ಅಗ್ರಿ ಸೆಂಟ್ರಲ್

ಜಾಹೀರಾತುಗಳನ್ನು ಹೊಂದಿದೆ
4.3
25.6ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಅಗ್ರಿಸೆಂಟ್ರಲ್ ಭಾರತೀಯ ರೈತರಿಗಾಗಿ ವಿಶೇಷವಾಗಿ ತಯಾರಿಸಲಾದ ತಂತ್ರಜ್ಞಾನ ಆಧಾರಿತ ಕೃಷಿ ಅಪ್ಲಿಕೇಶನ್, ಇದು ನಿಮ್ಮ ಕೃಷಿಯಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜಿ.ಪಿ.ಎಸ್, ಉಪಗ್ರಹ ಚಿತ್ರಣ, ಡೇಟ ವಿಶ್ಲೇಷಣೆ, ಮೆಷಿನ್ ಲರ್ನಿಂಗ್ ಮತ್ತು ಚಿತ್ರ ವಿಶ್ಲೇಷಣೆಯಂತಹ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೈತರನ್ನು ಡಿಜಿಟಲ್ ಕೃಷಿ ಯುಗಕ್ಕೆ ಕರೆದೊಯ್ಯುತ್ತದೆ.

ಸಂಪೂರ್ಣ ಉಚಿತವಾದ, ಈ ಆಧುನಿಕ ಅಪ್ಲಿಕೇಶನ್ ಕೆಳಗಿನ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ:

ಫಾರ್ಮ್ ವಾಯಿಸ್: ನಿಮ್ಮ ಪ್ರಶ್ನೆಗಳ ಪರಿಹಾರಕ್ಕಾಗಿ, ದೇಶಾದ್ಯಂತದ ಪ್ರಗತಿಪರ ರೈತರು ಮತ್ತು ಕೃಷಿ ತಜ್ಞರೊಂದಿಗೆ ಸಂವಹನ ನಡೆಸಬಹುದು. ನಿಮ್ಮ ಬೆಳೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು, ನಿಮ್ಮ ಯಶಸ್ಸಿನ ಕಥೆಗಳನ್ನು ಪ್ರದರ್ಶಿಸಬಹುದು ಮತ್ತು ಕೃಷಿಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಚರ್ಚಿಸಬಹುದು.

ಕ್ರಾಪ್‌ಕೇರ್: ಇದು ಅಗ್ರಿ ಸೆಂಟ್ರಲ್ ನ ಅತ್ಯಂತ ಶಕ್ತಿಶಾಲಿ ವೈಶಿಷ್ಟ್ಯವಾಗಿದೆ. ಚಿತ್ರ ಗುರುತಿಸುವಿಕೆ ಮತ್ತು ಹಾನಿಯ ಲಕ್ಷಣಗಳನ್ನು ಆಧರಿಸಿ ತೆಗೆದುಕೊಳ್ಳುವ ನಿರ್ಣಯದಿಂದ ನಿಮ್ಮ ಬೆಳೆಗೆ ಯಾವ ಕೀಟ/ರೋಗ ಆಕ್ರಮಣ ಮಾಡಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಕೆಲವು ಸರಳ ಹಂತಗಳಲ್ಲಿ, ನಿಮ್ಮ ಬೆಳೆಗಳನ್ನು ಗುಣಪಡಿಸಲು ತಜ್ಞರ ಮಾರ್ಗದರ್ಶನ, ಹೆಚ್ಚು ವೆಚ್ಚವಿಲ್ಲದ ರಾಸಾಯನಿಕಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಸಲಹೆಯನ್ನು ಪಡೆಯುತ್ತೀರಿ.

ಕ್ರಾಪ್‌ ಪ್ಲಾನ್: ನಿಮ್ಮ ಬಿತ್ತನೆ ದಿನಾಂಕ ಮತ್ತು ಕೃಷಿ ಪದ್ದತಿ ಹಾಕಿದಾಗ, ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಲು ಮಾಡಬೇಕಾದ ಚಟುವಟಿಕೆಗಳ ಕ್ಯಾಲೆಂಡರ್ ಅನ್ನು ಕ್ರಾಪ್‌ಪ್ಲಾನ್ ನೀಡುತ್ತದೆ.

