ಆಳ್ವಾಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಅಸಹಜ ಸಾವಿನ ತನಿಖೆಗೆ ಒತ್ತಾಯಿಸಿ SFI ರಾಜ್ಯವ್ಯಾಪಿ ಪ್ರತಿಭಟನೆ. ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಸತಿ ನಿಲಯದಲ್ಲಿ ಕಾವ್ಯಶ್ರೀ ಎಂಬ ವಿದ್ಯಾರ್ಥಿನಿಯ ಅಸಹಜ ಸವಿನ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ಮಾಡುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿಯು ಆಗ್ರಹಿಸುತ್ತದೆ. ರಾಜ್ಯದಲ್ಲಿ ಕೋಮುಗಲಭೆ ಹಾಗೂ ಮಹಿಳೆ, ವಿದ್ಯಾರ್ಥಿನಿಯರ ಅಸಹಜ ಸಾವಿನಿಂದ ಪದೇ ಪದೇ ಸುದ್ದಿಯಲ್ಲಿರುವುದು ದಕ್ಷಿಣ ಕನ್ನಡ ಜಿಲ್ಲೆ. ಈಗ ಮತ್ತೊಂದು ವಿದ್ಯಾರ್ಥಿನಿಯ ಅಸಹಜ ಸಾವಿನಿಂದ ಮತ್ತೆ ಮಂಗಳೂರು ಸುದ್ದಿಯಲ್ಲಿದೆ. ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ 10ನೇ ತರಗತಿಯ ಓದುತ್ತಿದ್ದ ರಾಷ್ಟ್ರ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಕಾವ್ಯಾ ಎಂಬ ವಿದ್ಯಾರ್ಥಿನಿಯು ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‍ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾಳೆ, ಈ ಸಾವಿನ ಪ್ರಕರಣವನ್ನು ಮುಚ್ಚಿ ಹಾಕಲು ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಜುಲೈ 20 ರಂದು ಸಾವನ್ನಪ್ಪಿರುವ ಕಾವ್ಯಾ ಸಾವು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬಂತಹ ಮಾತು ಮತ್ತೊಮ್ಮೆ ಸಾಬೀತಾಗಿದೆ. ಕಾವ್ಯಾ ವಸತಿನಿಯಲದಲ್ಲಿ ಸಾವನ್ನಪ್ಪಿದ್ದು ಹಲವು ಅನುಮಾಣಗಳಿಗೆ ಎಡೆಮಾಡಿ ಕೊಟ್ಟಿದೆ, ವಸತಿ ನಿಲಯದಲ್ಲಿ ಕಾವ್ಯಾ ನೇಣು ಹಾಕಿಕೊಳ್ಳಲು ಸೀರೆ ಎಲ್ಲಿಂದ ಬಂತು, ಕಾವ್ಯಾ ಸಾವಿನ ಸುದ್ದಿ ಅವರ ಪೋಷಕರಿಗೆ ತಿಳಿಸಿದ ಕೇವಲ ಅರ್ಧಗಂಟೆಯ ಒಳಗೆ ಪೋಷಕರು ಬರುವ ಮುಂಚೆನೆ ವಿದ್ಯಾರ್ಥಿನಿಯ ಶವವನ್ನು ಶವಾಗಾರದಲ್ಲಿ ಇಟ್ಟಿದ್ದು ಯಾಕೆ, ಮುಂಜಾನೆ 4 ಗಂಟೆಗೆ ವಿದ್ಯಾರ್ಥಿನಿಯನ್ನು ತರಬೇತಿಗೆ ದೈಹಿಕ ಶಿಕ್ಷಕರು ಕರೆದುಕೊಂಡು ಹೋಗಿದ್ದು ಯಾಕೆ ಎಂಬ ಹಲವು ಪ್ರಶ್ನೆಗಳ ಕಾವ್ಯಾಳ ಅಸಹಜ ಸಾವಿನ ಹಿಂದೆ ಇವೆ. ಪೊಲೀಸರು ಮಹಜರ ಮಾಡಿದ ಮೇಲೆಯ ಶವವನ್ನು ಶವಗಾರಕ್ಕೆ ಕಳುಹಿಸಬೇಕು ಆದರೆ ಇಲ್ಲಿ ಆಳ್ವಾಸ ಆಡಳಿತ ಮಂಡಳಿ ತಾವೇ ಶವವನ್ನು ಶವಗಾರಕ್ಕೆ ಕಳುಹಿಸುವ ಮೂಲಕ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಕಾವ್ಯಾಳ ಸಾವಿನ ಸುತ್ತ ಹಲವಾರು ಅನುಮಾನಗಳಿವೆ ಇದರ ಸಮಗ್ರ ತನಿಖೆಆಗಬೇಕು. ಮೂಡಬಿದೆಯ ಪೊಲೀಸರ ಮೇಲೆ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಪ್ರಭಾವ ಬೀರುವ ಸಾಧ್ಯತೆ ಇದೆ ಹಾಗಾಗಿ ಮೂಡಬಿದೆಯ ಪೊಲೀಸರ ಮೇಲೆನಮಗೆ ನಂಬಿಕೆ ಇಲ್ಲ. ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಬೇಕು ಎಂದು ಎಸ್.ಎಫ್.ಐ ಒತ್ತಾಯಿಸುತ್ತದೆ. ಮಂಗಳೂರಿನಲ್ಲಿ ಇದು ಮೊದಲ ಘಟನೆಯಲ್ಲ ಈ ಹಿಂದೆ ಕೂಡಾ ಸೌಜನ್ಯ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ, ಮತ್ತು ಪದ್ಮಶ್ರೀ ಎಂಬ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅನೇಕ ವಿದ್ಯಾರ್ಥಿನಿಯರ, ಮಹಿಳೆಯರ ಸಾವು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಇಲ್ಲಿಯವರೆಗೂ ವಿದ್ಯಾರ್ಥಿನಿಯರ ಅಸಹಜವಾಗಿ ಸಾವಿನ ಅನೇಕ ಪ್ರಕರಣಗಳು ಇವೆ, ಈ ಕುರಿತು ರಾಜ್ಯ ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಧನದಾಹಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯಾದ್ಯಂತ ಹೋರಾಟ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.
Read more
4.8
59 total
5
4
3
2
1
Loading...

What's New

1.Donate Button Integration
2.Login/Logout
Read more

Additional Information

Updated
August 16, 2017
Size
5.2M
Installs
500+
Current Version
1.1
Requires Android
4.1 and up
Content Rating
Interactive Elements
Users Interact
Permissions
Offered By
Diaprix Web Solutions Pvt. Ltd.
Developer
GF12, 342/5 5th Cross Akshay Nagar Bannerghatta Road Bangalore
©2018 GoogleSite Terms of ServicePrivacyDevelopersArtistsAbout Google|Location: United StatesLanguage: English (United States)
By purchasing this item, you are transacting with Google Payments and agreeing to the Google Payments Terms of Service and Privacy Notice.