ಶರಣ ಉರಿಲಿಂಗ ಪೆದ್ದಿ ವಚನಗಳು

বিজ্ঞাপনযুক্ত
১০+
ডাউনল’ড
সমলৰ মূল্যাংকন
সকলো
স্ক্ৰীনশ্বটৰ প্রতিচ্ছবি
স্ক্ৰীনশ্বটৰ প্রতিচ্ছবি
স্ক্ৰীনশ্বটৰ প্রতিচ্ছবি
স্ক্ৰীনশ্বটৰ প্রতিচ্ছবি
স্ক্ৰীনশ্বটৰ প্রতিচ্ছবি

এই এপ্‌টোৰ বিষয়ে

sharana urilinga peddi vachana collection ಶರಣ ಉರಿಲಿಂಗ ಪೆದ್ದಣ್ಣ ಸಂಪೂರ್ಣ ವಚನಗಳು
ಶರಣ ಉರಿಲಿಂಗ ಪೆದ್ದಿಯವರ ಮೂಲ ಹೆಸರು ಪೆದ್ದಣ್ಣ, ಇವರ ಒಟ್ಟು 363 ವಚನಗಳು ಲಭ್ಯವಾಗಿದ್ದು, ಇವರ ವಚನಗಳ ಅಂಕಿತ ನಾಮವು ಉರಿಲಿಂಗ ಪೆದ್ದಿ ಪ್ರಿಯ ವಿಶ್ವೇಶ್ವರಾ. ಮೂಲತ: ಚೋರವೃತ್ತಿಯವನಾಗಿದ್ದ ಈತ ಉರಿಲಿಂಗದೇವನ ಶಿಷ್ಯತ್ವ ವಹಿಸಿ, ಘನ ವಿದ್ವಾಂಸನಾದ. ಕಾಳವ್ವೆ ಈತನ ಸತಿ. ಈತ ರಚಿಸಿದ ೩೬೩ ವಚನಗಳು ದೊರೆತಿವೆ. ಅವುಗಳಲ್ಲಿ ಗುರುಮಹಿಮೆಗೆ ಅಗ್ರಸ್ಥಾನ ಸಂದಿದೆ. ಜೊತೆಗೆ ಲಿಂಗ-ಜಂಗಮ ತತ್ವದ ವಿಚಾರ, ಕುಲ-ಜಾತಿ ಸಮಸ್ಯೆ ನಿರೊಪಿತವಾಗಿವೆ. ವಚನಗಳ ಮಧ್ಯದಲ್ಲಿ ಬಳಸಿದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯಕ್ಕೆ ನಿದರ್ಶನವೆನಿಸಿವೆ. ಧರ್ಮ ಹಾಗೂ ಧರ್ಮದ ತತ್ವ, ಆಚರಣೆಗಳ ಪ್ರಚಾರ ಇವನ ವಚನಗಳ ಪ್ರಧಾನ ಆಶಯ. ವಚನಗಳ ನಡುವೆ ಬಳಸುವ ಯಥೇಚ್ಛ ಸಂಸ್ಕೃತ ಶ್ಲೋಕಗಳ ಆಧಾರದಿಂದ ಈತ ದೊಡ್ಡ ಜ್ಞಾನಿ ಎಂದು ಹೇಳಬಹುದು. ಹುಟ್ಟಿನಲ್ಲಿ ಅಂತ್ಯಜನಾಗಿ ಗುರುಪೀಠವನ್ನೇರಿದ ಸಂಗತಿ ಕ್ರಾಂತಿಕಾರಕವಾದುದು. ಈತನಲ್ಲಿ ಸಾಮಾಜಿಕ ವಿಡಂಬನೆ ತೀಕ್ಷ್ಣವಾಗಿದೆ. ತನಗೆ ಸರಿಕಾಣದ್ದನ್ನು ಮುಚ್ಚು ಮರೆಯಿಲ್ಲದೆ ಟೀಕಿಸಿರುವನು. ಇವನಲ್ಲಿ ವೈಚಾರಿಕತೆ ಪ್ರಧಾನವಾಗಿದೆ. ಕಳ್ಳತನ ಮಾಡಿಕೊಂಡು ಜೀವಿಸುತ್ತಿದ್ದ ಒಬ್ಬ ಪೆದ್ದಣ್ಣ ಎಂಬ ವ್ಯಕ್ತಿಯು ಗುರುಕೃಪದಿಂದ, ನಡೆದ ಒಂದು ಘಟನೆಯಿಂದ, ಆತ್ಮನರಿವಿನಿಂದ ಮಹಾ ಶರಣರಾಗಿ ಹೊರಹೊಮ್ಮಿದವರೇ ಶರಣ ಉರಿಲಿಂಗ ಪೆದ್ದಿ ಯವರು. ಇವರು ಆಂಧ್ರಪ್ರದೇಶದಿಂದ ಮಹಾರಾಷ್ಟ್ರದ ನಾಂದೇಢ್ ಜಿಲ್ಲೆಯ ಕಂದಾರ ಅಥವಾ ಕಂದಾಪುರ ಕ್ಕೆ ಹೆಂಡತಿ ಕಾಳವ್ವೆಯೊಂದಿಗೆ ವಲಸೆ ಬಂದನು‌. ಬಡತನದೊಂದಿಗೆ ಅವನ ವಾಸ, ಕಳ್ಳತನ ಮಾಡುವ ಕಸುಬೇ ಅವನಿಗೆ ಉದ್ಯೋಗ, ಹೀಗೆ ಕಳ್ಳತನ ಮಾಡಿಕೊಂಡೇ ಜೀವನ ಸಾಗಿಸುವುದೇ ಅವರ ದಿನಚರಿಯಾಗಿತ್ತು. ಇದೇ ಕಂದಾರ ಅಥವಾ ಕಂದಾಪುರದಲ್ಲಿ ಒಂದು ಮಠ ಇತ್ತು, ಆ ಮಠಕ್ಕೆ ಮಠಾಧಿಪತಿಗಳಾಗಿದ್ದವರು ಉರಿಲಿಂಗದೇವರು . ಒಂದು ದಿನ ನಂದಿವಾಡ ಗ್ರಾಮದ ಸೂರಯ್ಯ ಎಂಬುವನಿಗೆ ಉರಿಲಿಂಗದೇವರು ಲಿಂಗದೀಕ್ಷೆ ಕೊಡುವ ಸಂಕಲ್ಪ ಮಾಡಿಕೊಂಡು, ಲಿಂಗದೀಕ್ಷೆಗೆ ಬೇಕಾಗುವ ಎಲ್ಲಾ ಪರಿಕರಗಳೂ ಹಾಗೂ ಸಾಮಾನುಗಳನ್ನು ತರಿಸಿ ಮಠದಲ್ಲಿರಿಸಿದ್ದರು. ಈ ವಿಷಯ ಅದೇಗೋ ಪೆದ್ದಣ್ಣ ನವರಿಗೆ ತಿಳಿದು, ಮಠದಲ್ಲಿರಿಸಿದ್ದ ವಸ್ತುಗಳನ್ನು ಹೇಗಾದರೂ ಮಾಡಿ ಕಳವು ಮಾಡಬೇಕೆಂದು ಹೊಂಚು ಹಾಕಿ, ಯಾರಿಗೂ ತಿಳಿಯದಂತೆ ಮಠವನ್ನು ಪ್ರವೇಶಿಸಿ, ಮಠದ ಅಟ್ಟಣಿಗೆಯ ಮೇಲೆ ಕುಳಿತು ಸರಿಯಾದ ಸಮಯಕ್ಕಾಗಿ ಕಾಯುತ್ತಿರುವಾಗ್ಯೆ, ಉರಿಲಿಂಗದೇವರು ಆಗಲೇ ಸೂರಯ್ಯನಿಗೆ ಲಿಂಗದೀಕ್ಷೆ ಕೊಡುತ್ತಿದ್ದುದು ಕಂಡು ಬಂತು, ಆಗ ಅಟ್ಟಣಿಗೆಯ ಮೇಲಿದ್ದ ಪೆದ್ದಣ್ಣನು ಲಿಂಗದೀಕ್ಷೆ ಕೊಡುವುದನ್ನೇ ನೋಡುತ್ತಿರುವಾಗ ಪೆದ್ದಣ್ಣನಿಗೆ ಮಾನಸದಲ್ಲಿ ಭಕ್ತಿರಸದ ಹೊಳೆಯೇ ಹರಿಯಲು ಪ್ರಾರಂಭಿಸಿತು. ಕೂಡಲೇ ಅವನ ಕಳ್ಳತನದ ವೃತ್ತಿಯು ಪರಿವರ್ತನೆ ಹೊಂದಿತ್ತು. ಪೆದ್ದಣ್ಣನಲ್ಲಿ ಹೊಸ ಮನುಷ್ಯನೊಬ್ಬ ಅವತರಿಸಿದ್ದ. ಪೆದ್ದಣ್ಣನು ಆ ಕೂಡಲೇ ತಾನೂ ಲಿಂಗದೀಕ್ಷೆ ಪಡೆದುಕೊಳ್ಳಲೇ ಬೇಕೆಂದು ಸಂಕಲ್ಪ ಮಾಡಿಕೊಂಡನು. ಕೂಡಲೇ ಪೆದ್ದಣ್ಣನು ತನ್ನ ಮೂಲ ಕಸುಬಾದ ಕಳ್ಳತನವನ್ನು ತ್ಯಜಿಸಿದ, ಶಿವನಲ್ಲಿ ಅನುರಕ್ತನಾಗಲು ಬಯಸಿದ, ನಂತರ ಗುರು ಉರಿಲಿಂಗದೇವರಲ್ಲಿ ದೀಕ್ಷೆ ಪಡೆಯುವ ಉತ್ಕಟತೆಯಲ್ಲಿ ಮಠಕ್ಕೆ ಪ್ರತಿದಿನವೂ ಉಚಿತವಾಗಿ ಸೌದೆಯನ್ನು ತಂದು ಹಾಕುವ ಕಾಯಕ ಮಾಡಿದ, ಒಂದು ದಿನ ಉರಿಲಿಂಗದೇವರು ಪೆದ್ದಣ್ಣನಿಗೆ ನೀನು ಹಣ ಪಡೆದು ಸೌದೆ ತಂದು ಹಾಕುವುದಾದರೆ ಸೌದೆ ತಂದು ಹಾಕು, ಇಲ್ಲದಿದ್ದರೆ ಸೌದೆ ತರಬೇಡ ಎಂದು ಫಾರ್ಮಾನು ಮಾಡಿದರು, ಆಗ ಪೆದ್ದಣ್ಣನು ಗುರುಗಳೇ ನನಗೆ ಯಾವ ಹಣವೂ ಬೇಡ, ನನಗೆ ಲಿಂಗ ಪ್ರಸಾದನ ಮಾಡಿ ಎಂದು ಭಿನ್ನವುಸಿಕೊಂಡ, ಆಗ ಗುರುಗಳು ಆ ಪೆದ್ದಣ್ಣನನ್ನು ಪರೀಕ್ಷೆ ಮಾಡಲು ಅಲ್ಲೇ ಬಿದ್ದಿದ್ದ ಒಂದು ಕಲ್ಲನೇ ಇದೇ ಲಿಂಗ, ಇದನ್ನೇ ಕೊಂಡು ಹೋಗು ( ಘೇ ಜಾ ದಗಡಿಚ ) ಎಂದು ಪೆದ್ದಿಯವರ ಮುಂದೆ ಎಸೆದಾಗ, ಪೆದ್ದಿಯವರು ಇದು ಗುರುಕಾರುಣ್ಯ ಎಂದು ಕೊಂಡು, ಆ ಕಲ್ಲನ್ನೇ ಕೊಂಡುಹೋಗಿ ಲಿಂಗವೆಂದು ಪೂಜಿಸಹತ್ತಿದರು. ಗುರುಗಳು ಹೇಳಿದ ಘೇ ಜಾ ದಗಡಿಚ ಎಂಬುದೇ ಅವನಿಗೆ ಶಿವಮಂತ್ರವಾಗಿತು‌. ಆ ಗುರುಗಳು ಎಸೆದ ಕಲ್ಲೇ ಶಿವಲಿಂಗ, ಗುರುಗಳು ಹೇಳಿದ್ದೇ ಮಂತ್ರ ಎಂದುಕೊಂಡ ಪೆದ್ದಣ್ಣನು ಧ್ಯಾನಸ್ಥನಾಗುತ್ತಿದ್ದನು. ಬರಬರುತ್ತಾ ಆಧ್ಯಾತ್ಮಿಕದ ಶಿಖರ ಏರಿದ ಪೆದ್ದಣ್ಣನು ಉರಿಲಿಂಗದೇವರ ಹಾಗೆಯೇ ಲಿಂಗಪತಿ – ಶರಣ ಸತಿ ಎನ್ನುವ ಹಾಗೆ ಆ ಪರಶಿವನನ್ನು ಸೇವಿಸಿದರು . ಈ ಪೆದ್ದಣ್ಣನಲ್ಲಿದ್ದ ಪ್ರಭೆಯನ್ನು ಗುರುತಿಸಿದ ಉರಿಲಿಂಗದೇವರು ತನ್ನ ಪೀಠಕ್ಕೆ ಮಠಾಧಿಪತಿಯನ್ನಾಗಿ ನೇಮಿಸಿದರು, ಅಂದಿನಿಂದ ಇವರಿಗೆ ಉರಿಲಿಂಗ ಪೆದ್ದಿ ಎಂದೇ ಹೆಸರಾಯಿತು. ಈ ಪೆದ್ದಣ್ಣನಲ್ಲಿದ್ದ ಪ್ರಭೆಯನ್ನು ಗುರುತಿಸಿದ ಉರಿಲಿಂಗದೇವರು ತನ್ನ ಪೀಠಕ್ಕೆ ಮಠಾಧಿಪತಿಯನ್ನಾಗಿ ನೇಮಿಸಿದರು, ಅಂದಿನಿಂದ ಇವರಿಗೆ ಉರಿಲಿಂಗ ಪೆದ್ದಿ ಎಂದೇ ಹೆಸರಾಯಿತು. ಶರಣ ಉರಿಲಿಂಗಪೆದ್ದಿಯು ಬಸವಾದಿ ಪ್ರಮಥರ ಸಂಗದಲ್ಲಿದ್ದುದು ನಿಚ್ಚಳವಾಗಿ ಕಂಡು ಬರುತ್ತದೆ. ಕೊನೆಗೆ ಇವರು ಕಲ್ಯಾದಲ್ಲಿಯೇ ಕಾಲವಾದರು. ಇವರ ಸಮಾಧಿಯು ಈಗಲೂ ಬಸವಕಲ್ಯಾಣದಲ್ಲಿ ಇದೆ. ಇವರ ಮಠಗಳು ಕಲ್ಯಾಣ, ಕೊರಳಿ, ಭಾಲ್ಕಿ, ಮೈಸೂರು, ಬೇವಿನ ಚಿಂಚೋಳಿಗಳಲ್ಲಿ ಇವೆ. 12 ನೇ ಶತಮಾನದಲ್ಲಿಯೇ ಒಬ್ಬ ಅಸ್ಪೃಷ್ಯನು ತನ್ನ ಇಚ್ಚಾ ಶಕ್ತಿಯಿಂದ ಸ್ಪೃಷ್ಯನಾಗಿ, ನಂತರ ಆಚಾರ್ಯನಾಗಿ, ನಂತರ ಮಠಾಧಿಪತಿಯಾಗಿದ್ದು ಇಡೀ ಭಾರತ ದೇಶದಲ್ಲಿಯೇ ಪ್ರಪ್ರಥಮವಾದ ಕ್ರಾಂತಿಕಾರಿ ಹೆಜ್ಜೆ ಎಂದೇ ಬಣ್ಣಿಸಲಾಗಿದೆ. ಈತನ ವಚನಗಳು ವಿಚಾರ ಪೂರಿತವಾಗಿಯೂ, ತತ್ವ ಹಾಗೂ ಸತ್ವ ಭರಿತವೂ, ಅನುಭಾವದಿಂದಲೂ ಕೂಡಿವೆ. ಒಟ್ಟು 363 ವಚನಗಳನ್ನು ರಚಿಸಿದ ಉರಿಲಿಂಗ ಪೆದ್ದಿಯ ಪ್ರತಿಯೊಂದು ವಚನಗಳಲ್ಲಿ ಲಿಂಗದ ಮಹಿಮೆಯ ಉಲ್ಲೇಖಗಳಿವೆ.
For any issues / concerns / feedback please reach out to us at vishaya.in@gmail.com OR contact form in https://vishaya.in
আপডে’ট কৰা তাৰিখ
০৯-০৪-২০২৩

