ಈ ಉಪನ್ಯಾಸದಲ್ಲಿ ಸತ್ಯ, ಧರ್ಮ, ಪ್ರಗತಿ ಇವೇ ಮೊದಲಾದ ಕೆಲವು ಜಟಿಲ ವಿಚಾರಗಳ ಪ್ರಸ್ತಾವವಿದೆ. ಸಂಸ್ಕೃತಿ ಎಂದರೇನು ? ಅದರ ಮೂಲ ಸ್ಥಾನಗಳಾವುವು ? ಹಿಂದೂ ಸಂಸ್ಕೃತಿಯ ಸ್ವರೂಪವೆಂಥದು ? ಭಾರತೀಯ ಸಂಸ್ಕೃತಿಯು ಈಗ ಎದುರಿಸಬೇಕಾಗಿರುವ ಪ್ರಶ್ನೆಗಳಾವುವು ? ಸುಸಂಸ್ಕೃತನ ಲಕ್ಷಣಗಳೇನು ? ವಿಶ್ವ ಪುರುಷನು ಎಂಥವನು ? ಸಂಸ್ಕೃತಿ ಪ್ರಕೃತಿ, ಸಂಸ್ಕೃತಿ ಸ್ವಾತಂತ್ರ್ಯ, ಸಂಸ್ಕೃತಿ ಸರಕಾರ, ಸಾಹಿತ್ಯ ಸಂಸ್ಕೃತಿ ಇವುಗಳ ಪರಸ್ಪರ ಸಂಬಂಧವೆಂಥಾದ್ದು ? ಇವೇ ಮೊದಲಾದ ವಿಷಯಗಳ ಕೂಲಂಕಷ ವಿವೇಚನೆ ಇಲ್ಲಿ ನಡೆದಿದೆ.