ನಿಮ್ಮ Android ಫೋನ್ ಅನ್ನು ಬಳಸಿಕೊಂಡು, ಕಿವುಡರು ಮತ್ತು ಆಲಿಸಲು ಕಷ್ಟವಾಗಿರುವ ಜನರ ಪ್ರತಿನಿತ್ಯದ ಸಂಭಾಷಣೆಗಳು ಮತ್ತು ಸುತ್ತಮುತ್ತಲಿನ ಶಬ್ದಗಳನ್ನು ಕೇಳಲು ಅಥವಾ ತಿಳಿಯಲು ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳು ಇನ್ನಷ್ಟು ಸುಲಭವಾಗಿಸುತ್ತದೆ.
ಬಹುತೇಕ ಸಾಧನಗಳಲ್ಲಿ, ನೀವು ಈ ಹಂತಗಳೊಂದಿಗೆ ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳನ್ನು ತೆರೆಯಬಹುದು:
1. ನಿಮ್ಮ ಸಾಧನದ ಸೆಟ್ಟಿಂಗ್‌ಗಳ ಆ್ಯಪ್ ತೆರೆಯಿರಿ
2. ಆ್ಯಕ್ಸೆಸಿಬಿಲಿಟಿ ಎಂಬುದನ್ನು ಟ್ಯಾಪ್ ಮಾಡಿ
3. ನೀವು ಯಾವ ಫೀಚರ್ ಬಳಸಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ, ಲೈವ್ ಟ್ರಾನ್ಸ್‌ಕ್ರೈಬ್ ಅಥವಾ ಸೌಂಡ್ ನೋಟಿಫಿಕೇಶನ್‌ಗಳನ್ನು ಟ್ಯಾಪ್ ಮಾಡಿ
ಲೈವ್ ಟ್ರಾನ್ಸ್‌ಕ್ರೈಬ್ ಅಥವಾ ಸೌಂಡ್ ನೋಟಿಫಿಕೇಶನ್‌ಗಳನ್ನು ಪ್ರಾರಂಭಿಸಲು ನೀವು ಆ್ಯಕ್ಸೆಸಿಬಿಲಿಟಿ ಬಟನ್, ಗೆಸ್ಚರ್ ಅಥವಾ ತ್ವರಿತ ಸೆಟ್ಟಿಂಗ್ಗಳನ್ನು ಸಹ ಬಳಸಬಹುದು (
https://g.co/a11y/shortcutsFAQ).
ನೈಜ-ಸಮಯದ ಟ್ರಾನ್ಸ್‌ಕ್ರಿಪ್ಶನ್‌ಗಳು• 120 ಭಾಷೆಗಳು ಮತ್ತು ಉಪಭಾಷೆಗಳಲ್ಲಿ ನೈಜ ಸಮಯದಲ್ಲಿ ಟ್ರಾನ್ಸ್‌ಕ್ರಿಪ್ಶನ್‌ಗಳನ್ನು ಪಡೆಯಿರಿ. ಹೆಸರುಗಳು ಅಥವಾ ಮನೆಯಲ್ಲಿರುವ ವಸ್ತುಗಳಂತಹ ನೀವು ಆಗಾಗ್ಗೆ ಬಳಸುವ ಕಸ್ಟಮ್ ಪದಗಳನ್ನು ಸೇರಿಸಿ.
• ಯಾರಾದರೂ ನಿಮ್ಮ ಹೆಸರನ್ನು ಹೇಳಿದಾಗ ನಿಮ್ಮ ಫೋನ್ ಅನ್ನು ವೈಬ್ರೇಟ್ ಮಾಡಲು ಸೆಟ್ ಮಾಡಿ.
• ನಿಮ್ಮ ಸಂಭಾಷಣೆಯಲ್ಲಿ ಪ್ರತಿಕ್ರಿಯೆಗಳನ್ನು ಟೈಪ್ ಮಾಡಿ.
