅಥವಾ ಡೇಟಾ ಶುಲ್ಕಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ.

ಅಪ್‌ಡೇಟ್‌ಗಳು. Google Play, ಸಂಬಂಧಿತ ಬೆಂಬಲ ಲೈಬ್ರರಿಗಳು, ಅಥವಾ ಕಂಟೆಂಟ್ ಅನ್ನು ಅಪ್‌ಡೇಟ್ ಮಾಡುವ ಅಗತ್ಯವಿರಬಹುದು - ಉದಾಹರಣೆಗೆ, ದೋಷ ಸರಿಪಡಿಸುವಿಕೆಗಳು, ವರ್ಧಿತ ಕಾರ್ಯಾಚರಣೆಗಳು, ತಪ್ಪಿಹೋಗಿರುವ ಪ್ಲಗ್-ಇನ್‌ಗಳು ಮತ್ತು ಹೊಸ ಆವೃತ್ತಿಗಳು (ಒಟ್ಟಾಗಿ, "ಅಪ್‌ಡೇಟ್‌ಗಳು"). Google Play ಅನ್ನು ಬಳಸಲು ಅಥವಾ ಕಂಟೆಂಟ್‌ಗೆ ಪ್ರವೇಶ ಪಡೆಯಲು, ಡೌನ್‌ಲೋಡ್ ಮಾಡಲು ಅಥವಾ ಬಳಸಲು ಇಂತಹ ಅಪ್‌ಡೇಟ್‌ಗಳು ಅಗತ್ಯವಿರಬಹುದು. ಈ ನಿಯಮಗಳಿಗೆ ಸಮ್ಮತಿಸುವ ಮೂಲಕ ಮತ್ತು Google Play ಅನ್ನು ಬಳಸುವ ಮೂಲಕ, ಇಂತಹ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಪಡೆಯಲು ನೀವು ಒಪ್ಪುತ್ತೀರಿ. ಕೆಲವೊಂದು ಕಂಟೆಂಟ್‌ನ ಅಪ್‌ಡೇಟ್‌ಗಳನ್ನು Google Play ನಲ್ಲಿ ಸೆಟ್ಟಿಂಗ್‌ಗಳ ಮೂಲಕ ನಿರ್ವಹಿಸಲು ನಿಮಗೆ ಸಾಧ್ಯವಾಗಬಹುದು. ಆದರೂ, ಕಂಟೆಂಟ್‌ಗೆ ಸಂಬಂಧಿಸಿದ ಪ್ರಮುಖ ಸುರಕ್ಷತಾ ಅಪಾಯವನ್ನು ಅಥವಾ ನಿರ್ಣಾಯಕ ಕಾರ್ಯಾಚರಣೆಯ ಸಮಸ್ಯೆಯನ್ನು ಅಪ್‌ಡೇಟ್ ಪರಿಹರಿಸುತ್ತದೆ ಅಥವಾ ದುರುಪಯೋಗಪಡಿಸಿಕೊಳ್ಳುವಿಕೆಯನ್ನು ತಡೆಯುತ್ತದೆ ಎಂದು ತೀರ್ಮಾನಿಸಿದರೆ, Google Play ಅಥವಾ ನಿಮ್ಮ ಸಾಧನದಲ್ಲಿ ನಿಮ್ಮ ಅಪ್‌ಡೇಟ್ ಸೆಟ್ಟಿಂಗ್‌ಗಳನ್ನು ಲೆಕ್ಕಿಸದೆಯೇ ಅಪ್‌ಡೇಟ್ ಅನ್ನು ಪೂರ್ತಿಗೊಳಿಸಲಾಗುವುದು. ಮೂಲತಃ Google Play ನಿಂದ ಡೌನ್‌ಲೋಡ್ ಮಾಡಿದ ಕಂಟೆಂಟ್ ಅನ್ನು ಬೇರೊಂದು ಅಪ್ಲಿಕೇಶನ್ ಅಪ್‌ಡೇಟ್ ಮಾಡಲು ಯತ್ನಿಸಿದರೆ, ನಿಮಗೆ ಎಚ್ಚರಿಕೆಯ ಸೂಚನೆಯನ್ನು ನೀಡಬಹುದು ಅಥವಾ ಇಂತಹ ಅಪ್‌ಡೇಟ್‌ಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.

ನಿಮ್ಮ ಕುರಿತಾದ ಮಾಹಿತಿ. ನೀವು Google Play ಅನ್ನು ಬಳಸುವಾಗ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ನಿರ್ವಹಿಸುತ್ತೇವೆ ಮತ್ತು ನಿಮ್ಮ ಗೌಪ್ಯತೆಯನ್ನು ಹೇಗೆ ಸಂರಕ್ಷಿಸುತ್ತೇವೆ ಎನ್ನುವುದನ್ನು Google ನ ಗೌಪ್ಯತಾ ನೀತಿ ವಿವರಿಸುತ್ತದೆ. ನಿಮ್ಮ ವಹಿವಾಟುಗಳನ್ನು ಪ್ರಕ್ರಿಯೆಗೊಳಪಡಿಸಲು ಅಥವಾ ಕಂಟೆಂಟ್ ಅನ್ನು ನಿಮಗೆ ಒದಗಿಸಲು, ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು Google, ಪೂರೈಕೆದಾರರಿಗೆ ಒದಗಿಸಬೇಕಾಗಬಹುದು. ಪೂರೈಕೆದಾರರು, ಈ ಮಾಹಿತಿಯನ್ನು ತಮ್ಮ ಗೌಪ್ಯತಾ ನೀತಿಗಳಿಗೆ ಅನುಸಾರವಾಗಿ ಬಳಸಲು ಒಪ್ಪುತ್ತಾರೆ.

ನೀವು Google Play ನಲ್ಲಿ ಕುಟುಂಬ ಗುಂಪಿನ ಭಾಗವಾಗಿದ್ದರೆ, ಕುಟುಂಬ ಗುಂಪಿನಲ್ಲಿರುವ ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಕುರಿತು ಕೆಲವೊಂದು ಮಾಹಿತಿಯನ್ನು ನೋಡಬಲ್ಲರು. ನೀವು Google Play ನಲ್ಲಿ ಕುಟುಂಬ ಗುಂಪಿನ ಕುಟುಂಬ ನಿರ್ವಾಹಕರಾಗಿದ್ದರೆ, ಕುಟುಂಬ ಗುಂಪನ್ನು ಸೇರಲು ನೀವು ಆಹ್ವಾನಿಸುವ ಕುಟುಂಬ ಸದಸ್ಯರು ನಿಮ್ಮ ಹೆಸರು, ಫೋಟೋ ಮತ್ತು ಇ-ಮೇಲ್ ವಿಳಾಸವನ್ನು ನೋಡಬಲ್ಲರು. ನೀವು ಕುಟುಂಬ ಗುಂಪನ್ನು ಕುಟುಂಬದ ಸದಸ್ಯರಾಗಿ ಸೇರಿಕೊಂಡರೆ, ಇತರ ಕುಟುಂಬ ಸದಸ್ಯರು ನಿಮ್ಮ ಹೆಸರು, ಫೋಟೋ ಮತ್ತು ಇಮೇಲ್ ವಿಳಾಸವನ್ನು ನೋಡಬಲ್ಲರು. ನಿಮ್ಮ ಕುಟುಂಬ ನಿರ್ವಾಹಕರು ನಿಮ್ಮ ವಯಸ್ಸನ್ನು ಸಹ ನೋಡಬಲ್ಲರು ಮತ್ತು ಕುಟುಂಬದ ನಿಯೋಜಿತ ಪಾವತಿ ವಿಧಾನವನ್ನು ಬಳಸಿ ನೀವು ಮಾಡುವ ಎಲ್ಲಾ ಖರೀದಿಗಳ ದಾಖಲೆ ಮತ್ತು ಖರೀದಿಸಿದ ಕಂಟೆಂಟ್‌ನ ವಿವರಣೆಯನ್ನು ನೋಡಬಲ್ಲರು. ಕುಟುಂಬದೊಂದಿಗೆ ಹಂಚಿಕೊಳ್ಳಲು ಕಂಟೆಂಟ್ ಲಭ್ಯವಿದ್ದರೆ ಮತ್ತು ನೀವು ಅದನ್ನು ಕುಟುಂಬ ಗುಂಪಿನ ಜೊತೆ ಹಂಚಿಕೊಂಡರೆ, ಎಲ್ಲಾ ಕುಟುಂಬ ಸದಸ್ಯರು ಆ ಕಂಟೆಂಟ್‌ಗೆ ಪ್ರವೇಶ ಪಡೆಯಬಲ್ಲರು ಮತ್ತು ಅದನ್ನು ನೀವು ಖರೀದಿಸಿದಿರಿ ಎಂಬುದನ್ನು ನೋಡಬಲ್ಲರು.

