ಜೋಧಾ ಅಕ್ಬರ್‌

2008 • 213 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಜೋಧಾ-ಅಕ್ಬರ್‌ ಫೆಬ್ರವರಿ 15, 2008ರಂದು ಬಿಡುಗಡೆಯಾದ ಐತಿಹಾಸಿಕ ಪ್ರೇಮ ಕಥಾನಕವುಳ್ಳ ಭಾರತದ ಮಹೋನ್ನತ ಚಿತ್ರ.
ಅಕ್ಯಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಲಗಾನ್‌ ಚಿತ್ರದ ನಿರ್ದೇಶಕರಾದ ಭಾರತದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಆಶುತೋಷ್‌ ಗೋವಾರಿಕರ್‌ ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ.
ಈ ಚಿತ್ರದಲ್ಲಿ ತಾರೆಯರಾದ ಹೃತಿಕ್‌ ರೋಷನ್‌ ಮತ್ತು ಐಶ್ವರ್ಯರೈ ಬಚ್ಚನ್‌ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಬೀರ್‌ ಅಬ್ರಾರ್‌ ಎಂಬ ಹೊಸಮುಖದ ಪರಿಚಯವಿದೆ. ವ್ಯಾಪಕ ಸಂಶೋಧನೆ ಮಾಡಿ ಈ ಚಿತ್ರದ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಮೊದಲ ಚಿತ್ರೀಕರಣ ಆರಂಭವಾಗಿದ್ದು, ಕರ್ಜಾತ್‌ ನಗರದಲ್ಲಿ.
ಮೊಘಲ್‌ ಸಾಮ್ರಾಜ್ಯದ ಮುಸ್ಲಿಂ ಮಹಾ ಚಕ್ರವರ್ತಿ ಅಕ್ಬರ್‌ ಮತ್ತು ಇವನ ಹಿಂದೂ ಪತ್ನಿ ಜೋಧಾಬಾಯಿ ಇವರ ನಡುವಿನ ಪ್ರಣಯದ ಸುತ್ತ ಈ ಚಿತ್ರ ಕೇಂದ್ರೀಕೃತವಾಗಿದೆ. ಇದರಲ್ಲಿ ಚಕ್ರವರ್ತಿ ಅಕ್ಬರನ ಪಾತ್ರವನ್ನು ಹೃತಿಕ್‌ ರೋಷನ್‌ ಹಾಗೂ ಜೋಧಾಬಾಯಿ ಪಾತ್ರವನ್ನು ಐಶ್ವರ್ಯರೈ ಬಚ್ಚನ್‌ ನಿರ್ವಹಿಸಿದ್ದಾರೆ. ಈ ಚಿತ್ರದ ಸಂಗೀತವನ್ನು ಶ್ರೇಷ್ಠ ಸಂಗೀತ ನಿರ್ದೇಶಕ A. R. ರೆಹಮಾನ್‌ ಸಂಯೋಜಿಸಿದ್ದಾರೆ. ಚಿತ್ರದ ಧ್ವನಿಸುರುಳಿ ಜನವರಿ 19, 2008ರಂದು ಬಿಡುಗಡೆಯಾಯಿತು.
ಈ ಚಿತ್ರ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಬಾಚಿಕೊಂಡಿದೆ.