‘ಗೋಪಾಲ ಕೃಷ್ಣ ಗೋಖಲೆ’ ಬಹುಶಃ ಡಿ.ವಿ.ಜಿ. ಯವರು ಬರೆದ ಜೀವನ ಚರಿತ್ರೆಗಳಲ್ಲೆಲ್ಲ ದೊಡ್ಡದಾಗಿದ್ದು, ಗೋಖಲೆಯವರ ಜೀವನ ಸಾಧನೆಗಳು ಡಿ.ವಿ.ಜಿ. ಜೀವನ ಧ್ಯೇಯಗಳಿಗೆ ಹೆಚ್ಚು ಪ್ರಿಯವೂ, ಹತ್ತಿರದ್ದೂ ಆಗಿದೆ. ಡಿ.ವಿ.ಜಿ. ಯವರು ಅತ್ಯಂತ ನಿಕಟವಾಗಿ ಸಂಪರ್ಕ್ ಹೊಂದಿದ್ದ ಸಂಸ್ಥೆ ಗೋಖಲೆಯವರ ಹೆಸರಿನಲ್ಲಿರುವ ‘ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ’. ಹಾಗಿದ್ದರೂ ಇಲ್ಲಿ ಗೋಖಲೆಯವರನ್ನು ಅನಗತ್ಯವಾಗಿ ಸ್ತುತಿಸಿ ದೊಡ್ಡವರನ್ನಾಗಿ ಮಾಡಿಲ್ಲ. ಗೋಖಲೆಯವರ ಜೀವನ-ಸ್ವಾಭಾವಗಳನ್ನು ಕೆತ್ತಿ ನಿಲ್ಲಿಸಿರುವ ರೀತಿ ಸೊಗಸಾಗಿದೆ. ಇಲ್ಲಿ ಚಿತ್ರಿತವಾಗಿರುವ ಮಾದರಿ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಎಲ್ಲರಿಗೂ ಅನುಕರಣೀಯವಾದುದಾಗಿದೆ. ಇದೊಂದು ಪರಿಣಾಮಕಾರಿಯಾದ ಜೀವನಚರಿತ್ರೆಯಾಗಿದೆ.