ಖಾತೆಗಳಿಗೆ ಅನಧಿಕೃತ ಪ್ರವೇಶ. ನಿಮ್ಮ ಖಾತೆಯ ವಿವರಗಳನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಬೇಕು ಮತ್ತು ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು. Google Play ನ ಯಾವುದೇ ಬಳಕೆದಾರ ಅಥವಾ Google Play ಮೂಲಕ ಇತರ ಯಾವುದೇ Google ಸೇವೆಗಳ ಬಳಕೆದಾರನ ಖಾತೆಯ ಹೆಸರುಗಳೂ ಸೇರಿದಂತೆ ಯಾವುದೇ ವೈಯಕ್ತಿಕ ಡೇಟಾವನ್ನು ನೀವು ಸಂಗ್ರಹಿಸುವಂತಿಲ್ಲ ಅಥವಾ ಉತ್ಪಾದಿಸುವಂತಿಲ್ಲ.

ನಿಷ್ಕ್ರಿಯಗೊಳಿಸಿರುವ ಖಾತೆಗಳು. ನಿಯಮಗಳಿಗೆ ಅನುಸಾರವಾಗಿ Google, ನಿಮ್ಮ ಖಾತೆಗೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಿದರೆ (ಉದಾಹರಣೆಗೆ, ನೀವು ನಿಯಮಗಳನ್ನು ಉಲ್ಲಂಘಿಸಿದರೆ), Google Play, ನಿಮ್ಮ ಖಾತೆಯ ವಿವರಗಳು ಅಥವಾ ಯಾವುದೇ ಫೈಲ್‌ಗಳು ಅಥವಾ ನಿಮ್ಮ ಖಾತೆಯಲ್ಲಿ ಸಂಗ್ರಹಿಸಿರುವ ಯಾವುದೇ ಇತರ ಕಂಟೆಂಟ್‌ಗೆ ನೀವು ಪ್ರವೇಶಿಸುವುದನ್ನು ತಡೆಗಟ್ಟಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯ ಕೇಂದ್ರವನ್ನು ನೋಡಿ. Google Play ನಲ್ಲಿ ನೀವು ಒಂದು ಕುಟುಂಬದ ಕುಟುಂಬ ನಿರ್ವಾಹಕರಾಗಿದ್ದು, Google ನಿಮ್ಮ ಖಾತೆಗೆ ಪ್ರವೇಶಿಸುವುದನ್ನು ನಿಷ್ಕ್ರಿಯಗೊಳಿಸಿದರೆ, ಕುಟುಂಬ ಗುಂಪಿನ ಅಗತ್ಯವಿರುವ ಕುಟುಂಬ ವೈಶಿಷ್ಟ್ಯಗಳಿಗೆ ನಿಮ್ಮ ಕುಟುಂಬದ ಸದಸ್ಯರು ಪ್ರವೇಶ ಕಳೆದುಕೊಳ್ಳಬಹುದು. ಉದಾಹರಣೆಗೆ, ಕುಟುಂಬದ ಪಾವತಿ ವಿಧಾನ, ಕುಟುಂಬದ ಸಬ್‌ಸ್ಕ್ರಿಪ್ಷನ್‌ಗಳು ಅಥವಾ ಕುಟುಂಬದ ಸದಸ್ಯರು ಹಂಚಿಕೊಂಡಿರುವ ಕಂಟೆಂಟ್. ನೀವು Google Play ನಲ್ಲಿ ಒಂದು ಕುಟುಂಬದ ಸದಸ್ಯರಾಗಿದ್ದರೆ ಮತ್ತು Google ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದರೆ, ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಹಂಚಿಕೊಂಡ ಕಂಟೆಂಟ್‍ಗೆ ಅವರು ಪ್ರವೇಶವನ್ನು ಕಳೆದುಕೊಳ್ಳುತ್ತಾರೆ.

ಮಾಲ್‌ವೇರ್ ವಿರುದ್ಧ ಸಂರಕ್ಷಣೆ. ದುರುದ್ದೇಶಪೂರಿತವಾದ ಥರ್ಡ್-ಪಾರ್ಟಿ ಸಾಫ್ಟ್‌ವೇರ್‌, URLಗಳು ಮತ್ತು ಇತರ ಸುರಕ್ಷತಾ ಸಮಸ್ಯೆಗಳ ವಿರುದ್ಧ ನಿಮ್ಮನ್ನು ರಕ್ಷಿಸಲು, ನಿಮ್ಮ ಸಾಧನದ ನೆಟ್‌ವರ್ಕ್ ಸಂಪರ್ಕಗಳು, ಸಂಭಾವ್ಯವಾಗಿ ಅಪಾಯಕಾರಿಯಾದ URLಗಳು, ಅಪರೇಟಿಂಗ್ ಸಿಸ್ಟಂ ಮತ್ತು ನಿಮ್ಮ ಸಾಧನದಲ್ಲಿ ಇನ್‌ಸ್ಟಾಲ್‌ ಮಾಡಿರುವ ಅಪ್ಲಿಕೇಶನ್‍ಗಳ ಕುರಿತು Google Play ಅಥವಾ ಇತರ ಮೂಲಗಳಿಂದ Google ಮಾಹಿತಿ ಪಡೆಯಬಹುದು. ಯಾವುದೇ ಅಪ್ಲಿಕೇಶನ್ ಅಥವಾ URL ಅಸುರಕ್ಷಿತವೆಂದು Google ಭಾವಿಸಿದಲ್ಲಿ, ಅದು ನಿಮಗೆ ಎಚ್ಚರಿಕೆ ನೀಡಬಹುದು. ಅದು ಸಾಧನಗಳಿಗೆ, ಡೇಟಾ ಅಥವಾ ಬಳಕೆದಾರರಿಗೆ ಹಾನಿಕಾರಕವೆಂದು ತಿಳಿದುಬಂದಲ್ಲಿ Google ಅದನ್ನು ತೆಗೆದುಹಾಕಬಹುದು ಅಥವಾ ನಿಮ್ಮ ಸಾಧನದಲ್ಲಿ ಅದನ್ನು ಇನ್‌ಸ್ಟಾಲ್‌ ಮಾಡುವುದನ್ನು ತಡೆಗಟ್ಟಬಹುದು. ಇವುಗಳಲ್ಲಿ ಕೆಲವೊಂದು ಸಂರಕ್ಷಣೆಗಳನ್ನು ನಿಷ್ಕ್ರಿಯಗೊಳಿಸುವುದನ್ನು ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ಅಯ್ಕೆ ಮಾಡಬಹುದು. ಆದರೆ Google, ಇನ್‌ಸ್ಟಾಲ್‌ ಮಾಡಿರುವ ಅಪ್ಲಿಕೇಶನ್‌ಗಳ ಕುರಿತಾದ ಮಾಹಿತಿಯನ್ನು Google Play ನಿಂದ ಪಡೆಯಬಹುದು. ನಿಮ್ಮ ಸಾಧನದಲ್ಲಿ ಇತರ ಮೂಲಗಳಿಂದ ಇನ್‌ಸ್ಟಾಲ್‌ ಮಾಡಿರುವ ಅಪ್ಲಿಕೇಶನ್‌ಗಳಲ್ಲಿನ ಸುರಕ್ಷತಾ ಸಮಸ್ಯೆಗಳನ್ನು, Google ಗೆ ಮಾಹಿತಿ ಕಳುಹಿಸದೆಯೇ ವಿಶ್ಲೇಷಿಸಬಹುದು.

Android ತತ್‌ಕ್ಷಣ ಆಪ್‌ಗಳು. ನಿಮ್ಮ ಸಾಧನದಲ್ಲಿ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಸಂಬಂಧಿತ ತತ್‌ಕ್ಷಣ ಆಪ್ ಇದೆಯೇ ಎಂಬುದನ್ನು Google Play ಪರೀಕ್ಷಿಸಬಹುದು ಮತ್ತು ಅದು ಇದ್ದರೆ, ಲಿಂಕ್ ಅನ್ನು ತತ್‌ಕ್ಷಣ ಆಪ್‌ನಲ್ಲಿ ತೆರೆಯುತ್ತದೆ. ನೀವು ಪ್ರವೇಶಿಸುವ ತತ್‌ಕ್ಷಣ ಆಪ್‌ನ ಭಾಗಗಳನ್ನು ರನ್ ಮಾಡಲು ಬೇಕಾದ ಯಾವುದೇ ಕೋಡ್ ಅನ್ನು ನಿಮ್ಮ ಸಾಧನಕ್ಕೆ ಡೌನ್‌ಲೋಡ್ ಮಾಡಲಾಗುವುದು ಮತ್ತು ಅದರಲ್ಲಿ ತಾತ್ಕಾಲಿಕವಾಗಿ ಇರಿಸಲಾಗುವುದು. ತತ್‌ಕ್ಷಣ ಆಪ್‌‍ಗೆ ಸಂಬಂಧಿಸಿದ ಅಪ್ಲಿಕೇಶನ್ ವಿವರಗಳನ್ನು Google Play ಸ್ಟೋರ್‌ನಲ್ಲಿ ಕಾಣಬಹುದು. ನಿಮ್ಮ Google ಖಾತೆಯೊಂದಿಗೆ ಸೈನ್ ಇನ್ ಮಾಡಿರುವ ಸಾಧನಗಳಿಗೆ Android ತತ್‌ಕ್ಷಣ ಆಪ್‌ಗಳ ಡೇಟಾ ಮತ್ತು ಸೆಟ್ಟಿಂಗ್‌ಗಳನ್ನು ಸಿಂಕ್ ಮಾಡಲಾಗುತ್ತದೆ. ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ Android ತತ್‌ಕ್ಷಣ ಆಪ್‌ಗಳನ್ನು ನಿಷ್ಕ್ರಿಯಗೊಳಿಸುವುದನ್ನು ನೀವು ಆಯ್ಕೆ ಮಾಡಬಹುದು.

