ಕಂಬಿ ಹಿಂದಿನ ಕತೆಗಳು - Kambi hindina kategalu

Ashok K R
4.7
6 reviews
Ebook
167
Pages

About this ebook

 ಇಲ್ಲಿರುವ ಕತೆ ರೂಪದ ಬರಹಗಳು ನಾನು ನೇರವಾಗಿ ಕಂಡು ಕೇಳಿದ ಒಬ್ಬೊಬ್ಬ ಬಂದಿಯ ನೈಜ ಅನುಭವಗಳು. ಅವರ ಹೆಸರುಗಳು ಸ್ಥಳಗಳು ಮಾತ್ರ ಬದಲಾಗಿವೆ , ಅಷ್ಟೆ. ನಮ್ಮ ಸಮಾಜದಲ್ಲಿ ಮತ್ತು ಅಧಿಕಾರದ ಅಂಗಗಳಲ್ಲಿ ಇರುವ ಪರಿಸ್ಥಿತಿಯ ಬಲಿಪಶುಗಳಾಗಿ ಜೀವನವನ್ನು ನರಕವನ್ನಾಗಿಸುವ ಲಕ್ಷಾಂತರ ಕೋಟ್ಯಾಂತರ ಜನರ ಪ್ರಾತಿನಿಧಿಕವೆನ್ನಬಹುದಾದ ಹತ್ತಿಪ್ಪತ್ತು ಬರಹಗಳು ಇಲ್ಲಿವೆ ಎಂದುಕೊಂಡಿದ್ದೇನೆ. ನನ್ನ ಏಳು ವರ್ಷಗಳ ಸೆರೆಮನೆ ವಾಸದಲ್ಲಿ ಹತ್ತು ಹಲವು ಹಿನ್ನೆಲೆಯಿಂದ ಬಂದವರು ಸೆರೆವಾಸ ಅನುಭವಿಸುತ್ತಿರುವುದನ್ನು ಕರ್ನಾಟಕದ ಉದ್ದಗಲಕ್ಕೆ ನೋಡಿದ್ದೇನೆ. ಅವರ ಮತ್ತು ಅವರ ಹಳ್ಳಿಗಳ ಕತೆಗಳನ್ನು ಕೇಳಿದ್ದೇನೆ. ಇದರಲ್ಲಿ ಬಹುತೇಕರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಅದರಲ್ಲೂ ಬಡವರೇ ಹೆಚ್ಚು. ಗ್ರಾಮೀಣ ರೈತಾಪಿ ಹಿನ್ನೆಲೆಯವರು ಸಾಕಷ್ಟಿದ್ದಾರೆ. ಮದ್ಯಮ ವರ್ಗದವರು ಒಂದಷ್ಟು ಜನರು ಇದ್ದಾರೆ. ಆದರೆ ಮೇಲ್ಜಾತಿ ಮೇಲ್ವರ್ಗದ ಜನ ಮಾತ್ರ ಬೆರೆಳೆಣಿಕೆಯಷ್ಟು ಮಾತ್ರ. ಕರ್ನಾಟಕದಲ್ಲಿ ಸುಮಾರು ಹದಿನಾಲ್ಕು ಸಾವಿರ ಜನರನ್ನು ಸೆರೆಮನೆಯಲ್ಲಿಡಲಾಗಿದೆ. ಅದರಲ್ಲಿ ನೂರಾರು ಮಹಿಳೆಯರಿದ್ದಾರೆ. ಆ ತಾಯಂದಿರಿಗೆ ಹುಟ್ಟಿರುವ ಒಂದೇ ಕಾರಣಕ್ಕೆ ಹಲವು ಪುಟ್ಟ ಮಕ್ಕಳೂ ಕೂಡ ಸೆರೆವಾಸದಲ್ಲಿದ್ದಾರೆ - naMdakumAr.ke.

4.7
6 reviews
Vishwanath Bm
September 16, 2018
ಎಲ್ಲವನ್ನೂ ಒಂದು ಕಡೆ ಸೇರಿಸಿ ಒಳ್ಳೆ ಕೆಲಸ ಮಾಡಿದ್ದೀರಿ ಸರ್..
3 people found this review helpful
Did you find this helpful?
ganesh puttur
September 16, 2018
ನೋವುಂಡ ಹಲವಾರು ಶೋಷಿತರ ಹಾಗೂ ಜ್ಯಾತ್ಯತೀತ ಪರ ಕಾಳಜಿಗಾಗಿ ನಿಮಗೆ ಧನ್ಯವಾದಗಳು
2 people found this review helpful
Did you find this helpful?
gnanam productions
September 17, 2018
Must read
1 person found this review helpful
Did you find this helpful?