ডেটা সুৰক্ষা

বিকাশকৰ্তাসকলে আপোনাৰ ডেটা কেনেকৈ সংগ্ৰহ আৰু শ্বেয়াৰ কৰে সেয়া বুজি পোৱাৰ জৰিয়তে সুৰক্ষা আৰম্ভ হয়। ডেটাৰ গোপনীয়তা আৰু সুৰক্ষা প্ৰণালী আপোনাৰ ব্যৱহাৰ, অঞ্চল আৰু বয়সৰ ওপৰত ভিত্তি কৰি ভিন্ন হ’ব পাৰে। বিকাশকৰ্তাগৰাকীয়ে এই তথ্যখিনি প্ৰদান কৰিছে আৰু সময়ৰ লগে লগে এয়া আপডে’ট কৰিব পাৰে।
এই এপ্‌টোৱে এই ধৰণৰ ডেটাৰ প্ৰকাৰ তৃতীয় পক্ষৰ সৈতে শ্বেয়াৰ কৰিব পাৰে
ডিভাইচ অথবা অন্য আইডি
কোনো ডেটা সংগ্ৰহ কৰা হোৱা নাই
বিকাশকৰ্তাই ডেটা সংগ্ৰহ কৰাৰ বিষয়ে কেনেকৈ ঘোষণা কৰে সেই বিষয়ে অধিক জানক
ডেটা ট্ৰেনজিটত এনক্ৰিপ্ট কৰা হয়
ডেটা মচিব নোৱাৰি

নতুন কি আছে

* urilinga peddanna complete vachana collection
* simple and elegant single screen design
* Works offline
* Sharing option Provided to Facebook / WhatsApp / telegram / twitter etc...