ಈ ನಿಯಮಗಳಿಗೆ ಬದಲಾವಣೆಗಳು.Play ToS ಬದಲಾದರೆ, ನಿಮಗೆ ಕನಿಷ್ಠ 30 ದಿನಗಳ ಕಾಲಾವಕಾಶ ನೀಡಿ ಸೂಚನೆ ನೀಡಲಾಗುವುದು, ಹೊಸ Play ToS ಈ ಸೂಚನಾ ಅವಧಿಯ ನಂತರ ಅನ್ವಯವಾಗುತ್ತವೆ. ಈ ಸೂಚನಾ ಅವಧಿ ಮುಗಿದ ಬಳಿಕವೂ ನೀವು Google Play ಬಳಸುವುದನ್ನು ಮುಂದುವರಿಸಿದರೆ, ಹೊಸ Play ToS ಗೆ ನೀವು ಸಮ್ಮತಿಸಿದ್ದೀರಿ ಎಂದು ಅರ್ಥ. ಹೊಸ Play ToS, ನೀವು ಎಲ್ಲಾ ಕಂಟೆಂಟ್ (ನೀವು ಈ ಹಿಂದೆ ಇನ್‌ಸ್ಟಾಲ್‌ ಮಾಡಿರುವ ಅಥವಾ ಖರೀದಿಸಿರುವ ಕಂಟೆಂಟ್ ಸೇರಿದಂತೆ) ಬಳಸುವುದಕ್ಕೆ ಮತ್ತು ಮುಂದಿನ ಎಲ್ಲಾ ಇನ್‌ಸ್ಟಾಲ್‌‌ಗಳು ಅಥವಾ ಖರೀದಿಗಳಿಗೆ ಅನ್ವಯಿಸುತ್ತವೆ. ಇಂತಹ ಬದಲಾವಣೆಗಳಿಗೆ ನೀವು ಸಮ್ಮತಿಸದಿದ್ದರೆ, ನೀವು ಈ ಹಿಂದೆ ಖರೀದಿಸಿರುವ ಅಥವಾ ಇನ್‌ಸ್ಟಾಲ್‌ ಮಾಡಿರುವ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಿ, Google Play ಬಳಕೆಯನ್ನು ಕೊನೆಗೊಳಿಸಲು ನಿಮಗೆ ಅವಕಾಶ ನೀಡಲಾಗುತ್ತದೆ. ನೀವು ಸಮ್ಮತಿಸಿದ Play ToS ನ ಕೊನೆಯ ಆವೃತ್ತಿಯ ಅನುಸಾರ ನಿಮ್ಮ ಸಾಧನಗಳಲ್ಲಿರುವ ಕಂಟೆಂಟ್‌ನ ಆ ಪ್ರತಿಯನ್ನು ವೀಕ್ಷಿಸುವುದನ್ನು ನೀವು ಮುಂದುವರಿಸಬಹುದು.

3. ಖರೀದಿಗಳು ಮತ್ತು ಪಾವತಿಗಳು

ಉಚಿತ ಕಂಟೆಂಟ್. Google Play ನಲ್ಲಿ ಕಂಟೆಂಟ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು, ವೀಕ್ಷಿಸಲು ಅಥವಾ ಬಳಸಲು ಅನುಮತಿಸಬಹುದು. ಕೆಲವೊಂದು ಉಚಿತ ಕಂಟೆಂಟ್‌ಗೆ ನೀವು ಪ್ರವೇಶಿಸಲು ಮತ್ತು ಬಳಸಲು ಹೆಚ್ಚುವರಿ ಮಿತಿಗಳು ಅನ್ವಯಿಸಬಹುದು.

ಕಂಟೆಂಟ್ ಖರೀದಿ. Google Play ನಲ್ಲಿ ಅಥವಾ ಅದರ ಮೂಲಕ ನೀವು ಕಂಟೆಂಟ್ ಅನ್ನು ಖರೀದಿಸಿದಾಗ, ಈ ನಿಯಮಗಳನ್ನು (ಅನ್ವಯಿಸುವಂತೆ) ಆಧರಿಸಿ, ನೀವು ಮಾರಾಟಗಾರರೊಂದಿಗೆ ಪ್ರತ್ಯೇಕ ಮಾರಾಟ ಒಪ್ಪಂದವನ್ನು ಮಾಡಿಕೊಳ್ಳುವಿರಿ. ಅದು ಈ ರೀತಿ ಇರುತ್ತದೆ:

(a) Google Ireland Limited; ಅಥವಾ

(b) ಕಂಟೆಂಟ್ ಒದಗಿಸುವವರ ಏಜೆಂಟ್ ಆಗಿ Google Ireland Limited ಕಾರ್ಯನಿರ್ವಹಿಸುವ ಸಂದರ್ಭಗಳೂ ಸೇರಿದಂತೆ, ಕಂಟೆಂಟ್ ಒದಗಿಸುವವರು ("ಒದಗಿಸುವವರು").

ಪ್ರತ್ಯೇಕ ಮಾರಾಟ ಒಪ್ಪಂದವು ಈ ನಿಯಮಗಳಿಗೆ ಹೆಚ್ಚುವರಿಯಾಗಿರುತ್ತದೆ.

ಪೂರೈಕೆದಾರರ ಏಜೆಂಟ್ ಆಗಿ Google ಕಾರ್ಯನಿರ್ವಹಿಸುವ ಮಾರಾಟಗಳಿಗಾಗಿ, Google ToS ನಲ್ಲಿ ಹೇಳಿರುವಂತೆ Google ToS "ಯಾವುದೇ ಥರ್ಡ್-ಪಾರ್ಟಿ ಫಲಾನುಭವಿ ಹಕ್ಕುಗಳನ್ನು ಸೃಷ್ಟಿಸುವುದಿಲ್ಲ" ಎಂಬ ಹೇಳಿಕೆಯು Google Play ಅನ್ನು ನೀವು ಬಳಸುವುದಕ್ಕೆ ಅನ್ವಯಿಸುವುದಿಲ್ಲ.

ನೀವು ಕಂಟೆಂಟ್ ಅನ್ನು ಖರೀದಿಸಿರುವುದರ ದೃಢೀಕರಣಕ್ಕಾಗಿ Google ನಿಂದ ನೀವು ಇಮೇಲ್ ಪಡೆದಾಗ, ಕಂಟೆಂಟ್ ಖರೀದಿ ಮತ್ತು ಬಳಕೆಯ ನಿಮ್ಮ ಒಪ್ಪಂದವು ಪೂರ್ತಿಯಾಗುತ್ತದೆ. ಖರೀದಿ ಪೂರ್ತಿಯಾದ ತಕ್ಷಣ ಈ ಒಪ್ಪಂದವು ಜಾರಿಯಾಗುತ್ತದೆ.

ಮುಂಗಡ-ಆರ್ಡರ್‌ಗಳು. ನೀವು ಕಂಟೆಂಟ್‌ಗಾಗಿ ಮುಂಗಡ-ಆರ್ಡರ್ ಸಲ್ಲಿಸಿದಾಗ, ಕಂಟೆಂಟ್ ಅನ್ನು ನಿಮಗೆ ಲಭ್ಯವಾಗುವ ಹಾಗೆ ಮಾಡಿದಾಗ ಆ ಐಟಂನ ಖರೀದಿ ಮತ್ತು ಬಳಕೆಗಾಗಿ ನಿಮ್ಮ ಒಪ್ಪಂದವು ಪೂರ್ತಿಯಾಗುತ್ತದೆ ಮತ್ತು ಆ ಸಮಯದಲ್ಲಿ ಖರೀದಿಯ ಶುಲ್ಕವನ್ನು ನಿಮಗೆ ವಿಧಿಸಲಾಗುತ್ತದೆ. ನಿಮಗೆ ಕಂಟೆಂಟ್ ಲಭ್ಯವಾಗುವ ಸಮಯದವರೆಗೆ, ಮುಂಗಡ-ಆರ್ಡರ್ ಅನ್ನು ನೀವು ಯಾವುದೇ ಸಮಯದಲ್ಲೂ ರದ್ದುಗೊಳಿಸಬಹುದು. ಕಂಟೆಂಟ್ ಅನ್ನು ಲಭ್ಯಗೊಳಿಸುವ ಮೊದಲು Google Play ಮೂಲಕ ಅದನ್ನು ಮಾರಾಟದಿಂದ ಹಿಂಪಡೆದರೆ, ನಿಮ್ಮ ಮುಂಗಡ-ಆರ್ಡರ್ ಅನ್ನು ನಾವು ರದ್ದುಗೊಳಿಸಬೇಕಾಗುತ್ತದೆ. ನಿಮ್ಮ ಆರ್ಡರ್ ಅನ್ನು ಪೂರೈಸುವ ಮುನ್ನ ದರ ಬದಲಾದರೆ, ನಿಮ್ಮ ಆರ್ಡರ್ ಅನ್ನು ರದ್ದುಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ.