About the author

 ನಂದಕುಮಾರ್ ಕೆ. ಎನ್. ಇವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸೋಮಲಾಪುರ ಎಂಬ ಮಲೆನಾಡಿನ ಹಳ್ಳಿಯ ಕುಂಬ್ರಿಉಬ್ಬು ಎಂಬ ಸ್ಥಳ. ಕಾಲೇಜು ಪದವಿ ಶಿಕ್ಷಣ ಮುಗಿಯವ ಹಂತದಲ್ಲಿಯೇ ಸಾಮಾಜಿಕ ಚಳವಳಿಯಲ್ಲಿ ತೊಡಗಿದವರು. ಪತ್ರಕರ್ತರಾಗಿ ಕೆಲಸ ಮಾಡಿದವರು. 1988-89ರಿಂದ ನಾಡಿನ ಪ್ರಮುಖ ಚಳವಳಿಗಳಲ್ಲಿ ನೇರವಾಗಿ ಇಳಿದು ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಾ ಬಂದವರು.. ಪರಿಸರ, ಕನ್ನಡ ರಾಷ್ಟ್ರೀಯತೆ, ವಿದ್ಯಾರ್ಥಿ, ರೈತ, ದಲಿತ,, ಆದಿವಾಸಿ, ಮಹಿಳಾ, ಹೀಗೆ ಹಲವು ಚಳವಳಿಗಳ ನಾಯಕತ್ವದಲ್ಲಿ ಒಬ್ಬರಾಗಿದ್ದವರು. ಕೊಪ್ಪದ ಗುಬ್ಬಗದ್ದೆ ಎಂಬಲ್ಲಿ ಕಾಡು ಉಳಿಸಲು ನಡೆದ ಹೋರಾಟ, ವಿದ್ಯಾರ್ಥಿಗಳ ಫೀ ಹೆಚ್ಚಳದ ವಿರುದ್ಧ, ಹಾಸ್ಟೆಲ್ ಇನ್ನಿತರ ಸೌಲಭ್ಯಗಳಿಗಾಗಿನ ಹೋರಾಟ, ಕಾವೇರಿ ನದಿನೀರಿನ ಹಂಚಿಕೆಯ ಒಡೆದಾಳುವ ಕುತಂತ್ರಗಳನ್ನು ಬಯಲಿಗೆಳೆದು ನಡೆದ ಹೋರಾಟ, ತುಂಗಾ ನದಿ ಮೂಲದ ಉಳಿವಿಗಾಗಿನ ಹೋರಾಟ, ಪಶ್ಚಿಮ ಘಟ್ಟಕ್ಕೆ ಮಾರಕವಾಗಿದ್ದ ಗಣಿಗಾರಿಕೆ ವಿರುದ್ಧದ ಹೋರಾಟ, ಬೀದರಿನ ಕೊಳಾರ ಕೈಗಾರಿಕಾ ಮಾಲಿನ್ಯ ವಿರೋಧೀ ಹೋರಾಟ, ರಾಯಚೂರಿನ ರೈತ ಕೂಲಿಗಳ ಹೋರಾಟ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಅಲ್ಲಿನ ಅದಿವಾಸಿಗಳೂ ಸೇರಿದಂತೆ ಜನರನ್ನೆಲ್ಲಾ ಒಕ್ಕಲೆಬ್ಬಿಸುವುದರ ವಿರುದ್ಧದ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸಿದವರು. ಸುಮಾರು ಮೂರು ದಶಕಗಳಿಂದ ಸಾಮಾಜಿಕ ಚಳವಳಿಯ ಭಾಗವಾಗಿರುವವರು.

ಈ ಕಾರಣಕ್ಕಾಗಿಯೇ ಸರಕಾರ ಇವರನ್ನು ಮಾವೋವಾದಿಯೆಂದು 2010ರಲ್ಲಿ ಬಂಧಿಸಿ ಹತ್ತಾರು ಪ್ರಕರಣಗಳನ್ನು ರಾಜ್ಯದ ವಿವಿದೆಡೆ ದಾಖಲಿಸಿ ಸೆರಮನೆಯಲ್ಲಿ ಇಟ್ಟಿತ್ತು. ನ್ಯಾಯಾಲಯಗಳಿಂದ ಎಲ್ಲಾ ಪ್ರಕರಣಗಳಲ್ಲಿ ಖುಲಾಸೆಯಾಗಿ ಏಳು ವರ್ಷಗಳ ಕಾಲ ವಿಚಾರಣೆಯ ಹೆಸರಿನ ಸೆರೆವಾಸ ಮುಗಿದು ಬಿಡುಗಡೆಯಾಗಿ ಬಂದು ಈಗ ಒಂದು ವರ್ಷ ಮುಗಿದಿದೆ. ಮುಂಜಾವು, ಜನವಿಮುಕ್ತಿ, ಸಂವಾದ, ವಾರ್ತಾಭಾರತಿ , ಗೌರಿಲಂಕೇಶ್, ಸಾಕೇತ್, ಬಾರುಕೋಲು ಪತ್ರಿಕೆಗಳಲ್ಲಿ ಹಾಗೂ ಸಮಾಚಾರ.ಕಾಮ್ ವೆಬ್ ಪೋರ್ಟಲ್ ನಲ್ಲಿ ಇವರು ಬರೆದ ಸಾಮಾಜಿಕ, ಆರ್ಥಿಕ, ರಾಜಕೀಯ ಲೇಖನಗಳು, ವರದಿಗಳು, ಕವನಗಳು ಪ್ರಕಟವಾಗಿವೆ.

Rate this book

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.