ರಾಜಾ ಹಿಂದೂಸ್ತಾನಿ

1996 • 174 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ರಾಜಾ ಹಿಂದುಸ್ತಾನಿ ೧೯೯೬ರ ಒಂದು ಹಿಂದಿ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಧರ್ಮೇಶ್ ದರ್ಶನ್ ನಿರ್ದೇಶಿಸಿದ್ದಾರೆ. ಇದು ಒಬ್ಬ ಶ್ರೀಮಂತ ಯುವತಿಯನ್ನು ಪ್ರೀತಿಸತೊಡಗುವ ಸಣ್ಣ ಪಟ್ಟಣದ ಒಬ್ಬ ಟ್ಯಾಕ್ಸಿ ಚಾಲಕನ ಕಥೆಯನ್ನು ಹೇಳುತ್ತದೆ. ಆಮಿರ್ ಖಾನ್‌ ಮತ್ತು ಕರಿಶ್ಮಾ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ೧೫ ನವೆಂಬರ್ ೧೯೯೬ರಂದು ಬಿಡುಗಡೆಯಾದ ಈ ಚಿತ್ರದ ಕಥಾವಸ್ತುವು ಶಶಿ ಕಪೂರ್ ಮತ್ತು ನಂದಾ ನಟಿಸಿರುವ ೧೯೬೫ರ ಚಿತ್ರ ಜಬ್ ಜಬ್ ಫೂಲ್ ಖಿಲೆಯಿಂದ ಸ್ಫೂರ್ತಿಪಡೆದಿದೆ. ಚಿತ್ರದ ಸಂಗೀತವನ್ನು ನದೀಮ್-ಶ್ರವಣ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಸಮೀರ್ ಬರೆದಿದ್ದಾರೆ. ಈ ಚಿತ್ರವು ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಟರ ಪ್ರಶಸ್ತಿ ಸೇರಿದಂತೆ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು, ಮತ್ತು ಏಳು ಸ್ಕ್ರೀನ್ ಪ್ರಶಸ್ತಿಗಳನ್ನು ಗೆದ್ದಿತು.
ಒಟ್ಟು ಆದಾಯದ ಅನುಸಾರವಾಗಿ ರಾಜಾ ಹಿಂದುಸ್ತಾನಿ ೧೯೯೦ರ ದಶಕದ ವಾಣಿಜ್ಯಿಕವಾಗಿ ಮೂರನೇ ಅತ್ಯಂತ ಯಶಸ್ವಿ ಹಿಂದಿ ಚಲನಚಿತ್ರವಾಗಿತ್ತು.₹57.5 ದಶಲಕ್ಷದಷ್ಟು ಬಂಡವಾಳದಲ್ಲಿ ತಯಾರಾದ ಈ ಚಿತ್ರವು ವಿಶ್ವಾದ್ಯಂತ ₹763.4 ದಶಲಕ್ಷದಷ್ಟು ಗಳಿಸಿ ಆ ವರ್ಷದ ಅತಿ ಹೆಚ್ಚು ಹಣಗಳಿಸಿದ ಚಿತ್ರವೆನಿಸಿಕೊಂಡಿತು. ಚಿತ್ರದ ಸಂಗೀತವು ಜನಪ್ರಿಯ ಮತ್ತು ಯಶಸ್ವಿಯಾಯಿತು, ವಿಶೇಷವಾಗಿ ಭಾರತದ ಮಧ್ಯ ಹಾಗೂ ಪೂರ್ವದ ರಾಜ್ಯಗಳಲ್ಲಿ. ಕನಸುಗಳು ಮತ್ತು ಆಸೆಗಳಿಂದ ತುಂಬಿದ ಶ್ರೀಮಂತ, ಸುಂದರ, ಸಂವೇದನಶೀಲ, ಯುವತಿ ಆರತಿಯಾಗಿ ಅವರ ಅಂದ ಮತ್ತು ಅಭಿನಯಕ್ಕಾಗಿ ಕರಿಶ್ಮಾ ಕಪೂರ್‌ರನ್ನು ಪ್ರಶಂಸಿಸಲಾಯಿತು.