ಕುಟುಂಬ ಪಾವತಿ ವಿಧಾನ. Google Play ನಲ್ಲಿ ನೀವು ಕುಟುಂಬ ಗುಂಪಿನ ಕುಟುಂಬ ನಿರ್ವಾಹಕರಾಗಿದ್ದರೆ, Google Play ಮತ್ತು ಅಪ್ಲಿಕೇಶನ್‌ ಒಳಗಡೆಗೆ ನಿಮ್ಮ ಕುಟುಂಬ ಸದಸ್ಯರು ಕಂಟೆಂಟ್ ಖರೀದಿಗಾಗಿ ಬಳಸಲು, ನೀವು ಮಾನ್ಯವಾದ ಕುಟುಂಬ ಪಾವತಿ ವಿಧಾನವನ್ನು ಹೊಂದಿಸುವುದು ಅಗತ್ಯವಿದೆ. ಕುಟುಂಬದ ಪಾವತಿ ವಿಧಾನವನ್ನು ಬಳಸಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಖರೀದಿಸುವ ಕಂಟೆಂಟ್‍ಗೆ ನೀವೇ ಜವಾಬ್ದಾರರಾಗಿರುತ್ತೀರಿ. ಕುಟುಂಬದ ಗುಂಪನ್ನು ಅಳಿಸಿದರೆ ಅಥವಾ ಕುಟುಂಬದ ಒಬ್ಬ ಸದಸ್ಯರು ಕುಟುಂಬದ ಗುಂಪನ್ನು ತೊರೆದರೆ, ಕುಟುಂಬದ ಪಾವತಿ ವಿಧಾನವನ್ನು ಬಳಸಿ ಕುಟುಂಬದ ಸದಸ್ಯರ ಖರೀದಿಗಳ ಬಾಕಿ ಶುಲ್ಕವನ್ನು ನಿಮಗೆ ವಿಧಿಸಬಹುದು.

Google ಪಾವತಿಗಳು. Google Play ಮೂಲಕ ಕಂಟೆಂಟ್ ಖರೀದಿಸಲು, ನೀವು Google ಪಾವತಿಗಳ ಖಾತೆಯನ್ನು ಹೊಂದಿರಬೇಕು ಮತ್ತು Google ಪಾವತಿಗಳ ಸೇವಾ ನಿಯಮಗಳಿಗೆ ಸಮ್ಮತಿಸಬೇಕು. Google ಪಾವತಿಗಳ ಖಾತೆಯನ್ನು ಬಳಸಿ ನೀವು ಕಂಟೆಂಟ್ ಖರೀದಿಸಿದಾಗ, Google ಪಾವತಿಗಳ ಗೌಪ್ಯತಾ ಸೂಚನೆಯು ಅನ್ವಯವಾಗುತ್ತದೆ. ನಿಮ್ಮ Google ಪಾವತಿಗಳ ಖಾತೆಯಲ್ಲಿ Google Play ಮೂಲಕ ಮಾಡಿದ ಖರೀದಿಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಎಲ್ಲಾ ಮೊತ್ತಗಳಿಗೂ ನೀವೇ ಜವಾಬ್ದಾರರಾಗಿರುತ್ತೀರಿ.

ಇತರ ಪಾವತಿ ಪ್ರಕ್ರಿಯೆ ವಿಧಾನಗಳು. Google Play ಮೂಲಕ ಕಂಟೆಂಟ್‌ ಅನ್ನು ಖರೀದಿಸಲು ಅನುಕೂಲವಾಗುವಂತೆ Google ಪಾವತಿಗಳ ಜೊತೆಗೆ ಹೆಚ್ಚುವರಿಯಾಗಿ ನಿಮಗೆ ಹಲವು ಪಾವತಿ ಪ್ರಕ್ರಿಯೆ ವಿಧಾನಗಳನ್ನು Google ನಿಮಗೆ ಲಭ್ಯವಾಗುವಂತೆ ಮಾಡಬಹುದು. ನಿರ್ದಿಷ್ಟ ಪಾವತಿ ಪ್ರಕ್ರಿಯೆಗೊಳಿಸುವ ವಿಧಾನದ ನಿಮ್ಮ ಬಳಕೆಯನ್ನು ನಿಯಂತ್ರಿಸುವ, Google ಅಥವಾ ಥರ್ಡ್-ಪಾರ್ಟಿಯೊಂದಿಗಿನ ಯಾವುದೇ ಸೂಕ್ತ ನಿಯಮಗಳು ಮತ್ತು ಷರತ್ತುಗಳು ಅಥವಾ ಕಾನೂನು ಒಪ್ಪಂದವನ್ನು ನೀವು ಪಾಲಿಸಬೇಕು. Google, ತನ್ನ ಸ್ವಂತ ವಿವೇಚನೆಯ ಮೇರೆಗೆ ಪಾವತಿ ಪ್ರಕ್ರಿಯೆಗೊಳಿಸುವ ವಿಧಾನಗಳನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ನೀವು Google Play ನಲ್ಲಿ ಮಾಡುವ ಎಲ್ಲಾ ಖರೀದಿಗಳಿಗೆ ಸಂಬಂಧಿಸಿ, ಪಾವತಿಸಬೇಕಾದ ಎಲ್ಲಾ ಮೊತ್ತಗಳ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.

ವಾಹಕ ಬಿಲ್ಲಿಂಗ್‌ಗೆ ಅರ್ಹತೆ. ನಿಮ್ಮ ನೆಟ್‌ವರ್ಕ್‌ ಒದಗಿಸುವವರ ಖಾತೆಗೆ ಬಿಲ್ ಮಾಡಲಾದ ನಿಮ್ಮ ಸಾಧನಗಳ ಮೂಲಕ ನೀವು ಮಾಡುವ ಕಂಟೆಂಟ್ ಖರೀದಿಗಳನ್ನು ಮಾಡಲು ನಿಮ್ಮ ಅರ್ಹತೆಯನ್ನು ನಿರ್ಧರಿಸಲು, ಸಾಧನದಲ್ಲಿ ನಿಮ್ಮ Google Play ಖಾತೆಯನ್ನು ರಚಿಸಿದಾಗ, ನಿಮ್ಮ ಸಾಧನವನ್ನು ಗುರುತಿಸುವ ಗುರುತುಗಳನ್ನು ನಾವು ಕಳುಹಿಸುತ್ತೇವೆ, ಉದಾಹರಣೆಗಾಗಿ: ನಿಮ್ಮ ನೆಟ್‌ವರ್ಕ್‌ ಒದಗಿಸುವವರಿಗೆ ಸಬ್‌ಸ್ಕ್ರೈಬರ್‌ ಐಡಿ ಮತ್ತು ಸಿಮ್‌ ಕಾರ್ಡ್‌ ಸಿರಿಯಲ್ ಸಂಖ್ಯೆ ಒದಗಿಸುತ್ತೇವೆ. ಇದಕ್ಕೆ ಅನುಮತಿಸಲು, ನೆಟ್‍ವರ್ಕ್ ಪೂರೈಕೆದಾರರ ಸೇವಾ ನಿಯಮಗಳಿಗೆ ನೀವು ಸಮ್ಮತಿಸಬೇಕು. ನೆಟ್‌ವರ್ಕ್ ಪೂರೈಕೆದಾರರು, ನಿಮ್ಮ ಬಿಲ್ಲಿಂಗ್ ವಿಳಾಸ ಮಾಹಿತಿಯನ್ನು ನಮಗೆ ಕಳುಹಿಸಬಹುದು. ಈ ಮಾಹಿತಿಯನ್ನು ನಾವು Google ನ ಗೌಪ್ಯತಾ ನೀತಿಗಳು ಮತ್ತು Google ಪಾವತಿಗಳ ಗೌಪ್ಯತಾ ಸೂಚನೆಯ ಅನುಸಾರ ಇರಿಸಿಕೊಳ್ಳುತ್ತೇವೆ ಮತ್ತು ಉಪಯೋಗಿಸುತ್ತೇವೆ.

