ಮೊಬೈಲ್ ಆಪ್ ಆಯಿಲ್ ಪಾಮ್ ಕ್ರಾಪ್ ಡಾಕ್ಟರ್ ಒಂದು ಸಂವಾದಾತ್ಮಕ ಅಪ್ಲಿಕೇಶನ್ ಆಗಿದ್ದು ಅದು ಮಾಹಿತಿಯನ್ನು ಸುಲಭವಾಗಿ ಮತ್ತು ಸರಿಯಾದ ರೀತಿಯಲ್ಲಿ ತಾಳೆ ಬೆಳೆಗಾರರಿಗೆ ಮತ್ತು ಮದ್ಯಸ್ತಗಾರರಿಗೆ ಪ್ರಸಾರ ಮಾಡುತ್ತದೆ. ಇದು ರೈತರು ಅಥವಾ ಬಳಕೆದಾರರಿಗೆ ಐ. ಸಿ. ಏ. ಆರ್ –ಐ.ಐ.ಓ.ಪಿ.ಆರ್ ಗೆ ಪ್ರಶ್ಣೆಗಳನ್ನು ಕಳುಹಿಸಲು ಮತ್ತು ಅಗತ್ಯ ಮಾಹಿತಿಯನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.
ಈ ಅಪ್ಲಿಕೇಶನ್ ನಾಲ್ಕು ಮಾಡ್ಯೂಲ್ಗಳನ್ನು ಹೊಂದಿದೆ, ಅಂದರೆ 1) ಕೀಟಗಳು, ರೋಗಗಳು ಮತ್ತು ಅಸ್ಚಸ್ಥತೆಗಳು 2) ರಸಗೊಬ್ಬರ ಲೆಕ್ಕಾಚಾರಗಳು 3) ವಿಚಾರಣೆ 4) ಬೆಳೆ ವಿಡೀಯೋಗಳು. ಈ ಆಪ್ ಸೈಡ್ ಮೆನುವನ್ನು ಹೊಂದಿದ್ದು, ಇದರಲ್ಲಿ ಹೋಮ್, ಆಯಿಲ್ ಪಾಮ್ ಕ್ರಾಪ್ ಡಾಕ್ಟರ್ ಬಗ್ಗೆ, ನಮ್ಮನ್ನು ಸಂಪರ್ಕಿಸಿ ಮತ್ತು ಲಾಗ್ ಔಟ್ ಅಯ್ಕೆಗಳನ್ನು ಪ್ರದರ್ಶಿಸುತ್ತದೆ.. ಮೊಬೈಲ್ ಅಪ್ಮಿಕೇಶನ್ನ ಸ್ಥಾಪನೆ ಆಯಿಲ್ ಪಾಮ್ ಕ್ರಾಪ್ ಡಾಕ್ಟರ್ ನೋಂದಣಿಯೋಂದಿಗೆ ಪ್ರಾರಂಭವಾಗುತ್ತದೆ, ಇದರಲ್ಲಿ ರೈತ ಅಥವಾ ಬಳಕೆದಾರನು ಅವನ ಅಥವಾ ಅವಳ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಪುಟದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯನ್ನು ಪೂರ್ಣಗೊಳಿಸಿದ ನಂತರ ಲಾಂಚಿಂಗ್ ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ ನಂತರ ಡ್ಯಾಷ್ ಬೋರ್ಡ್ ಕಾಣಿಸಿಕೊಳ್ಳುತ್ತದೆ, ಇದರಲ್ಲಿ ಕೀಟಗಳು, ರೋಗಗಳು ಮತ್ತು ಅಸ್ವಸ್ಥತೆಗಳು; ರಸಗೊಬ್ಬರ ಲೆಕ್ಕಾಚಾರ; ವಿಚಾರಣೆ ಮತ್ತು ಬೆಳೆ ವೀಡಿಯೋಗಳು ಎಂಬ ನಾಲ್ಕು ಅಯ್ಕೆಗಳನ್ನು ಪ್ರದರ್ಶಿಸುತ್ತದೆ. ಕೀಟಗಳು, ರೋಗಗಳು ಮತ್ತು ಅಸ್ವಸ್ಥತೆಗಳ ಕುರಿತಾದ ಮಾಡ್ಯೂಲ್ ತಾಳೆ ಬೆಳೆ ಕೀಟಗಳು, ರೋಗಗಳ ಚಿತ್ರಗಳನ್ನು ತೋರಿಸುತ್ತದೆ. ನಿರ್ದಿಷ್ಟ ಚಿತ್ರದ ಆಯ್ಕೆಯ ಮೇಲೆ ನಿರ್ದಿಷ್ಟ ಕೀಟ, ರೋಗ ಮತ್ತು ಕೊರತೆಯ ರೋಗಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. ವಿಡೀಯೊ ಕ್ಲಿಕ್ ಮಾಡಿದರೆ ವೀಡಿಯೋ ಕ್ಲಿಪ್ ವೀಕ್ಷಿಸುವ ಆಯ್ಕೆ ಸಹ ಲಭ್ಯವಿದೆ.
