ಚೆನ್ನಬಸವಣ್ಣ ಸಂಪೂರ್ಣ ವಚನ ಸಂಗ್ರಹ

Enthält Werbung
100+
Downloads
Altersfreigabe
Jedes Alter
Screenshot
Screenshot
Screenshot
Screenshot
Screenshot
Screenshot

Über diese App

ಚನ್ನಬಸವೇಶ್ವರ ಅಥವಾ ಚನ್ನಬಸವಣ್ಣನವರ ವಚನಗಳು - ChannaBasavanna OR ChennaBasaveshwara's Vachana Collection
ಚನ್ನಬಸವೇಶ್ವರ ವಚನಗಳು - ಷಟಸ್ಥಲ ಚಕ್ರವರ್ತಿ ಚಿನ್ಮಯ ಜ್ಞಾನಿ ಚನ್ನಬಸವಣ್ಣನವರು ಪ್ರಭುದೇವರ ದೃಷ್ಠಿಯಲ್ಲಿ ಅವಿರಳ ಜ್ಞಾನಿ,ಸ್ವಯಂಭು ಜ್ಞಾನಿ, ಬಸವಣ್ಣನವರ ಪ್ರಕಾರ ಜನ್ಮತ: ಜ್ಞಾನಪರಿಮಳಭರಿತ, ಅಕ್ಕಮಹಾದೇವಿಯವರ ದೃಷ್ಠಿಯಲ್ಲಿ ಸಮ್ಯಕ ಜ್ಞಾನಿ, ಶರಣರ ದೃಷ್ಠಿಯಲ್ಲಿ ಷಟಸ್ಥಲ ಜ್ಞಾನಿ. ಇವರ ಅಂಕಿತನಾಮ - ಕೂಡಲಚೆನ್ನಸಂಗಮದೇವ. ಇವರು ಆಚಾರ್ಯ ಪುರುಷ, ಎರಡನೆಯ ಶೂನ್ಯ ಪೀಠಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ತಂದೆ ಶಿವಸ್ವಾಮಿ ಮತ್ತು ತಾಯಿ ಅಕ್ಕ ನಾಗಲಾಂಬಿಕೆ. ಇವರು ಹುಟ್ಟಿದ ಸ್ಥಳ ಬಸವಕಲ್ಯಾಣ - ಕ್ರಿ. ಶ. ಸುಮಾರು 1172 ರಲ್ಲಿ ಜನಿಸಿದರು. ಇವರ ಸೋದರ ಮಾವ ಸ್ವತಹ ವಿಶ್ವ ಗುರು ಬಸವಣ್ಣನವರು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ ; ಚನ್ನಬಸವಣ್ಣನವರು ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು ಮಾತ್ರ. ರಾಕ್ಷಸ ನಾಮ ಸಂವತ್ಸರದ ಕಾರ್ತೀಕ ಮಾಸದಲ್ಲಿ ಕ್ರಿ.ಶ.೧೧೬೮ ಉಳವಿ ಯಲ್ಲಿ ಲಿಂಗೈಕ್ಯ. ಚನ್ನಬಸವಣ್ಣನವರು ಪ್ರಾಯದಿಂದ ಚಿಕ್ಕವರು ಆದರೆ ಅವರ ಅಭಿಪ್ರಾಯ ಮಾತ್ರ ಚಿಕ್ಕದಾಗಿರಲಿಲ್ಲ. ತಾಯಿಯ ಗಭ೯ದಲ್ಲಿ ಇರುವಾಗಲೇ ಗಭ೯ಲಿಂಗಧಾರಣೆಯನ್ನು ಬಸವಣ್ಣನವರಿಂದ ಪಡೆದಿದ್ದರು. ಸೊಲ್ಲಾಪುರದ ಸಿದ್ಧರಾಮೇಶ್ವರರಿಗೆ ಇಷ್ಟಲಿಂಗ ದೀಕ್ಷೆಯನ್ನು ನೀಡಿದವರೇ ಚೆನ್ನಬಸವಣ್ಣನವರು. ಅನುಭವಮಂಟಪದಲ್ಲಿ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ಚೆನ್ನಬಸವಣ್ಣನವರದು. ಗುರು ಬಸವಣ್ಣನವರ ದಿವ್ಯ ಆದೇಶದಂತೆ ವಚನ ಸಾಹಿತ್ಯ ಸಂಪತ್ತನ್ನು ರಕ್ಷಿಸಲು ಪಣ ತೊಟ್ಟರು. ನಳನಾಮ ಸಂವತ್ಸರ ವೈಶಾಖ ಬಹುಳ ಬಿದಿಗೆ ಬುಧವಾರ ರೋಹಿಣಿ ನಕ್ಷತ್ರದಲ್ಲಿ ಚೆನ್ನಬಸವಣ್ಣನವರು ತಮ್ಮೊಡನೆ ಹನ್ನೆರಡು ಸಾವಿರ ಶರಣರನ್ನು ಕರೆದುಕೊಂಡು ಉಳಿವಿಗೆ ಬಂದು ಬೀಡು ಬಿಟ್ಟರು. ತಾಯಿ ಅಕ್ಕನಾಗಲಾಂಬಿಕೆ, ಗಣಾಚಾರಿ ಮಡಿವಾಳ ಮಾಚಿದೇವರ ಹಾಗೂ ಸಾವಿರಾರು ಶರಣರ ಜೊತೆಗೂಡಿ ವಚನಕಟ್ಟುಗಳ ಗಂಟುಗಳನ್ನು ಎತ್ತಿನ ಬಂಡೆಗಳಲ್ಲಿ, ಕುದುರೆಗಳ ಮೇಲೆ ಹಾಗೂ ತೆಲೆಯಮೇಲೆ ಹೊತ್ತು ಕೈಯಲ್ಲಿ ಖಡ್ಗವಿಡಿದು ಹೋರಾಡಿ ವಚನಗಳ ರಕ್ಷಿಸಿ ಕಲ್ಯಾಣದಿಂದ ಉಳವಿಯ ಮಹಾಮನೆಗೆ ಸಾಗಿಸಿದರು. ಚೆನ್ನಬಸವಣ್ಣನವರು ಹಾಗೂ ಸಾವಿರಾರು ಶರಣರನ್ನು ಕರೆದುಕೊಂಡು ಕಲ್ಯಾಣದಿಂದ ಉಳವಿಗೆ ಸಾಗುವಾಗ ವಚನಗಳ ರಕ್ಷಣೆಗೆ ಹಾಗೂ ಪ್ರಚಾರಕ್ಕಾಗಿ ಲಿಂಗಾಯತ ಮಠಗಳನ್ನು ಸ್ಥಾಪಿಸಿದ ಸುಕ್ಷೇತ್ರಗಳು ಹುಬ್ಬಳ್ಳಿಯ ಮೂರುಸಾವಿರ ಮಠ, ಓಲೆಮಠ, ವಿದ್ಯಾನಗರದ ತಿಮ್ಮಸಾಗರ ಚೆನ್ನಬಸವಣ್ಣನವರ ದೇವಸ್ಥಾನ, ಉಣಕಲ ಕೆರೆಯ ಮೇಲಿರುವ ಚೆನ್ನಬಸವಣ್ಣನವರ ದೇವಸ್ಥಾನ, ಧಾರವಾಡದ ಉಳವಿ ಚೆನ್ನಬಸವಣ್ಣನವರ ದೇವಸ್ಥಾನ ಮುಂತಾದವು. ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ಲಿಂಗಾಯತ ಧಮ೯ದ ಸಪ್ತ ಪ್ರಮಥರಲ್ಲಿ ಒಬ್ಬರು. ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ ಬೆಳಗಿದ ಚೆನ್ನಬಸವಣ್ಣನು, ಭಕ್ತಿ, ಜ್ಞಾನ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಚೆನ್ನಬಸವಣ್ಣನು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನನೆಂದು ಪ್ರಸಿದ್ಧನಾಗಿದ್ದಾನೆ.

For any issues / concerns / feedback please reach out to us at vishaya.in@gmail.com OR contact form in https://vishaya.in
Aktualisiert am
06.07.2024

Datensicherheit

Was die Sicherheit angeht, solltest du als Erstes verstehen, wie Entwickler deine Daten erheben und weitergeben. Die Datenschutz- und Sicherheitspraktiken können je nach deiner Verwendung, deiner Region und deinem Alter variieren. Diese Informationen wurden vom Entwickler zur Verfügung gestellt und können jederzeit von ihm geändert werden.
Diese App kann die folgenden Datentypen an Dritte weitergeben
Geräte- oder andere IDs
Daten werden bei der Übertragung verschlüsselt
Daten können nicht gelöscht werden