ದರ. Google Play ಮೂಲಕ ಪ್ರದರ್ಶಿಸಿರುವ ಎಲ್ಲಾ ಕಂಟೆಂಟ್‌ನ ದರ ಮತ್ತು ಲಭ್ಯತೆಯನ್ನು ಖರೀದಿಗೆ ಮುನ್ನ, ಯಾವುದೇ ಸಮಯದಲ್ಲಿ ನಾವು ಬದಲಿಸಬಹುದು.

ತೆರಿಗೆಗಳು."ತೆರಿಗೆಗಳು" ಎಂದರೆ ಮಾರಾಟದ ಕಂಟೆಂಟ್‌ನೊಂದಿಗೆ ಸಂಬಂಧಿತ, ಯಾವುದೇ ರೀತಿಯ ದಂಡಗಳು ಅಥವಾ ಬಡ್ಡಿಯನ್ನು ಒಳಗೊಂಡಂತೆ ದಸ್ತಾವೇಜುಗಳ ಸುಂಕ, ಕಸ್ಟಮ್ಸ್‌ ಶುಲ್ಕಗಳು, ಲೆವಿಗಳು ಅಥವಾ ತೆರಿಗೆಗಳು (ಆದಾಯ ತೆರಿಗೆಯನ್ನು ಹೊರತುಪಡಿಸಿ) ಅನ್ನು ಒಳಗೊಂಡಿರುತ್ತದೆ. ಯಾವುದೇ ತೆರಿಗೆಗಳಿಗೆ ನೀವೇ ಜವಾಬ್ದಾರರಾಗಿರುವಿರಿ ಮತ್ತು ತೆರಿಗೆಗಳಲ್ಲಿ ಯಾವುದೇ ಕಡಿತವಿಲ್ಲದೇ ವಿಷಯಕ್ಕೆ ಸಂಬಂಧಿಸಿದಂತೆ ಪಾವತಿ ಮಾಡಬೇಕು. ಕಂಟೆಂಟ್‌ನ ಮಾರಾಟಗಾರರು ಅಥವಾ Google, ತೆರಿಗೆಗಳನ್ನು ಸಂಗ್ರಹಿಸಲು ಅಥವಾ ಪಾವತಿಸಲು ಹೊಣೆಗಾರರಾಗಿದ್ದರೆ, ತೆರಿಗೆಗಳ ಶುಲ್ಕವನ್ನು ನಿಮಗೆ ವಿಧಿಸಲಾಗುತ್ತದೆ. Google Play ಅನ್ನು ನೀವು ಬಳಸುವುದಕ್ಕೆ ಸಂಬಂಧಿಸಿದಂತೆ ಅಥವಾ Google Play ನಲ್ಲಿ ಅಥವಾ ಅದರ ಮೂಲಕ ಕಂಟೆಂಟ್ ಖರೀದಿಸುವುದಕ್ಕೆ ಸಂಬಂಧಿಸಿದಂತೆ ವರದಿ ಮಾಡಬೇಕಾದ ಮತ್ತು ಪಾವತಿಸಬೇಕಾದ ತೆರಿಗೆಗಳೂ ಸೇರಿದಂತೆ, ಅನ್ವಯಿಸುವ ಯಾವುದೇ ಮತ್ತು ಎಲ್ಲಾ ತೆರಿಗೆ ಕಾನೂನುಗಳನ್ನು ನೀವು ಪಾಲಿಸಬೇಕು. ಅನ್ವಯಿಸುವ ಯಾವುದೇ ತೆರಿಗೆಗಳನ್ನು ವರದಿ ಮಾಡುವುದು ಮತ್ತು ಪಾವತಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.

ಎಲ್ಲಾ ಮಾರಾಟಗಳು ಅಂತಿಮವಾಗಿರುತ್ತವೆ. ಮರುಪಾವತಿಗಾಗಿ ಖರೀದಿಗಳನ್ನು ಹಿಂಪಡೆಯಲು, ರದ್ದುಗೊಳಿಸಲು ಅಥವಾ ಹಿಂದಿರುಗಿಸಲು ಹೆಚ್ಚಿನ ಮಾಹಿತಿಗಾಗಿ Google Play ನ ಮರುಪಾವತಿ ನೀತಿಯನ್ನು ನೋಡಿ. Google ToS ನಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಸಂದರ್ಭವನ್ನು ಹೊರತುಪಡಿಸಿ Google Play ನ ಮರುಪಾವತಿ ನೀತಿ ಅಥವಾ ಪೂರೈಕೆದಾರರ ಮರುಪಾವತಿ ಕಾರ್ಯನೀತಿಗಳಲ್ಲಿ ಪ್ರತ್ಯೇಕವಾಗಿ ಹೇಳಿರದ ಹೊರತು, ಎಲ್ಲಾ ಮಾರಾಟಗಳು ಅಂತಿಮವಾಗಿರುತ್ತವೆ ಮತ್ತು ಹಿಂದಿರುಗಿಸುವಿಕೆ, ಬದಲಾವಣೆ ಅಥವಾ ಮರುಪಾವತಿಗೆ ಅನುಮತಿ ಇರುವುದಿಲ್ಲ. ಯಾವುದೇ ವಹಿವಾಟಿಗೆ ಬದಲಾವಣೆ, ಮರಳಿಸುವಿಕೆ ಅಥವಾ ಮರುಪಾವತಿಯನ್ನು ಒದಗಿಸಿದರೆ, ಆ ವಹಿವಾಟನ್ನು ಹಿಂತೆಗೆದುಕೊಳ್ಳಬಹುದು ಮತ್ತು ಆ ವಹಿವಾಟಿನ ಮೂಲಕ ನೀವು ಪಡೆದ ಕಂಟೆಂಟ್‌ಗೆ ಪ್ರವೇಶಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಸಬ್‌ಸ್ಕ್ರಿಪ್ಷನ್‌ಗಳು. ಸಬ್‌ಸ್ಕ್ರಿಪ್ಷನ್‌ಗಳ ಶುಲ್ಕವನ್ನು ಪ್ರತಿ ಬಿಲ್ಲಿಂಗ್ ಅವಧಿಯಲ್ಲಿ ವಿಧಿಸಲಾಗುತ್ತದೆ (ಸಾಪ್ತಾಹಿಕವಾಗಿ, ಮಾಸಿಕವಾಗಿ, ವಾರ್ಷಿಕವಾಗಿ ಅಥವಾ ಬೇರೆ ಅವಧಿಗೆ) ಮತ್ತು ಪ್ರತಿ ಬಿಲ್ಲಿಂಗ್ ಅವಧಿಯ ಆರಂಭಕ್ಕೂ 24 ಗಂಟೆಗಳಿಗಿಂತ ಮೊದಲಿನ ಅವಧಿಯಲ್ಲಿ ಶುಲ್ಕ ವಿಧಿಸಲಾಗುವುದಿಲ್ಲ.

(a) ಪ್ರಾಯೋಗಿಕ ಅವಧಿಗಳು. ನೀವು ಯಾವುದೇ ಕಂಟೆಂಟ್‌ಗೆ ನಿಗದಿತ ದರದಲ್ಲಿ ಸಬ್‌ಸ್ಕ್ರೈಬ್ ಮಾಡಿದಾಗ, ನಿರ್ದಿಷ್ಟ ಪ್ರಾಯೋಗಿಕ ಅವಧಿಯಲ್ಲಿ ನೀವು ಸಬ್‌ಸ್ಕ್ರಿಪ್ಷನ್ ಪ್ರಯೋಜನಗಳಿಗೆ ಉಚಿತವಾಗಿ ಪ್ರವೇಶಿಸಬಹುದು. ಈ ಅವಧಿಯ ನಂತರ, ನಿಮ್ಮ ಸಬ್‌ಸ್ಕ್ರಿಪ್ಷನ್ ಅನ್ನು ನೀವು ರದ್ದುಗೊಳಿಸುವವರೆಗೆ ನಿಮಗೆ ಶುಲ್ಕ ವಿಧಿಸಲಾಗುವುದು. ಶುಲ್ಕ ವಿಧಿಸುವುದನ್ನು ತಪ್ಪಿಸಲು, ಪ್ರಾಯೋಗಿಕ ಅವಧಿ ಮುಕ್ತಾಯವಾಗುವ ಮುನ್ನ ನೀವು ರದ್ದುಗೊಳಿಸಬೇಕು. ನಿಮ್ಮ ಪ್ರಾಯೋಗಿಕ ಅವಧಿಯನ್ನು ರದ್ದುಗೊಳಿಸಿದ ಬಳಿಕ, ಅನ್ಯಥಾ ಹೇಳಿರದ ಹೊರತು, ಕಂಟೆಂಟ್‍ಗೆ ಮತ್ತು ಯಾವುದೇ ಸಬ್‌ಸ್ಕ್ರಿಪ್ಷನ್ ಸೌಲಭ್ಯಗಳಿಗೆ ನೀವು ತಕ್ಷಣವೇ ಪ್ರವೇಶ ಕಳೆದುಕೊಳ್ಳುತ್ತೀರಿ. ಇಂತಹ ಪ್ರಾಯೋಗಿಕ ಅವಧಿಗಳ ಪ್ರವೇಶವು, ನಿರ್ದಿಷ್ಟ ಅವಧಿಯಲ್ಲಿ ಪ್ರತಿ ಬಳಕೆದಾರರಿಗೆ ನಿಗದಿತ ಸಂಖ್ಯೆಯ ಪ್ರಯೋಗಗಳಿಗೆ ಸೀಮಿತವಾಗಿರಬಹುದು ಅಥವಾ ಇತರ ನಿರ್ಬಂಧಗಳಿರಬಹುದು.