• ಉತ್ತಮ ಗುಣಮಟ್ಟದ ಆಡಿಯೋ ಗ್ರಹಿಕೆಗಾಗಿ ವೈಯರ್ಡ್ ಹೆಡ್‌ಸೆಟ್‌ಗಳು, ಬ್ಲೂಟೂತ್ ಹೆಡ್‌ಸೆಟ್‌ಗಳು ಮತ್ತು USB ಮೈಕ್‌ಗಳಲ್ಲಿ ಕಂಡುಬರುವ ಬಾಹ್ಯ ಮೈಕ್ರೊಫೋನ್‌ಗಳನ್ನು ಬಳಸಿ.
• ಫೋಲ್ಡ್ ಮಾಡಬಹುದಾದ ಫೋನ್‌ಗಳಲ್ಲಿ, ಟ್ರಾನ್ಸ್‌ಕ್ರಿಪ್ಷನ್‌ಗಳು ಮತ್ತು ಟೈಪ್ ಮಾಡಿದ ಪ್ರತಿಕ್ರಿಯೆಗಳನ್ನು ಹೊರಗಿನ ಸ್ಕ್ರೀನ್‌ನಲ್ಲಿ ತೋರಿಸಿ ಇದರಿಂದ ಇತರರೊಂದಿಗೆ ಸಂವಹಿಸಲು ಸುಲಭವಾಗುತ್ತದೆ.
• 3 ದಿನಗಳವರೆಗೆ ಟ್ರಾನ್ಸ್‌ಕ್ರಿಪ್ಶನ್‌ಗಳನ್ನು ಸೇವ್ ಮಾಡಲು ಆಯ್ಕೆಮಾಡಿ. ಸೇವ್ ಮಾಡಲಾದ ಟ್ರಾನ್ಸ್‌ಕ್ರಿಪ್ಶನ್‌ಗಳು ನಿಮ್ಮ ಸಾಧನದಲ್ಲಿ 3 ದಿನಗಳವರೆಗೆ ಉಳಿಯುತ್ತವೆ, ಇದರಿಂದ ಅವುಗಳನ್ನು ನೀವು ಎಲ್ಲಿಗೆ ಬೇಕಾದರೂ ಕಾಪಿ ಮಾಡಿ, ಪೇಸ್ಟ್ ಮಾಡಬಹುದು. ಡೀಫಾಲ್ಟ್ ಆಗಿ, ಟ್ರಾನ್ಸ್‌ಕ್ರಿಪ್ಶನ್‌ಗಳನ್ನು ಸೇವ್ ಮಾಡಲಾಗಿಲ್ಲ.
ಸೌಂಡ್ ನೋಟಿಫಿಕೇಶನ್‌ಗಳು• ಸ್ಮೋಕ್ ಅಲಾರಾಂ ಬೀಪ್ ಅಥವಾ ಮಗು ಅಳುವಂತಹ ನಿಮ್ಮ ಸುತ್ತಲಿನ ಪ್ರಮುಖ ಶಬ್ದಗಳ ಕುರಿತು ಸೂಚನೆ ಪಡೆಯಿರಿ.
• ನಿಮ್ಮ ಉಪಕರಣಗಳು ಬೀಪ್ ಮಾಡಿದಾಗ ಸೂಚನೆ ಪಡೆಯಲು ಕಸ್ಟಮ್ ಶಬ್ದಗಳನ್ನು ಸೇರಿಸಿ.
• ನಿಮ್ಮ ಸುತ್ತಲೂ ಏನಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಕಳೆದ 12 ಗಂಟೆಗಳಿಂದ ಸೌಂಡ್‌ಗಳನ್ನು ಪರಿಶೀಲಿಸಿ.
