ಈ ಗ್ರಂಥದಲ್ಲಿ ‘ಕೆಲವು ಸಾಹಿತ್ಯ ಸಮಸ್ಯೆಗಳು,’ ‘ಸಾಹಿತ್ಯ ಮತ್ತು ವಿಜ್ಞಾನ,’ ‘ಸಾಹಿತ್ಯ ಮತ್ತು ಜನಜೀವನ,’ ‘ಭಾಷೆಯ ಸ್ವರೂಪ ಮತ್ತು ಸ್ವಭಾವ,’ ‘ಭಾಷೆಯ ವ್ಯವಹಾರ ರೂಪಗಳು’ ಮತ್ತು ‘ಸೌಂದರ್ಯ ಸಂಹಿತೆ’ - ಎಂಬ ಆರು ಪ್ರಕರಣಗಳಿವೆ. ಒಂದೊಂದು ಉಪನ್ಯಾಸವೂ ತನ್ನದೇ ಆದ ಒಂದು ಆಲೋಚನಾ ಶಕ್ತಿಯಿಂದ ಕೂಡಿದೆ. ೧೯೩೨ ರಲ್ಲಿ ಈ ಗ್ರಂಥ ಮೊದಲಬಾರಿಗೆ ಪ್ರಕಟವಾಯಿತು. ಅಂದಿನಿಂದ ಇದು ಸಾಹಿತ್ಯಾಭ್ಯಾಸಿಗಳ ಮತ್ತು ವಿದ್ವಾಂಸರ ಮನ್ನಣೆಗೆ ಪಾತ್ರವಾಗಿ ಈಗ ಐದನೆಯ ಮುದ್ರಣವನ್ನು ಕಂಡಿದೆ. ಜೀವನೋತ್ಸಾಹ, ವಿಷಯಗಳನ್ನು ಬುಡಮುಟ್ಟ ಶೋಧಿಸುವ ರೀತಿ, ವೀರ್ಯವತ್ತಾದ ಶೈಲಿ - ಈ ಗುಣಗಳು ಇಲ್ಲಿನ ಪ್ರಬಂಧಗಳಿಗೆ ಅಪೂರ್ವವಾದ ಸೊಬಗನ್ನು ತಂದುಕೊಟ್ಟಿವೆ.