ಕಣೇ ‘ಲಾ ನನ್ನ ಭಿತ್ತಿಯ ಗುರುತಾಗಿದ್ದು ಹೀಗೆ. ಹೀಗೆ ಬರೆದ ಹಲವು ಪದ್ಯ(ದಂಥವು)ಗಳಲ್ಲಿ ನೂರಾಒಂದನ್ನು ಆಯ್ದು ಇ – ಪುಸ್ತಕ ಮಾಡಿದ್ದೇನೆ.
“ಹೆಸರಿಲ್ಲದಿರುವುದು ಮಾತ್ರವಲ್ಲ, ಹಲವು ಹೆಸರುಗಳನ್ನು ಇಟ್ಟುಕೊಳ್ಳೋದು ಕೂಡಾ ಅನಾಮಿಕರಾಗುವ ದಾರಿ” ಅನ್ನೋದು ನನ್ನ ನಂಬಿಕೆ. ಹಾಗೆಂದೇ ಮತ್ತೂ ಒಂದು ಹೆಸರಿಟ್ಟುಕೊಳ್ಳಬೇಕು ಅನ್ನಿಸಿದಾಗ ‘ಅಲಾವಿಕಾ’ ಹೊಳೆಯಿತು"