(b) ರದ್ದುಗೊಳಿಸುವಿಕೆಗಳು.ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ, ಅನ್ವಯಿಸುವ ಬಿಲ್ಲಿಂಗ್ ಅವಧಿ ಮುಕ್ತಾಯವಾಗುವ ಮೊದಲು ಯಾವುದೇ ಸಮಯದಲ್ಲಿ ನೀವು ಸಬ್‌ಸ್ಕ್ರಿಪ್ಷನ್ ಅನ್ನು ರದ್ದುಗೊಳಿಸಬಹುದು ಮತ್ತು ಆ ರದ್ದುಗೊಳಿಸುವಿಕೆಯು ಮುಂದಿನ ಅವಧಿಗೆ ಅನ್ವಯಿಸುತ್ತದೆ. ಉದಾಹರಣೆಗೆ, ನೀವು ಮಾಸಿಕ ಸಬ್‌ಸ್ಕ್ರಿಪ್ಷನ್ ಅನ್ನು ಖರೀದಿಸಿದರೆ, ಸಬ್‌ಸ್ಕ್ರಿಪ್ಷನ್‌ನ ಯಾವುದೇ ತಿಂಗಳಿನ ಯಾವುದೇ ಸಮಯದಲ್ಲಿ ನೀವು ಆ ಸಬ್‌ಸ್ಕ್ರಿಪ್ಷನ್ ಅನ್ನು ರದ್ದುಗೊಳಿಸಬಹುದು ಮತ್ತು ಆ ಸಬ್‌ಸ್ಕ್ರಿಪ್ಷನ್, ನಿಮ್ಮ ಆಗಿನ-ಪ್ರಸ್ತುತ ಬಿಲ್ಲಿಂಗ್ ಅವಧಿಯಲ್ಲಿರದ್ದಾಗುತ್ತದೆ. Google Play ನ ಮರುಪಾವತಿ ನೀತಿ ಯಲ್ಲಿ (ಉದಾಹರಣೆಗಾಗಿ, ಕಂಟೆಂಟ್ ದೋಷಮುಕ್ತವಾಗಿದ್ದರೆ) ಒದಗಿಸದ ಹೊರತು, ಪ್ರಸ್ತುತ ಬಿಲ್ಲಿಂಗ್ ಅವಧಿಗಾಗಿ ನೀವು ಮರುಪಾವತಿಯನ್ನು ಸ್ವೀಕರಿಸುವುದಿಲ್ಲ.

(c) ಮುದ್ರಣದ ಸಬ್‌ಸ್ಕ್ರೈಬರ್‌ಗಳಿಗೆ ವಿನಾಯಿತಿಗಳು. ನೀವು ಮುದ್ರಣದ ಸಬ್‌ಸ್ಕ್ರೈಬರ್ ಆಗಿದ್ದರೆ, ಕೆಲವು ನಿಯತಕಾಲಿಕೆ ಪೂರೈಕೆದಾರರು, Google Play ನಲ್ಲಿರುವ ನಿಯತಕಾಲಿಕೆ ಕಂಟೆಂಟ್‌ನ ಸಬ್‍ಸ್ಕ್ರಿಪ್ಷನ್ ಅನ್ನು ವಿನಾಯಿತಿ ದರದಲ್ಲಿ ಖರೀದಿಸಲು ಅವಕಾಶ ನೀಡಬಹುದು. ಆ ನಿಯತಕಾಲಿಕೆಯ ಮುದ್ರಣ ಸಬ್‌ಸ್ಕ್ರಿಪ್ಷನ್ ಅನ್ನು ರದ್ದುಗೊಳಿಸಿದರೆ ಅಥವಾ ನಿಮ್ಮ ಮುದ್ರಣ ಸಬ್‌ಸ್ಕ್ರಿಪ್ಷನ್‌ನ ಅವಧಿ ಮುಕ್ತಾಯವಾಗಿದ್ದು ನೀವು ಅದನ್ನು ನವೀಕರಿಸದಿದ್ದರೆ, Google Play ನಲ್ಲಿ ಆ ಕಂಟೆಂಟ್‌ಗಾಗಿ ನಿಮ್ಮ ವಿನಾಯಿತಿ ಸಬ್‌ಸ್ಕ್ರಿಪ್ಷನ್ ದರವನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ.

(d) ದರ ಹೆಚ್ಚಳ. ನೀವು ಸಬ್‍ಸ್ಕ್ರಿಪ್ಷನ್ ಖರೀದಿಸುವಾಗ, ನೀವು ಸಬ್‌ಸ್ಕ್ರೈಬ್ ಮಾಡಲು ಒಪ್ಪಿದ ಸಮಯದಲ್ಲಿ ಅನ್ವಯಿಸುವ ದರವನ್ನೇ ನಿಮಗೆ ಮೊದಲು ವಿಧಿಸಲಾಗುತ್ತದೆ. ಸಬ್‌ಸ್ಕ್ರಿಪ್ಷನ್‌ನ ದರವು ಆನಂತರ ಹೆಚ್ಚಾದರೆ, Google ನಿಮಗೆ ಸೂಚನೆ ನೀಡುತ್ತದೆ. ಈ ಹೆಚ್ಚಳವು, ಸೂಚನೆ ನೀಡಿದ ನಂತರ ನೀವು ಪಾವತಿಸಬೇಕಾದ ಸಮಯದಲ್ಲಿ ಅನ್ವಯಿಸುತ್ತದೆ ಮತ್ತು ಈ ಶುಲ್ಕವನ್ನು ವಿಧಿಸುವ ಮೊದಲು, ನಿಮಗೆ ಕನಿಷ್ಠ 30 ದಿನಗಳ ಮೊದಲೇ ಸೂಚನೆ ನೀಡಿರಬೇಕು. ನಿಮಗೆ 30 ದಿನಗಳಿಗಿಂತ ಮೊದಲು ಸೂಚನೆ ನೀಡದಿದ್ದರೆ, ಮುಂದಿನ ಪಾವತಿಯ ನಂತರದ ಪಾವತಿಯವರೆಗೆ ದರ ಹೆಚ್ಚಳವು ಅನ್ವಯಿಸುವುದಿಲ್ಲ. ಸಬ್‌ಸ್ಕ್ರಿಪ್ಷನ್‌ಗಾಗಿ, ನೀವು ಹೆಚ್ಚಿನ ದರವನ್ನು ಪಾವತಿಸಲು ಬಯಸದಿದ್ದರೆ, ಈ ನಿಯಮಗಳ ರದ್ದುಗೊಳಿಸುವಿಕೆ ವಿಭಾಗದಲ್ಲಿ ವಿವರಿಸಿದಂತೆ ನೀವು ಸಬ್‌ಸ್ಕ್ರಿಪ್ಷನ್ ಅನ್ನು ರದ್ದುಗೊಳಿಸಬಹುದು. ಹೀಗೆ ಮಾಡಿದರೆ, ಸಬ್‌ಸ್ಕ್ರಿಪ್ಷನ್‌ಗಾಗಿ ಹೆಚ್ಚಿನ ಮೊತ್ತವನ್ನು ನಿಮಗೆ ವಿಧಿಸಲಾಗುವುದಿಲ್ಲ, ಆದರೆ ಅದಕ್ಕಾಗಿ ನೀವು ಪ್ರಸ್ತುತ ಬಿಲ್ಲಿಂಗ್ ಅವಧಿ ಮುಕ್ತಾಯವಾಗುವ ಮೊದಲೇ ನಮಗೆ ತಿಳಿಸಿರಬೇಕು. ಪೂರೈಕೆದಾರರು ಸಬ್‌ಸ್ಕ್ರಿಪ್ಷನ್‌ನ ದರವನ್ನು ಹೆಚ್ಚಿಸಿದರೆ ಮತ್ತು ಸಮ್ಮತಿಯ ಅಗತ್ಯವಿದ್ದರೆ, ಹೊಸ ದರಕ್ಕೆ ನೀವು ಸಮ್ಮತಿಸದ ಹೊರತು Google, ನಿಮ್ಮ ಸಬ್‌ಸ್ಕ್ರಿಪ್ಷನ್ ಅನ್ನು ರದ್ದುಗೊಳಿಸಬಹುದು. ನಿಮ್ಮ ಸಬ್‌ಸ್ಕ್ರಿಪ್ಷನ್ ಅನ್ನು ರದ್ದುಗೊಳಿಸಿದರೆ ಮತ್ತು ಆನಂತರ ನೀವು ಪುನಃ ಸಬ್‌ಸ್ಕ್ರೈಬ್ ಮಾಡಲು ಬಯಸಿದರೆ, ಪ್ರಸ್ತುತ ಸಬ್‌ಸ್ಕ್ರಿಪ್ಷನ್ ದರವನ್ನೇ ನಿಮಗೆ ವಿಧಿಸಲಾಗುತ್ತದೆ.