ಅವಶ್ಯಕತೆಗಳು:• Android 12 ಮತ್ತು ಹೆಚ್ಚಿನದು
ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳನ್ನು ಯುಎಸ್ ನಲ್ಲಿನ ಪ್ರೀಮಿಯರ್ ಕಿವುಡ ಮತ್ತು ಶ್ರವಣ ವಿಶ್ವವಿದ್ಯಾಲಯವಾದ ಗಲ್ಲಾಡೆಟ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಾಡಲಾಗಿದೆ.
ಸಹಾಯ ಮತ್ತು ಫೀಡ್‌ಬ್ಯಾಕ್• ಫೀಡ್‌ಬ್ಯಾಕ್ ನೀಡಲು ಮತ್ತು ಉತ್ಪನ್ನ ಅಪ್‌ಡೇಟ್‌ಗಳನ್ನು ಪಡೆಯಲು, ಆ್ಯಕ್ಸೆಸಿಬಿಲ್ Google Group ಅನ್ನು
https://g.co/a11y/forum ನಲ್ಲಿ ಸೇರಿಕೊಳ್ಳಿ• ಲೈವ್ ಲಿಪ್ಯಂತರ ಮತ್ತು ಧ್ವನಿ ನೋಟಿಫಿಕೇಶನ್‌ಗಳನ್ನು ಬಳಸುವ ಸಹಾಯಕ್ಕಾಗಿ,
https://g.co/disabilitysupport ನಲ್ಲಿ ನಮ್ಮನ್ನು ಸಂಪರ್ಕಿಸಿ
ಅನುಮತಿಗಳ ಸೂಚನೆಮೈಕ್ರೋಫೋನ್: ಲೈವ್ ಟ್ರಾನ್ಸ್‌ಕ್ರೈಬ್ ಮತ್ತು ಸೌಂಡ್ ನೋಟಿಫಿಕೇಶನ್‌ಗಳನ್ನು ನಿಮ್ಮ ಸುತ್ತಲಿನ ಮಾತು ಮತ್ತು ಧ್ವನಿಗಳನ್ನು ಟ್ರಾನ್ಸ್‌ಕ್ರೈಬ್ ಮಾಡಲು ಮೈಕ್ರೊಫೋನ್ ಆ್ಯಕ್ಸೆಸ್‌ನ ಅಗತ್ಯವಿದೆ. ಟ್ರಾನ್ಸ್‌ಕ್ರಿಪ್ಶನ್‌ಗಳು ಅಥವಾ ಗುರುತಿಸಲಾದ ಸೌಂಡ್‌ಗಳನ್ನು ಪ್ರಕ್ರಿಯೆಗೊಳಿಸಿದ ನಂತರ ಆಡಿಯೊವನ್ನು ಸಂಗ್ರಹಿಸಲಾಗುವುದಿಲ್ಲ.
ನೋಟಿಫಿಕೇಶನ್‌ಗಳು: ನಿಮಗೆ ಶಬ್ದಗಳ ಕುರಿತು ತಿಳಿಸಲು ಸೌಂಡ್ ನೋಟಿಫಿಕೇಶನ್‌ಗಳ ಫೀಚರ್‌ಗಳಿಗೆ ನೋಟಿಫಿಕೇಶನ್‌ಗಳ ಆ್ಯಕ್ಸೆಸ್‌ನ ಅಗತ್ಯವಿದೆ.
ಸಮೀಪದಲ್ಲಿರುವ ಸಾಧನಗಳು: ನಿಮ್ಮ ಬ್ಲೂಟೂತ್ ಮೈಕ್ರೊಫೋನ್‌ಗಳೊಂದಿಗೆ ಸಂಪರ್ಕಿಸಲು ಲೈವ್ ಟ್ರಾನ್ಸ್‌ಕ್ರೈಬ್‌ಗೆ ಸಮೀಪದಲ್ಲಿರುವ ಸಾಧನಗಳ ಆ್ಯಕ್ಸೆಸ್‌ನ ಅಗತ್ಯವಿದೆ.