ಆಂಡ್ರಾಯ್ಡ್ ಫೋನುಗಳಿಗಾಗಿಯೇ ವಿಶೇಷವಾಗಿ ಸಿದ್ದಪಡಿಸಿರುವ ಹೊಸ UC Browser ನಿಮಗೆ ಅನಿಯಮಿತ ವಿಡಿಯೋ ಡೌನ್‌ಲೋಡ್ ಹಾಗೂ ಕ್ಷಣಕ್ಷಣದ ಸುದ್ದಿಯನ್ನು ನೀಡಲಿದೆ. ವೇಗದ ಡೌನ್‌ಲೋಡ್, ಡೇಟಾ ಉಳಿತಾಯ ಸೇರಿದಂತೆ ಇನ್ನೂ ಮುಂತಾದ ಕ್ರಿಯೇಟಿವ್ ಫೀಚರ್ಸ್ ಈ ಆ್ಯಪ್ನಲ್ಲಿವೆ. ಹಾಡುಗಳು, ವಿಡಿಯೋ, ಕ್ರಿಕೆಟ್ ಸೇರಿದಂತೆ ಸಾಕಷ್ಟು ಮಾಹಿತಿಯನ್ನು ವೇಗವಾಗಿ ಪಡೆಯಲು UC Browser ಆ್ಯಪ್ ಬಳಸಿ.
ಅತಿ ವೇಗದ ಡೌನ್‌ಲೋಡ್ -- ನಮ್ಮ ಸರ್ವರ್‌ಗಳು ಡೌನ್‌ಲೋಡ್‌ಗಳನ್ನು ವೇಗಗೊಳಿಸುತ್ತವೆ. ಡೌನ್‌ಲೋಡ್ ಸಂದರ್ಭದಲ್ಲಿ ಯಾವುದೇ ಸಂಪರ್ಕ ಕಡಿತ ಅಥವಾ ಅಡಚಣೆ ಸಂಭವಿಸಿದಲ್ಲಿ, ಬ್ರೇಕ್ ಪಾಯಿಂಟ್‌ನಿಂದಲೇ ಡೌನ್‌ಲೋಡ್ ಮುಂದುವರೆಸುವ ಅದ್ಭುತ ಫೀಚರ್ ಯುಸಿ ಬ್ರೌಸರ್ನಲ್ಲಿದೆ. ಡೌನ್‌ಲೋಡ್ ಪ್ರಕ್ರಿಯೆಯನ್ನು ವೇಗಗೊಳಿಸುವ ಮೂಲಕ ನಿಮ್ಮ ಸಮಯವನ್ನು UC Browser ಉಳಿಸುತ್ತದೆ.
ಕ್ರಿಕೆಟ್ ಕಾರ್ಡ್ ಫೀಚರ್ -- ಕ್ರಿಕೆಟ್ ಅಭಿಮಾನಿಗಳಿಗೆ UC Browser ನೀಡುತ್ತಿದೆ ಹೊಸ ಫೀಚರ್. ಪ್ರಮುಖ ಪಂದ್ಯಗಳ ಸ್ಕೋರ್ ಹಾಗೂ ಸಂಪೂರ್ಣ ಮಾಹಿತಿ ಕ್ಷಣಾರ್ಧದಲ್ಲಿ ನಿಮಗೆ ಸಿಗಲಿದೆ.
ಸದಭಿರುಚಿಯ ವಿಡಿಯೋಸ್ -- ವಿವಿಧ ಬಗೆಯ ಸಿನಿಮಾಗಳು ಹಾಗೂ ಟಿವಿ ಸೀರೀಸ್ಗಳನ್ನು ಯುಸಿ ಬ್ರೌಸರ್‌ನಲ್ಲಿ ನೋಡುವ ಅವಕಾಶ ನಿಮಗೆ ಸಿಗಲಿದೆ. ತಮಾಷೆ, ಟ್ರೇಲರ್, ಆಕ್ಷನ್ ಸಿನಿಮಾಗಳು ಸೇರಿದಂತೆ ಇನ್ನೂ ಅನೇಕ ಬಗೆಯ ವಿಡಿಯೋಗಳನ್ನು ನೋಡಿ, ಎಂಜಾಯ್ ಮಾಡಿ...
ವೈವಿಧ್ಯಮಯ ಸ್ಟಿಕ್ಕರ್ಸ್ -- ಸ್ನೇಹಿತರ ಜೊತೆ ಹಂಚಿಕೊಳ್ಳಲು ಸಾವಿರಾರು ರೀತಿಯ ವೈವಿಧ್ಯಮಯ ಸ್ಟಿಕ್ಕರ್ಸ್ ಹಾಗೂ ವಿಡಿಯೋ ಸ್ಟೇಟಸ್ಗಳನ್ನು ಹೊಸದಾಗಿ ಸೇರಿಸಲಾಗಿದೆ. ಇವುಗಳನ್ನ ನೀವು ನಿಮ್ಮ ಸ್ನೇಹಿತರ ಜೊತೆ ಯಾವುದೇ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಶೇರ್ ಮಾಡಬಹುದು.
ಡೇಟಾ ಉಳಿತಾಯ -- UC Browser ಡೇಟಾವನ್ನು ಕಂಪ್ರೆಸ್ ಮಾಡಿ, ನ್ಯಾವಿಗೇಶನ್ ಅನ್ನು ವೇಗಗೊಳಿಸುತ್ತದೆ. ಇದರಿಂದ ಸಾಕಷ್ಟು ಮೊಬೈಲ್ ಡೇಟಾ ಉಳಿತಾಯವಾಗುತ್ತೆ. ಹೆಚ್ಚೆಚ್ಚು ಬ್ರೌಸ್ ಮಾಡಿದಂತೆಲ್ಲಾ ನೀವು ಹೆಚ್ಚೆಚ್ಚು ಡೇಟಾ ಉಳಿತಾಯ ಮಾಡಬಹುದು.
ನವೀಕರಿಸಿದ ವೆಬ್ ಬ್ರೌಸಿಂಗ್ ಅನುಭವ -- ನಮ್ಮ ಕೊನೆಯ ಆವೃತ್ತಿಗೆ ಹೋಲಿಸಿದರೆ ವೆಬ್ ಸಂಪರ್ಕ, ಉನ್ನತ ಮಟ್ಟದ ಟೆಕ್ ಸಪೋರ್ಟ್, ವಿಡಿಯೋ ನೋಡುವ ಅನುಭವ, ವೈಯಕ್ತಿಕ ಮಾಹಿತಿ ಸುರಕ್ಷತೆ, ಸ್ಥಿರತೆ ಮತ್ತು ಸ್ಟೋರೇಜ್ ನಿರ್ವಹಣೆಯಲ್ಲಿ 20% ಸುಧಾರಣೆಯನ್ನು ಮಾಡುವ U4 ಎಂಜಿನ್ ಅನ್ನು ಈ ಹೊಸ ಆವೃತ್ತಿಯಲ್ಲಿ ಬಳಸಲಾಗಿದೆ.
ಸ್ಮಾಲ್ ವಿಂಡೋ ಮೋಡ್ - ನಮ್ಮ ಸ್ಮಾಲ್ ವಿಂಡೋ ಮೋಡ್, ವಿಡಿಯೋ ಪರದೆಯನ್ನು ವೆಬ್‌ಪುಟದಿಂದ ಸ್ಕ್ರೀನಿನ ಯಾವ ಮೂಲೆಗೆ ಬೇಕಾದರೂ ಸರಿಸಬಹುದು. ಇದರಿಂದ ನಿಮಗೆ ಸ್ನೇಹಿತರೊಂದಿಗೆ ಚಾಟ್ ಮಾಡಲು, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ಅಥವಾ ವೀಡಿಯೊ ವೀಕ್ಷಿಸಲು ಯಾವುದೇ ಅಡಚಣೆ ಇರುವುದಿಲ್ಲ.
ಫೇಸ್‌ಬುಕ್ ಮೋಡ್ -- ನಿಮ್ಮ ನೆಟ್‌ವರ್ಕ್ ಸ್ಥಿತಿಯನ್ನು ಲೆಕ್ಕಿಸದೆ ಈ ವಿಶಿಷ್ಟ ಫೀಚರ್ ಫೇಸ್‌ಬುಕ್ ಅನ್ನು ವೇಗಗೊಳಿಸುತ್ತದೆ. ನಿಮ್ಮ ನೆಟ್‌ವರ್ಕ್ ವೇಗವನ್ನು ಹೆಚ್ಚಿಸುವ ಮಾರ್ಗವನ್ನು UC Browser ಸದಾ ಕಂಡುಕೊಳ್ಳುತ್ತದೆ.
ನೈಟ್ ಮೋಡ್ -- ರಾತ್ರಿಯಲ್ಲಿ ಹೆಚ್ಚು ಆರಾಮವಾಗಿ ಓದಲು ಯುಸಿ ಬ್ರೌಸರ್‌ನಲ್ಲಿ ನೈಟ್ ಮೋಡ್ ಆನ್ ಮಾಡಿ.
ಯಾವುದೇ ರೀತಿಯ ಸಹಾಯಕ್ಕಾಗಿ ಅಥವಾ ಪ್ರತಿಕ್ರಿಯೆ ನೀಡಲು ನಮ್ಮ ಸಹಾಯ ಕೇಂದ್ರವನ್ನು ಸಂಪರ್ಕಿಸಿ. http://url.cn/42kuL5f (open in UC).
ಅಪ್‌ಡೇಟ್ ದಿನಾಂಕ
ಆಗ 28, 2025