4. ಹಕ್ಕುಗಳು ಮತ್ತು ನಿರ್ಬಂಧಗಳು

ಕಂಟೆಂಟ್ ಬಳಸಲು ಪರವಾನಗಿ. ವಹಿವಾಟನ್ನು ಪೂರ್ತಿಗೊಳಿಸಿದ ಬಳಿಕ ಅಥವಾ ಕಂಟೆಂಟ್‌ಗೆ ಅನ್ವಯಿಸುವ ಶುಲ್ಕವನ್ನು ಪಾವತಿಸಿದ ಬಳಿಕ, ಈ ನಿಯಮಗಳಲ್ಲಿ ಮತ್ತು ಸಂಬಂಧಿತ ಕಾರ್ಯನೀತಿಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವಂತೆ, ಅನ್ವಯಿಸುವ ಕಂಟೆಂಟ್‌ನ ಪ್ರತಿಗಳನ್ನು ನಿಮ್ಮ ಸಾಧನಗಳಲ್ಲಿ ಅಥವಾ ಅನ್ಯಥಾ ಅನುಮೋದಿಸಿರುವಂತೆ ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಗಾಗಿ ಮಾತ್ರ ಸಂಗ್ರಹಿಸಿಡಲು, ಅದಕ್ಕೆ ಪ್ರವೇಶ ಪಡೆಯಲು, ಅದನ್ನು ವೀಕ್ಷಿಸಲು, ಬಳಸಲು ಮತ್ತು ಪ್ರದರ್ಶಿಸಲು ನೀವು ಮಾತ್ರ ವಿಶೇಷವಲ್ಲದ ಹಕ್ಕನ್ನು ಹೊಂದಿರುತ್ತೀರಿ. ನಿಯಮಗಳ ಅನುಸಾರ Google Play ಮತ್ತು ಕಂಟೆಂಟ್‌ಗೆ ಸಂಬಂಧಿಸಿದಂತೆ ನಿಮಗೆ ಪ್ರತ್ಯೇಕವಾಗಿ ಒದಗಿಸಿರದ ಎಲ್ಲಾ ಹಕ್ಕುಗಳು, ಟೈಟಲ್ ಮತ್ತು ಹಿತಾಸಕ್ತಿಗಳನ್ನು ಕಾಯ್ದಿರಿಸಲಾಗಿದೆ. ಅಪ್ಲಿಕೇಶನ್‌ಗಳು ಹಾಗೂ ಗೇಮ್‌ಗಳ ನಿಮ್ಮ ಬಳಕೆಯನ್ನು, ನಿಮ್ಮ ಹಾಗೂ ಪೂರೈಕೆದಾರರ ನಡುವಿನ ಬಳಕೆದಾರ ಒಪ್ಪಂದದ ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳು ನಿಯಂತ್ರಿಸಬಹುದು.

ಪರವಾನಗಿ ನಿಯಮಗಳ ಉಲ್ಲಂಘನೆ. ನೀವು ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ, ಈ ಪರವಾನಗಿಯ ಅಡಿಯಲ್ಲಿ ನಿಮ್ಮ ಹಕ್ಕುಗಳು ತಕ್ಷಣವೇ ಕೊನೆಗೊಳ್ಳುತ್ತವೆ ಮತ್ತು ನೀವು Google Play, ಕಂಟೆಂಟ್ ಅಥವಾ ನಿಮ್ಮ Google ಖಾತೆಯನ್ನು ಪ್ರವೇಶಿಸುವುದನ್ನು, ನಿಮಗೆ ಮರುಪಾವತಿ ಮಾಡದೆಯೇ Google ಕೊನೆಗೊಳಿಸಬಹುದು.

ನಿರ್ಬಂಧಗಳು: ನೀವು ಹೀಗೆ ಮಾಡುವಂತಿಲ್ಲ:

ಥರ್ಡ್-ಪಾರ್ಟಿ ನಿಬಂಧನೆಗಳು. ಈ ನಿಯಮಗಳಲ್ಲಿ ವೈರುಧ್ಯವೇನೇ ಇದ್ದರೂ, ತಮ್ಮ ಕಂಟೆಂಟ್‌ನ ಪರವಾನಗಿಯನ್ನು Google ಗೆ ನೀಡುವ ಥರ್ಡ್-ಪಾರ್ಟಿಗಳು, ಈ ನಿಯಮಗಳ ಅಡಿಯಲ್ಲಿ, ಅವರ ಕಂಟೆಂಟ್‌ಗೆ ನೇರವಾಗಿ ಸಂಬಂಧಿಸಿದ, ಈ ನಿಯಮಗಳ ನಿರ್ದಿಷ್ಟ ನಿಬಂಧನೆಗಳಿಗೆ ("ಥರ್ಡ್-ಪಾರ್ಟಿ ನಿಬಂಧನೆಗಳು) ಸಂಬಂಧಿಸಿದಂತೆ ಉದ್ದೇಶಿತ ಥರ್ಡ್-ಪಾರ್ಟಿ ಫಲಾನುಭವಿಗಳಾಗಿರುತ್ತಾರೆ ಮತ್ತು ಇಂತಹ ಕಂಟೆಂಟ್‌ನಲ್ಲಿ ಅವರ ಹಕ್ಕುಗಳನ್ನು ಜಾರಿಗೆ ತರಲು ನೆರವಾಗುವ ಏಕೈಕ ಉದ್ದೇಶವನ್ನು ಇದು ಹೊಂದಿದೆ. ಅನುಮಾನಗಳನ್ನು ಪರಿಹರಿಸುವುದಕ್ಕಾಗಿ ಈ ಸ್ಪಷ್ಟನೆಯನ್ನು ನೀಡಲಾಗುತ್ತಿದೆ: ಥರ್ಡ್-ಪಾರ್ಟಿ ನಿಬಂಧನೆಗಳಿಗೆ ಹೊರತಾಗಿರುವ ಯಾವುದೇ ನಿಬಂಧನೆಗೆ ಸಂಬಂಧಪಟ್ಟಂತೆ, ಯಾವುದೇ ಪಕ್ಷಕ್ಕೂ ಈ ನಿಯಮಗಳಲ್ಲಿನ ಯಾವುದೇ ವಿಷಯವು ಥರ್ಡ್-ಪಾರ್ಟಿ ಫಲಾನುಭವಿ ಹಕ್ಕನ್ನು ಒದಗಿಸುವುದಿಲ್ಲ. ಈ ನಿಯಮಗಳಲ್ಲಿ ಉಲ್ಲೇಖದ ಮೂಲಕ ಅಳವಡಿಸಿರುವ ಅಥವಾ ಅಳವಡಿಸದೆಯೇ ಉಲ್ಲೇಖಿಸಬಹುದಾದ ಯಾವುದೇ ನಿಬಂಧನೆಗಳು ಅಥವಾ ಒಪ್ಪಂದಗಳನ್ನು ಇದು ಒಳಗೊಂಡಿರುತ್ತದೆ.

Play ಕಾರ್ಯನೀತಿಗಳು. Google Play ನಲ್ಲಿ ಅಭಿಪ್ರಾಯಗಳನ್ನು ಪೋಸ್ಟ್ ಮಾಡುವುದು ಈ ಮುಂದಿನ ಕಾರ್ಯನೀತಿಗಳಿಗೆ ಒಳಪಟ್ಟಿದೆ. ದುರ್ಬಳಕೆ ಅಥವಾ ಕಂಟೆಂಟ್ ಉಲ್ಲಂಘನೆಗಳ ಕುರಿತು ನೀವು ವರದಿ ಮಾಡಲು ಬಯಸುವಿರಾದರೆ, ಇಲ್ಲಿಕ್ಲಿಕ್ ಮಾಡಿ.

ದೋಷಯುಕ್ತ ಕಂಟೆಂಟ್. ನಿಮ್ಮ ಖಾತೆಯ ಮೂಲಕ ಕಂಟೆಂಟ್ ನಿಮಗೆ ಲಭ್ಯವಾದಾಗ, ಸಾಧ್ಯವಾದಷ್ಟು ಬೇಗನೆ ನೀವು ಕಂಟೆಂಟ್ ಅನ್ನು ಪರಿಶೀಲಿಸಬೇಕು ಮತ್ತು ಅದು ಹೇಳಿದಂತೆಯೇ ಕೆಲಸ ಮಾಡುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾವುದಾದರೂ ಸಮಸ್ಯೆಗಳು ಅಥವಾ ದೋಷಗಳು ಕಂಡುಬಂದರೆ ಸಾಧ್ಯವಾದಷ್ಟು ಬೇಗನೆ ನಮಗೆ ತಿಳಿಸಬೇಕು. ಹೆಚ್ಚಿನ ಮಾಹಿತಿಗಾಗಿ Google Play ಮರುಪಾವತಿ ಕಾರ್ಯನೀತಿಯನ್ನು ನೋಡಿ.

