ಟಾಯ್ಲೆಟ್: ಎಕ್ ಪ್ರೇಮ್ ಕಥಾ

2017 • 155 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಟಾಯ್ಲೆಟ್: ಏಕ್ ಪ್ರೇಮ್ ಕಥಾ ೨೦೧೭ರ ಒಂದು ಹಿಂದಿ ಹಾಸ್ಯಭರಿತ ನಾಟಕೀಯ ಚಲನಚಿತ್ರ. ಈ ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ನೀರಜ್ ಪಾಂಡೆ ಸಹನಿರ್ಮಾಪಕರಾಗಿರುವ ಈ ಚಿತ್ರದಲ್ಲಿ, ಮುಖ್ಯ ಪಾತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೇಡ್ನೇಕರ್ ನಟಿಸಿದ್ದಾರೆ. ಅನುಪಮ್ ಖೇರ್, ಸುಧೀರ್ ಪಾಂಡೆ ಮತ್ತು ದಿವ್ಯೇಂದು ಶರ್ಮಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ೧೧ ಆಗಸ್ಟ್ ೨೦೧೭ರಂದು ಬಿಡುಗಡೆಗೊಂಡಿತು. ಈ ಚಿತ್ರವು ವಿಡಂಬನಾತ್ಮಕ ಪ್ರಹಸನವಾಗಿದ್ದು ಭಾರತದಲ್ಲಿನ ನೈರ್ಮಲ್ಯದ ಪರಿಸ್ಥಿತಿಗಳನ್ನು ಸುಧಾರಿಸುವುದನ್ನು ಬೆಂಬಲಿಸುತ್ತದೆ, ಮತ್ತು ಬಯಲು ಬಹಿರ್ದೆಸೆ ಮೇಲೆ ಒತ್ತು ನೀಡುತ್ತದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ.
ಈ ಚಿತ್ರವು ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಸಾರ್ವಕಾಲಿಕವಾಗಿ ಅಕ್ಷಯ್ ಕುಮಾರ್‌ರ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವೆನಿಸಿಕೊಂಡಿತು. ಈ ಚಿತ್ರವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಮನೋಭಾವಗಳ ಕಾರಣದಿಂದಾಗುವ ಭಾರತದ ಶೌಚಾಲಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ, ಜನರ ಬಳಿ ಈಗಲೂ ಈ ಮೂಲಭೂತ ಅಗತ್ಯವಿಲ್ಲ. ಇದು ಮಹಿಳೆಯರನ್ನು ನಿರಾಶೆಗೊಳಿಸಿ ಮತ್ತಷ್ಟು ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತದೆ. ೬೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಅತ್ಯುತ್ತಮ ಚಲನಚಿತ್ರ, ನಾರಾಯಣ್ ಸಿಂಗ್‍ರಿಗೆ ಅತ್ಯುತ್ತಮ ನಿರ್ದೇಶಕ ಮತ್ತು ಅಕ್ಷಯ್ ಕುಮಾರ್‌ರಿಗೆ ಅತ್ಯುತ್ತಮ ನಟ ಸೇರಿದಂತೆ ಮೂರು ನಾಮನಿರ್ದೇಶನಗಳನ್ನು ಪಡೆಯಿತು.