ಮಕ್ಕಳ ಯೋಗಕ್ಷೇಮವನ್ನು ಬೆಳೆಸುವುದು

ಚೈಲ್ಡ್ ಮೈಂಡ್ ಇನ್‌ಸ್ಟಿಟ್ಯೂಟ್, ಮಾನಸಿಕ ಆರೋಗ್ಯ, ಕಲಿಕೆಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಮಕ್ಕಳ ಹಾಗೂ ಕುಟುಂಬದ ಜೀವನ ಪರಿವರ್ತಿಸಲು ಮುಡಿಪಾಗಿದೆ. ಇದು ಮಕ್ಕಳ ಮಾನಸಿಕ ಆರೋಗ್ಯ ಕಾಪಾಡುವ ಪ್ರಮುಖ ಸ್ವತಂತ್ರ ಲಾಭರಹಿತ ಸಂಸ್ಥೆಯಾಗಿದ್ದು, ಉತ್ತಮ ಗುಣಮಟ್ಟ, ಪುರಾವೆ ಆಧಾರಿತ ಆರೈಕೆ ಒದಗಿಸುತ್ತದೆ. ಪ್ರತಿ ವರ್ಷ ಲಕ್ಷಾಂತರ ಕುಟುಂಬಗಳಿಗೆ ಶೈಕ್ಷಣಿಕ ಸಂಪನ್ಮೂಲ ಒದಗಿಸುವುದು, ಭವಿಷ್ಯದ ಪ್ರಗತಿಯ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಹಿಂದುಳಿದ ಸಮುದಾಯದ ಶಿಕ್ಷಕರಿಗೆ ತರಬೇತಿ ನೀಡುತ್ತದೆ.
ಚೈಲ್ಡ್ ಮೈಂಡ್ ಇನ್‌ಸ್ಟಿಟ್ಯೂಟ್‌ನ ವೈದ್ಯರು ಮಕ್ಕಳ ಮಾನಸಿಕ ಆರೋಗ್ಯ, ಯೋಗಕ್ಷೇಮವನ್ನು ಬೆಂಬಲಿಸಲು ನೆರವಾಗುವುದಕ್ಕೆ ವಿನ್ಯಾಸಗೊಳಿಸಲಾದ ಆ್ಯಪ್‌ಗಳ ಪಟ್ಟಿಯನ್ನು ಸಂಗ್ರಹಿಸಿದ್ದಾರೆ. ಈ ಸಂಗ್ರಹಣೆಯಲ್ಲಿ, ಮಕ್ಕಳು ತಮ್ಮ ಜೀವನದಲ್ಲಿನ ವಯಸ್ಕರೊಂದಿಗೆ ತಮ್ಮ ಭಾವನೆಗಳನ್ನು ಹೆಸರಿಸಲು, ವ್ಯಕ್ತಪಡಿಸಲು ವಿವಿಧ ಮಾರ್ಗಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು. ಉಸಿರಾಟ, ಚಲನೆ, ಇತರ ಜಾಗರೂಕತೆಯ ಚಟುವಟಿಕೆಗಳೊಂದಿಗೆ ದೊಡ್ಡ ಭಾವನೆಗಳು ಮತ್ತು ಸವಾಲುಗಳನ್ನು ನಿರ್ವಹಿಸಲು ಸಹಾಯ ಮಾಡುವ ಆ್ಯಪ್‌ಗಳನ್ನು ಸಹ ಅವರು ಕಂಡುಕೊಳ್ಳುತ್ತಾರೆ, ಜೊತೆಗೆ ವಿನೋದ, ಸಂವಾದಾತ್ಮಕ ಕಥೆಗಳು, ಇತರರೊಂದಿಗಿನ ಅವರ ಸಕಾರಾತ್ಮಕ ಸಂಬಂಧಗಳ ಬೆಳವಣಿಗೆಯನ್ನು ಉತ್ತೇಜಿಸುವ ಆಟಗಳನ್ನು ಕಂಡುಕೊಳ್ಳಬಹುದು.