ಮಾರುಕಟ್ಟೆ ವ್ಯೂ: 25000 ಕ್ಕೂ ಹೆಚ್ಚು ಬೆಲೆ-ಅಂಕಗಳೊಂದಿಗೆ ಅಗ್ರಿ ಸೆಂಟ್ರಲ್ ನಿಮ್ಮ ಬೆಳೆಗಳ ದೈನಂದಿನ ಬೆಲೆಗಳನ್ನು ನೀಡುವ ಅತಿದೊಡ್ಡ ಬೆಲೆಗಳ ಸಂಗ್ರಹವನ್ನು ಹೊಂದಿದೆ. ನಾವು ಉತ್ಪನ್ನಗಳ ಇತ್ತೀಚಿನ ಮಾರುಕಟ್ಟೆ ಬೆಲೆಯನ್ನು ಸರಕಾರದ ಅಧಿಕೃತ ಮೂಲಗಳಿಂದ ಮಾರುಕಟ್ಟೆಯಿಂದ ಪಡೆಯುತ್ತೇವೆ. ಮಾರುಕಟ್ಟೆ ವ್ಯೂನಿಂದ ನೀವು ಸ್ಥಳೀಯ ಮತ್ತು ದೇಶಾದಂತ್ಯವಿರುವ ಮಾರುಕಟ್ಟೆಗಳ ಬೆಲೆಯನ್ನು ನೋಡಬಹುದು. ನಿಮ್ಮ ಬೆಳೆಗಳ ಮಾರುಕಟ್ಟೆ ಬೆಲೆ ಪ್ರವೃತ್ತಿ (ಪ್ರೈಸ್ ಟ್ರೆಂಡ್ಸ್) ಮೂಲಕ ಉತ್ಪನ್ನಗಳನ್ನು ಯಾವಾಗ ಮತ್ತು ಎಲ್ಲಿ ಮಾರಾಟ ಮಾಡಬೇಕೆಂದು ನಿರ್ಧರಿಸಬಹುದು.

ಹವಾಮಾನ: ನಿಮ್ಮ ಕೃಷಿ ಚಟುವಟಿಕೆಗಳನ್ನು ಯೋಜಿಸಿ ಮತ್ತು ಬೆಳೆಗಳ ನಷ್ಟ ತಡೆಯಲು ಹವಾಮಾನ ವಿಭಾಗವು 15 ದಿನಗಳ ಮುನ್ಸೂಚನೆ ನೀಡುತ್ತದೆ.

ಪ್ರೊಫೈಲ್: ನಿಮ್ಮ ಜಮೀನಿನ ವಿಸ್ತಾರವನ್ನು ನೀವು ಸ್ವಯಂ ಲೆಕ್ಕ ಮಾಡಿ, ಮ್ಯಾಪ್ ನಲ್ಲಿ ನಿಮ್ಮ ಜಮೀನಿನ ಗಡಿಗಳನ್ನು ಗುರುತಿಸಬಹುದು.

ಬುಲೆಟಿನ್: ಕೃಷಿಯಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ಜಾಗತಿಕ ಬೆಳವಣಿಗೆಗಳ ಮಾಹಿತಿಯನ್ನು ಪಡೆಯುತ್ತೀರಿ. ಯೋಜನೆಗಳ ವಿಭಾಗವು ನೀವು ಪ್ರಯೋಜನ ಪಡೆಯಬಹುದಾದ ಯೋಜನೆಗಳ ಬಗ್ಗೆ ಹೇಳುತ್ತದೆ ಮತ್ತು ಅದನ್ನು ಹೇಗೆ ಪಡೆಯುವುದು ಎಂಬುದರ ಕುರಿತು ನಿಮಗೆ ಸಲಹೆಯನ್ನು ನೀಡುತ್ತದೆ. ಈ ಮಾಹಿತಿಯನ್ನು ಸರಕಾರದ ಅಧಿಕೃತ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಮೂಲಗಳಿಂದ ಸಂಗ್ರಹಿಸಲಾಗಿದೆ. ಪ್ರತಿಯೊಂದು ಯೋಜನೆಯ ಹೆಚ್ಚಿನ ಮಾಹಿತಿಯ ನಿರ್ದಿಷ್ಟ ಮೂಲಗಳನ್ನು ಲೇಖನಗಳಲ್ಲಿ ಉಲ್ಲೇಖಿಸಲಾಗಿದೆ.

