“ಕನಕಾಲುಕಾ” ಪ್ರಕರಣವನ್ನು ಓದುವವರು ೬೦-೭೦ ವರ್ಷಗಳ ಹಿಂದಿನ ಮನೋಭಾವವನ್ನು ತಂದುಕೊಳ್ಳಬೇಕು. ಜನರಲ್ಲಿ ನಿಜವಾದ ನಾಗರಿಕತೆಯೂ ವಿದ್ಯಾಭ್ಯಾಸವೂ ಹೆಚ್ಚಿದಹಾಗೆಲ್ಲ, ನೀತಿಯೂ ಸದಾಚಾರವೂ ಹೆಚ್ಚುವುದೆಂದು ನಂಬುವುದೇನೋ ನ್ಯಾಯವೇ. ಆದರೆ ಈಗ ನಮ್ಮ ಜನರಿಗೆ ನೀತಿಯನ್ನು—ತತ್ರಾಪಿ ಸ್ತ್ರೀಪುರುಷರು ಪರಸ್ಪರ ಅನುಸರಿಸಬೇಕಾದ ನೀತಿಯನ್ನು—ಬೋಧಿಸಬೇಕಾದ ಅವಶ್ಯಕತೆಯಿಲ್ಲವೆಂದು ಯಾರೂ ಹೇಳಲಾರರು. ವ್ಯಭಿಚಾರದೋಷವನ್ನು ದೂಷಿಸಿ, ನಿರ್ಮಲ ದಾಂಪತ್ಯದ ನೀತಿಯನ್ನು ಸೂಚಿಸುವುದೇ ಈ ಸಣ್ಣಪುಸ್ತಕದ ಉದ್ದೇಶ.ಂಜಕವಾಗುವಂತೆ ಹೇಳುವುದು ಕಥೆ. ಆದಕಾರಣ ಕಥೆಯು ಚರಿತ್ರೆಯಾಗಲಾರದು.