ಕಂಟೆಂಟ್ ತೆಗೆದುಹಾಕುವಿಕೆ ಅಥವಾ ಅಲಭ್ಯತೆ. ಬಾಡಿಗೆಗಾಗಿ ಖರೀದಿಸುವ ಸಂದರ್ಭದಲ್ಲಿ, ನೀವು ಆಯ್ಕೆ ಮಾಡಿದ ಅವಧಿಯವರೆಗೆ ಮತ್ತು ಇತರ ಸಂದರ್ಭಗಳಲ್ಲಿ, ಅಂತಹ ಕಂಟೆಂಟ್ ಅನ್ನು ನಿಮಗೆ ಒದಗಿಸುವ ಹಕ್ಕನ್ನು Google ಹೊಂದಿರುವವರೆಗೆ, ನೀವು ಖರೀದಿಸುವ ಅಥವಾ ಇನ್‌ಸ್ಟಾಲ್‌ ಮಾಡುವ ಕಂಟೆಂಟ್ Google Play ಮೂಲಕ ನಿಮಗೆ ಲಭ್ಯವಿರುತ್ತದೆ. ಇದು ನಿಯಮಗಳಿಗೆ ಒಳಪಟ್ಟಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ (ಉದಾಹರಣೆಗೆ, ಸಂಬಂಧಿತ ಹಕ್ಕುಗಳನ್ನು Google ಕಳೆದುಕೊಂಡರೆ, ಒಂದು ಸೇವೆ ಅಥವಾ ಕಂಟೆಂಟ್ ಅನ್ನು ಸ್ಥಗಿತಗೊಳಿಸಿದರೆ, ಪ್ರಮುಖ ಸುರಕ್ಷತಾ ಸಮಸ್ಯೆಗಳಿದ್ದರೆ ಅಥವಾ ಅನ್ವಯಿಸುವ ನಿಯಮಗಳು ಅಥವಾ ಕಾನೂನಿನ ಉಲ್ಲಂಘನೆಗಳು ನಡೆದಿದ್ದರೆ), ನೀವು ಖರೀದಿಸಿರುವ ಕೆಲವೊಂದು ಕಂಟೆಂಟ್ ಅನ್ನು Google ನಿಮ್ಮ ಸಾಧನದಿಂದ ತೆಗೆದುಹಾಕಬಹುದು ಅಥವಾ ಅದಕ್ಕೆ ನಿಮಗೆ ಪ್ರವೇಶ ಒದಗಿಸುವುದನ್ನು ಸ್ಥಗಿತಗೊಳಿಸಬಹುದು. Google Ireland Limited ನಿಂದ ಮಾರಾಟವಾದ ಕಂಟೆಂಟ್‌ಗಾಗಿ, ಸಾಧ್ಯವಾದಾಗ ಅಂತಹ ಯಾವುದೇ ತೆಗೆದುಹಾಕುವಿಕೆ ಅಥವಾ ನಿಲುಗಡೆಯ ಬಗ್ಗೆ ನಿಮಗೆ ಸೂಚನೆ ನೀಡಬಹುದು. ಇಂತಹ ತೆಗೆದುಹಾಕುವಿಕೆ ಅಥವಾ ಸ್ಥಗಿತಗೊಳಿಸುವಿಕೆಯ ಮೊದಲು ಕಂಟೆಂಟ್‌ನ ಪ್ರತಿಯನ್ನು ಡೌನ್‌ಲೋಡ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, Google ನಿಮಗೆ ಇವುಗಳಲ್ಲಿ ಒಂದನ್ನು ನೀಡಬಹುದು: (a) ಸಾಧ್ಯವಿದ್ದರೆ, ಬದಲಿ ಕಂಟೆಂಟ್ ಅನ್ನು ನೀಡಬಹುದು ಅಥವಾ (b) ಕಂಟೆಂಟ್‍ನ ದರದ ಪೂರ್ತಿ ಅಥವಾ ಆಂಶಿಕ ಮರುಪಾವತಿ ನೀಡಬಹುದು. Google ನಿಮಗೆ ಮರುಪಾವತಿ ಒದಗಿಸಿದರೆ, ಆ ಮರುಪಾವತಿಯು ನಿಮ್ಮ ಏಕೈಕ ಪರಿಹಾರವಾಗಿರುತ್ತದೆ.

ಬಹು-ಖಾತೆಗಳು. ವಿವಿಧ ಬಳಕೆದಾರ ಹೆಸರುಗಳಿರುವ ಹಲವು Google ಖಾತೆಗಳನ್ನು ನೀವು ಹೊಂದಿದ್ದರೆ, ಕೆಲವು ಪ್ರಕರಣಗಳಲ್ಲಿ ನೀವು ಕಂಟೆಂಟ್ ಅನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸಬಹುದು. ಅದರೆ, ಇದಕ್ಕಾಗಿ ನೀವು ಇವುಗಳಲ್ಲಿ ಪ್ರತಿಯೊಂದು ಖಾತೆಯ ಮಾಲೀಕತ್ವವನ್ನು ಹೊಂದಿರಬೇಕು ಮತ್ತು ಇಂತಹ ವರ್ಗಾವಣೆಗಳನ್ನು ಅನುಮತಿಸುವ ಸೂಕ್ತ ಸೇವೆಯ ವೈಶಿಷ್ಟ್ಯವನ್ನು Google ಸಕ್ರಿಯಗೊಳಿಸಿರಬೇಕು.

ಸಾಧನಗಳ ಪ್ರವೇಶದ ಮೇಲಿನ ಮಿತಿಗಳು. ಕಂಟೆಂಟ್‍ಗೆ ಪ್ರವೇಶ ಪಡೆಯಲು ನೀವು ಬಳಸಬಹುದಾದ ಸಾಧನಗಳು ಅಥವಾ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳ ಸಂಖ್ಯೆಯ ಮೇಲೆ Google, ಕಾಲಕಾಲಕ್ಕೆ ಮಿತಿಗಳನ್ನು ಹೇರಬಹುದು. Google Play ಚಲನಚಿತ್ರಗಳು ಮತ್ತು ಟಿವಿ/Google TV ಗಾಗಿ ಈ ಮಿತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ Google Play ಚಲನಚಿತ್ರಗಳು ಮತ್ತು ಟಿವಿ/Google TV ಬಳಕೆಯ ನಿಯಮಗಳನ್ನು ನೋಡಿ.

ಅಪಾಯಕಾರಿ ಚಟುವಟಿಕೆಗಳು. ಇವುಗಳಲ್ಲಿ ಯಾವುದೇ ಸೇವೆಗಳು ಅಥವಾ ಕಂಟೆಂಟ್ ಅನ್ನು ಅಣುಸ್ಥಾವರಗಳಲ್ಲಿ, ಜೀವಾಧಾರ ಸಿಸ್ಟಂಗಳಲ್ಲಿ, ತುರ್ತು ಸಂವಹನಗಳಲ್ಲಿ, ವೈಮಾನಿಕ ನ್ಯಾವಿಗೇಶನ್ ಅಥವಾ ಸಂವಹನ ಸಿಸ್ಟಂಗಳಲ್ಲಿ, ವೈಮಾನಿಕ ಟ್ರಾಫಿಕ್ ನಿಯಂತ್ರಣ ಸಿಸ್ಟಂಗಳಲ್ಲಿ ಅಥವಾ ಇಂತಹ ಇತರ ಚಟುವಟಿಕೆಗಳಲ್ಲಿ ಬಳಸಲು ಉದ್ದೇಶಿಸಿಲ್ಲ ಮತ್ತು ಈ ಸಂದರ್ಭಗಳಲ್ಲಿ ಸೇವೆ ಅಥವಾ ಕಂಟೆಂಟ್‌ನ ವೈಫಲ್ಯವು ಸಾವು, ವೈಯಕ್ತಿಕ ಗಾಯ ಅಥವಾ ತೀವ್ರವಾದ ದೈಹಿಕ ಅಥವಾ ಪರಿಸರ ಹಾನಿಗೆ ಕಾರಣವಾಗಬಹುದು.

Google Play ಚಲನಚಿತ್ರಗಳು ಮತ್ತು ಟಿವಿ/Google TV. Google Play ಚಲನಚಿತ್ರಗಳು ಮತ್ತು ಟಿವಿ/Google TVಯ ಪ್ರವೇಶ ಮತ್ತು ಬಳಕೆಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿ ಮತ್ತು ನಿರ್ಬಂಧಗಳ ಕುರಿತು ತಿಳಿಯಲು Google Play ಚಲನಚಿತ್ರಗಳು ಮತ್ತು ಟಿವಿ/Google TV ಬಳಕೆಯ ನಿಯಮಗಳನ್ನು ನೋಡಿ.