ಕೋಯಿ... ಮಿಲ್ ಗಯಾ ೨೦೦೩ರ ಒಂದು ಹಿಂದಿ ವೈಜ್ಞಾನಿಕ ಕಲ್ಪನಾಪ್ರಧಾನ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ನಿರ್ದೇಶಿಸಿದ್ದಾರೆ. ಇದು ಕ್ರಿಶ್ ಸರಣಿಯಯಲ್ಲಿನ ಮೊದಲ ಕಂತಾಗಿದೆ. ಈ ಚಿತ್ರವು ೮ ಆಗಸ್ಟ್ ೨೦೦೩ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ ಪ್ರೀತಿ ಜಿಂಟಾ ಮತ್ತು ರೇಖಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕೋಯಿ... ಮಿಲ್ ಗಯಾ ಇತರ ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು ಮತ್ತು ಇದು ಜೆರೂಸೆಲಮ್ ಚಲನಚಿತ್ರೋತ್ಸವ ಹಾಗೂ ಡೆನ್ಮಾರ್ಕ್ನ ನ್ಯಾಟ್ಫ಼ಿಲ್ಮ್ ಉತ್ಸವದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಗಳು, ಐಫ಼ಾ ಪ್ರಶಸ್ತಿಗಳು ಮತ್ತು ಸ್ಕ್ರೀನ್ ಪ್ರಶಸ್ತಿಗಳು ಸೇರಿದಂತೆ ವಿವಿಧ ಮುಖ್ಯ ಬಾಲಿವುಡ್ ಪ್ರಶಸ್ತಿ ಸಮಾರಂಭಗಳಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಗೆದ್ದಿತು. ಈ ಚಿತ್ರದ ಉತ್ತರಭಾಗಗಳೆಂದರೆ ಕ್ರಿಶ್ ಹಾಗೂ ಕ್ರಿಶ್ ೩. ಹಾಗಾಗಿ ಇದು ಕ್ರಿಶ್ ಚಿತ್ರತ್ರಯದಲ್ಲಿ ಮೊದಲನೆಯದಾಗಿತ್ತು. ಚಿತ್ರದ ವಿಷಯವು ೧೯೮೨ರ ಹಾಲಿವುಡ್ ಹಿಟ್ ಚಿತ್ರ ಇ. ಟಿ. ಎಕ್ಸ್ಟ್ರಾ-ಟೆರೆಸ್ಟ್ರಿಯಲ್ಗೆ ಮತ್ತು ಸತ್ಯಜಿತ್ ರೇರ ದಿ ಏಲಿಯನ್ ಚಿತ್ರಗಳೊಂದಿಗೆ ಹೋಲಿಕೆ ಹೊಂದಿದೆ.
ವೈಜ್ಞಾನಿಕ ಕಾದಂಬರಿಗಳು ಮತ್ತು ಫ್ಯಾಂಟಸಿ