ಬನ್ನಿ, ಅಗ್ರಿಸೆಂಟ್ರಲ್ ನಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ರೈತ ಸಮುದಾಯಕ್ಕೆ ಸೇರಿಕೊಳ್ಳಿ.

ಹಕ್ಕು ನಿರಾಕರಣೆ: ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾದ ಮಾಹಿತಿಯನ್ನು ಅಧಿಕೃತ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಸರಕಾರದ ಜಾಲತಾಣಗಳಾದಂತಹ ಪತ್ರಿಕಾ ಮಾಹಿತಿ ಬ್ಯೂರೋ (https://pib.gov.in) ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ (https://agriwelfare.gov.in/) ಗಳಿಂದ ಪಡೆಯಲಾಗಿದೆ ಎಂಬುದು ತಿಳಿದಿರಲಿ. ಆದಾಗ್ಯೂ, ಅಗ್ರಿಸೆಂಟ್ರಲ್ ಅಪ್ಲಿಕೇಶನ್ ಯಾವುದೇ ರೀತಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರ ಅಥವಾ ಸರಕಾರದ ಇಲಾಖೆ ಅಥವಾ ಏಜೆನ್ಸಿಯೊಂದಿಗೆ ಸಂಯೋಜಿತವಾಗಿಲ್ಲ. ಬೇರೆ ಪದಗಳಲ್ಲಿ ಹೇಳುವುದಾದರೆ, ಅಗ್ರಿ ಸೆಂಟ್ರಲ್ ಕಾಲಕಾಲಕ್ಕೆ ಮಾಹಿತಿ ಮತ್ತು ಸಲಹೆಯನ್ನು ಸರಕಾರದ ಪ್ರಕಟಣೆಯನ್ನು ಆಧರಿಸಿ ನೀಡಿದರೂ, ಅಗ್ರಿಸೆಂಟ್ರಲ್ ಯಾವುದೇ ರೀತಿಯಲ್ಲಿ ಸರಕಾರದೊಂದಿಗೆ ಸಂಯೋಜಿತವಾಗಿಲ್ಲ. ನಾವು ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ ಅಥವಾ ಯಾವುದೇ ಇಲಾಖೆಗಳು ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದೇವೆ ಎಂದು ಹೇಳಿಕೊಳ್ಳುವುದಿಲ್ಲ ಮತ್ತು ಈ ವಿಷಯದಲ್ಲಿ ಎಲ್ಲಿಯಾದರೂ ಯಾವುದೇ ತಪ್ಪು ನಿರೂಪಣೆಯಿಂದ ಉದ್ಭವಿಸಬಹುದಾದ ಯಾವುದೇ ಹೊಣೆಗಾರಿಕೆಯನ್ನು ನಿರಾಕರಿಸುತ್ತೇವೆ.

