ಅರಿವಿನ ಮಾರಿತಂದೆ ವಚನ Arivina Maarithande Vachana Collection
ಈತನ ಕಾಲ, ಸು. 1160. ಅರಿವಿನ ಸ್ವರೂಪದ ಚರ್ಚೆ ಈತನ ಮುಖ್ಯ ಆಸಕ್ತಿ. ಈತನ 309 ವಚನಗಳು ದೊರೆತಿವೆ. ಗುರು, ಲಿಂಗ, ಜಂಗಮ ಮೊದಲಾದ ಪಾರಿಭಾಷಿಕಗಳ ಅರ್ಥವನ್ನು ಕುರಿತ ಚಿಂತನೆ ಈತನಲ್ಲಿದೆ. ಅನೇಕ ರಚನೆಗಳು ಬೆಡಗಿನ ವಚನಗಳ ರೂಪದಲ್ಲಿವೆ. ‘ಸದಾಶಿವ ಮೂರ್ತಿಲಿಂಗ’ ಆಂಕಿತದಲ್ಲಿ ೩೦೯ ವಚನಗಳು ದೊರೆತಿವೆ. ಹೆಸರಿಗೆ ಸೇರಿದ ವಿಶೇಷಣದಂತೆ ಇಲ್ಲಿ ‘ಅರಿವಿಗೆ’ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ತತ್ವ ಪ್ರಧಾನವಾದ ಈತನ ವಚನಗಳಲ್ಲಿ ಗುರು-ಲಿ೦ಗ-ಜ೦ಗಮ-ಪ್ರಸಾದ, ಶೈವ-ವೀರಶೈವ ಕುರಿತ ಸಂಗತಿಗಳು ಚರ್ಚಿತವಾಗಿವೆ. ಹೆಚ್ಚಿನ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ.
For any issues / concerns / feedback please reach out to us at vishaya.in@gmail.com OR contact form in https://vishaya.in
Oxirgi yangilanish
6-iyl, 2024