kkneelakanth@gmail.com
ಇವರು ಮೂಲತಃ ಹಾವೇರಿ ಜಿಲ್ಲೆ, ಹಾನಗಲ್ಲು ತಾಲೂಕಿನ ಬಾಳಂಬೀಡ ಗ್ರಾಮದವರಾಗಿದ್ದು, ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ ಪದವಿಯನ್ನು ಮಾಡಿದ್ಅರೆ. ಪ್ರಸ್ತುತ ಐಟಿ ಉದ್ಯಮಕ್ಷೇತ್ರದಲ್ಲಿ ವೃತ್ತಿ ಹೊಂದಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ, ಸಂಸ್ಕೃತ ಸಾಹಿತ್ಯಪ್ರಕಾರಗಳಲ್ಲಿ ಆಸಕ್ತಿ ಹೊಂದಿದ್ದು, ಛಂದೋಬದ್ಧ ಪದ್ಯ-ಕಾವ್ಯರಚನೆ, ಪ್ರಬಂಧಲೇಖನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆ, ಸಂಗೀತ ಮತ್ತಿತರ ಲಲಿತಕಲೆಗಳಲ್ಲಿಯೂ ಆಸಕ್ತಿ ಹೊಂದಿರುತ್ತಾರೆ. ಈ ವರೆಗೆ ಗಂಗಾತರಂಗಿಣಿ, ಸುಧಾಸುಪರ್ಣೀಯಮ್ ಕಾವ್ಯಗಳನ್ನೂ, ಹಲವು ಲಲಿತಪ್ರಬಂಧಗಳನ್ನೂ ರಚಿಸಿದ್ದಾರೆ
hmanjub@gmail.com
ಇವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಅಜ್ಜೀಬಳ ಬಾಳಗಾರ ಊರಿನವರು. ಇನ್ಫಾರ್ಮೇಶನ್ ಸೈನ್ಸ್ ವಿಭಾಗದಲ್ಲಿ ಇಂಜನಿಯರಿಂಗ್ ಅಧ್ಯಯನ ಮುಗಿಸಿ, ಪ್ರಸ್ತುತ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಳಗನ್ನಡದ, ಸಂಸ್ಕೃತದ ಅಭಿಜಾತ ಸಾಹಿತ್ಯದಲ್ಲಿ ಆಸಕ್ತರಾಗಿದ್ದು ಹಳಗನ್ನಡದಲ್ಲಿ ಛಂದೋಬದ್ಧವಾದ ಪದ್ಯರಚನೆಯಲ್ಲಿ ವಿಶೇಷ ಪರಿಶ್ರಮವನ್ನು ಹೊಂದಿದ್ದಾರೆ. ಸ್ವತಃ ಅನೇಕ ಕಾವ್ಯಗಳನ್ನು ರಚಿಸಿದ್ದಾರೆ. ಗರುಡನ ಕಥೆಯನ್ನು ಆಧರಿಸಿ ಬರೆದ ವೈನತೇಯವಿಜಯಂ ಪ್ರಮುಖವಾದದ್ದು. ಹಲವಾರು ಅವಧಾನಗಳಲ್ಲಿ ಪೃಚ್ಛಕರಾಗಿ ಭಾಗವಹಿಸಿದ್ದಾರೆ. ಡಿವಿಜಿ ಅವರ ಜ್ಞಾಪಕಚಿತ್ರಶಾಲೆಯ ಕೆಲವು ಭಾಗಗಳ ಇಂಗ್ಲಿಷ್ ಅನುವಾದ ಮಾಡುವಲ್ಲಿ ಯೋಗದಾನವನ್ನಿತ್ತಿದ್ದಾರೆ.
koppalatota@gmail.com
ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಪ್ಪಲತೋಟದವರು. ಬಿ.ಇ (ಮೆಕ್ಯಾನಿಕಲ್) ಎಂ.ಎ (ಸಂಸ್ಕೃತ) ಪದವಿಗಳನ್ನು ಪಡೆದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿಯಲ್ಲಿದ್ದಾರೆ. ಕನ್ನಡ ಸಂಸ್ಕೃತ ತೆಲುಗು ಭಾಷೆಗಳ ಅಭಿಜಾತಸಾಹಿತ್ಯದಲ್ಲಿ ಆಸಕ್ತರು. ಹಳಗನ್ನಡದಲ್ಲಿ ವಿಶೇಷ ಪರಿಶ್ರಮ. ಕನ್ನಡದ ಪ್ರಮುಖ ಅಷ್ಟಾವಧಾನಿಗಳಲ್ಲಿ ಒಬ್ಬರು. ಹಳಗನ್ನಡದ ಕಾವ್ಯಗಳು, ಕಥೆ, ಸಣ್ಣಕಥೆ, ಕಾದಂಬರಿ, ಲಲಿತಪ್ರಬಂಧ ಮೊದಲಾದ ಹಲವು ಪ್ರಕಾರದ ಸಾಹಿತ್ಯದಲ್ಲಿ ಕೃಷಿ ನಡೆಸಿದ್ದಾರೆ. ಹಲವು ಕಥೆಗಳು ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಶ್ರೀರಾಮನಿರ್ಯಾಣಂ, ಮಧುವನಮರ್ದನಂ (೨೦೧೮), ಅಗಸ್ತ್ಯಚರಿತೆ (೨೦೨೦), ವೈನತೇಯವಿಜಯಂ, ಸೌಂದರಾನಂದಂ (೨೦೨೧) ಮೊದಲಾದವು ಇವರು ಬರೆದ ಖಂಡಕಾವ್ಯಗಳು. ರಾಸಭಶತಕಂ, ಧೂರ್ತದೂತಂ ವಿಡಂಬನಕಾವ್ಯಗಳು. ಸಮಯದ ಸರ್ಕಲ್ (೨೦೧೧) ಮೊದಲ ಪ್ರಕಟಿತ ಕಾದಂಬರಿ. ಸ್ತ್ರೀಪರ್ವ (೨೦೨೨) ಪೌರಾಣಿಕ-ಕಾದಂಬರಿ. ಹಾಹಾಹೂಹೂ (ತೆಲುಗಿನ ಕವಿ ವಿಶ್ವನಾಥ ಸತ್ಯನಾರಾಯಣ ಅವರ ಕಾದಂಬರಿ ಅನುವಾದ- ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ) ಸಾಗರಘೋಷ (ತೆಲುಗಿನ ಮಹಾಸಹಸ್ರಾವಧಾನಿ ಗರಿಕಿಪಾಟಿ ನರಸಿಂಹರಾವ್ ಅವರ ಕಾವ್ಯದ ಅನುವಾದ- ೨೦೨೩ ) ೨೧ ಒಳ್ಳೆಯ (ತನದ) ಕಥೆಗಳು (ಯಂಡಮೂರಿ ಸಹೋದರರ ತೆಲುಗು ಕಥಾಸಂಕಲನದ ಅನುವಾದ)