ತಾನ್ಹಾಜಿ

2020 • 135 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ತಾನ್ಹಾಜಿ: ದಿ ಅನ್ಸಂಗ್ ವಾರಿಯರ್ 2020ರ ಒಂದು ಹಿಂದಿ ಐತಿಹಾಸಿಕ ಸಾಹಸಪ್ರಧಾನ ಚಲನಚಿತ್ರ. ಓಂ ರೌತ್ ಇದರ ಸಹ-ಬರಹಗಾರರು ಮತ್ತು ನಿರ್ದೇಶಕರಾಗಿದ್ದಾರೆ. ಈ ಚಲನಚಿತ್ರವನ್ನು ಟಿ-ಸೀರೀಸ್ ಹಾಗೂ ಅಜಯ್ ದೇವ್‍ಗನ್ ಎಫ್‍ಫ಼ಿಲ್ಮ್ಸ್ ಅಡಿಯಲ್ಲಿ ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಮತ್ತು ಅಜಯ್ ದೇವಗನ್ ನಿರ್ಮಾಣ ಮಾಡಿದ್ದಾರೆ. ಜನಪ್ರಿಯ ಬೇಡಿಕೆಯ ನಂತರ ಈ ಚಲನಚಿತ್ರವನ್ನು ಮರಾಠಿ ಭಾಷೆಯಲ್ಲಿ ಡಬ್ ಮಾಡಲಾಗಿದೆ. ಮರಾಠಾ ಯೋಧ ತಾನಾಜಿ ಮಾಲುಸಾರೆ ಅವರ ಜೀವನವನ್ನು ಚಿತ್ರಿಸುವ ಈ ಚಲನಚಿತ್ರದಲ್ಲಿ ಅಜಯ್ ದೇವಗನ್, ಸೈಫ್ ಅಲಿ ಖಾನ್ ಮತ್ತು ಕಾಜೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಶರದ್ ಕೇಳ್ಕರ್ ಮತ್ತು ಲ್ಯೂಕ್ ಕೆನ್ನಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 17 ನೇ ಶತಮಾನದಲ್ಲಿ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರವು ಮೊಘಲ್ ಚಕ್ರವರ್ತಿ ಔರಂಗಜೇಬನಿಗೆ ಕೋಂಢಾಣಾ ಕೋಟೆಯು ವರ್ಗಾವಣೆಯಾದ ಮತ್ತು ಅದರ ನಿಯಂತ್ರಣವನ್ನು ತನ್ನ ವಿಶ್ವಾಸಾರ್ಹ ರಜಪೂತ ಕಾವಲುಗಾರ ಉದಯಭಾನ್ ಸಿಂಗ್ ರಾಥೋಡ್‌ಗೆ ವರ್ಗಾಯಿಸಿದ ನಂತರ ಅದನ್ನು ಪುನಃ ವಶಪಡಿಸಿಕೊಳ್ಳಲು ತಾನಾಜಿಯ ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತದೆ.
ಈ ಚಲನಚಿತ್ರವನ್ನು 20 ಜುಲೈ 2017 ರಂದು ಪ್ರಾರಂಭಿಸಲಾಯಿತು. ಇದರ ಮೂಲಕ ರೌತ್ ಬಾಲಿವುಡ್‌ನಲ್ಲಿ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು. ಪ್ರಧಾನ ಛಾಯಾಗ್ರಹಣವು 25 ಸೆಪ್ಟೆಂಬರ್ 2018 ರಂದು ಪ್ರಾರಂಭವಾಯಿತು. ಮತ್ತು ಮೇ 2019 ರೊಳಗೆ ಪೂರ್ಣಗೊಂಡಿತು. ಚಿತ್ರೀಕರಣವು ಹೆಚ್ಚಾಗಿ ಮುಂಬೈನ ಫಿಲ್ಮ್ ಸಿಟಿಯಾದ್ಯಂತ ನಡೆಯಿತು ಮತ್ತು ಕೆಲವು ದೃಶ್ಯಗಳನ್ನು ಪುಣೆಯಲ್ಲಿ ಚಿತ್ರೀಕರಿಸಲಾಯಿತು.