ಅಗ್ರಿ ಸೆಂಟ್ರಲ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಅಥವಾ ಬಳಸುವ ಮೂಲಕ, ಈ ಹಕ್ಕು ನಿರಾಕರಣೆಗೆ ನಿಮ್ಮ ಒಪ್ಪಿಗೆಯನ್ನು ಸೂಚಿಸುತ್ತೀರಿ. ಅಪ್ಲಿಕೇಶನ್‌ನಲ್ಲಿರುವ ಎಲ್ಲಾ ವಿಷಯ, ಮಿತಿಯಿಲ್ಲದಿರುವುದು ಒಳಗೊಂಡು, ಎಲ್ಲಾ ಡೇಟಾ, ಮಾಹಿತಿ, ಪಠ್ಯ, ಗ್ರಾಫಿಕ್ಸ್, ಲಿಂಕ್‌ಗಳು ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಈ ಅಪ್ಲಿಕೇಶನ್‌ನ ವಿಷಯಗಳನ್ನು ನಮ್ಮ ಅಪ್ಲಿಕೇಶನ್ ಬಳಕೆದಾರರಿಗೆ ಅನುಕೂಲಕರವಾಗಿ ಒದಗಿಸಲಾಗಿದೆ ಮತ್ತು ಮಾಹಿತಿಗಾಗಿ ಬಳಸಲು ಉದ್ದೇಶಿಸಲಾಗಿದೆ.
ಅಪ್‌ಡೇಟ್‌ ದಿನಾಂಕ
ಮೇ 30, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ, ಫೋಟೋಗಳು ಮತ್ತು ವೀಡಿಯೊಗಳು ಮತ್ತು 3 ಇತರರು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಫೋಟೋಗಳು ಮತ್ತು ವೀಡಿಯೊಗಳು ಮತ್ತು 4 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
25.4ಸಾ ವಿಮರ್ಶೆಗಳು
Pintu Wadi
ಏಪ್ರಿಲ್ 15, 2024
Ver good app
AgriCentral
ಏಪ್ರಿಲ್ 15, 2024
Dear Pintu, we are grateful for your feedback. Please recommend our AgriCentral app to your friends. Send us an email to askus@globalagricentral.com or call us at +91 73050 99270 if you have any queries. We shall be happy to help you.
Sharanappa Sharanappa
ಏಪ್ರಿಲ್ 19, 2024
ಮಾರ್ಕೆಟ್ ನೋಡ್ತಾ ಇದೀನಿ
AgriCentral
ಏಪ್ರಿಲ್ 22, 2024
ನಮಸ್ಕಾರಂ! ನಿಮ್ಮ ಪ್ರತಿಕ್ರಿಯೆಗಾಗಿ ನಾವು ಕೃತಜ್ಞರಾಗಿರುತ್ತೇವೆ. ದಯವಿಟ್ಟು ನಿಮ್ಮ ಸ್ನೇಹಿತರಿಗೆ ನಮ್ಮ ಅಗ್ರಿಸೆಂಟ್ರಲ್ ಅಪ್ಲಿಕೇಶನ್ ಅನ್ನು ಶಿಫಾರಸು ಮಾಡಿ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನಮಗೆ askus@globalagricentral.com ಗೆ ಇಮೇಲ್ ಕಳುಹಿಸಿ ಅಥವಾ +91 73050 99270 ಗೆ ಕರೆ ಮಾಡಿ. ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ.
Bharamanagowda Gowda
ಜನವರಿ 25, 2024
ಹವಾಮಾನದ ಬಗ್ಗೆ ನಿಖರವಾದ ಮಾಹಿತಿ ಬೇಕು ಮತ್ತು ಹಲವು ಸರ್ಕಾರಿ ಯೋಜನೆಗಳ ಬಗ್ಗ ನಿಖರವಾದ ಮಾಹಿತಿಯನ್ನು ಕೊಡಬೇಕಾಗಿ ವಿನಂತಿ
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
AgriCentral
ಫೆಬ್ರವರಿ 2, 2024
ನಮಸ್ಕಾರ ರೈತರೇ , ನಿಮ್ಮ ವಿಮರ್ಶೆ ನೀಡಿದಕ್ಕಾಗಿ ಧನ್ಯವಾದಗಳು. ಅಗ್ರಿ ಸೆಂಟ್ರಲ್‌ನಲ್ಲಿ, ನಾವು ನಿಖರವಾದ ಹವಾಮಾನ ಮಾಹಿತಿಯನ್ನು ಮತ್ತು ಯೋಜನೆಗಳ ಕುರಿತು ಪರಿಶೀಲಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ದಯವಿಟ್ಟು askus@globalagricentral.com ಮೂಲಕ ನಿಮ್ಮ ಸಲಹೆ ಸೂಚನೆಗಳನ್ನು ಬರೆಯಿರಿ ಅಥವಾ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ +91 73050 99270 ಸಂಖ್ಯೆಗೆ ಕರೆ ಮಾಡಿ.

ಹೊಸದೇನಿದೆ

Introducing option for the user to request for account deletion.