ರಸಗೊಬ್ಬರ ಲೆಕ್ಕಾಚಾರದ ಮಾಡ್ಯೂಲ್ ಆಯ್ದ ರಸಗೊಬ್ಬರಗಳ ಆಧಾರದ ಮೇಲೆ ಹಾಕಬೇಕಾದ ಗೊಬ್ಬರದ ಪ್ರಮಾಣವನ್ನು ತೋರಿಸುತ್ತದೆ. ಗೊಬ್ಬರದ ಪ್ರಮಾಣವನ್ನು ಪ್ರತಿ ಗಿಡಕ್ಕೆ, ಅಥವಾ ಪ್ರತಿ ಎಕರೆಗೆ ಅಥವಾ ಪ್ರತಿ ಹೆಕ್ಟೇರ್ ಆದಾರದ ಮೇಲೆ ಕೂಡ ತೋರಿಸುತ್ತದೆ. ಇದು ಒಟ್ಟು ಗೊಬ್ಬರದ ಪ್ರಮಾಣವನ್ನು ಪೂರ್ತಿ ಪ್ರದೇಶಕ್ಕೆ ಕೂಡ ಪ್ರದರ್ಶಿಸುತ್ತದೆ.
ಚಿತ್ರ ಮತ್ತು ವಿಡೀಯೋ ಜೊತೆಗೆ ಸಂದೇಶ ಮತ್ತು ರೆಕಾರ್ಡಿಂಗ್ ರೂಪದಲ್ಲಿ ವಿಚಾರಣೆಯನ್ನು ಐ.ಸಿ.ಎ.ಆರ್-ಐ.ಐ.ಓ.ಪಿ.ಆರ್ ಗೆ ಕಳುಹಿಸಬಹುದು. ಈ ಪ್ರಶ್ಣೆಗಳಿಗೆ ಐ.ಐ.ಓ.ಪಿ.ಆರ್ ಉತ್ತರಿಸುತ್ತದೆ. ಚಾಟ್ ಮಾಡಲು ಕೂಡ ಈ ಆಪ್ ಅನುವು ಮಾಡಿಕೊಡುತ್ತದೆ.
ತಾಳೆ ಬೆಳೆಯಲ್ಲಿ ಶಿಫಾರಸ್ಸು ಮಾಡಿದ ಅಭ್ಯಾಸಗಳನ್ನು ವೀಕ್ಷಿಸಲು ಕಿರು ವೀಡಿಯೋ ತುಣುಕುಗಳನ್ನು ಸಹ ಒದಗಿಸಲಾಗಿದೆ.
ಆಪ್ ನೋಂದಣಿ ಮತ್ತು ವಿಚಾರಣೆಯನ್ನು ಕಳಿಸುವ ಸಮಯದಲ್ಲಿ ಇಂಟರ್ನೆಟ್ ಸಂಪರ್ಕದ ಅಗತ್ಯವಿರುತ್ತದೆ. ಆಪ್ನ ಇತರ ಚಟುವಟಿಕೆಗಳು ಆಫ್ ಲೈನ್ನಲ್ಲಿಯು ಕಾರ್ಯನಿರ್ವಹಿಸುತ್ತವೆ.