ಕಯಾಮತ್ ಸೇ ಕಯಾಮತ್ ತಕ್

1988 • 163 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಕಯಾಮತ್ ಸೇ ಕಯಾಮತ್ ತಕ್ ೧೯೮೮ರ ಒಂದು ಹಿಂದಿ ಸಂಗೀತಾತ್ಮಕ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಮನ್ಸೂರ್ ಖಾನ್ ನಿರ್ದೇಶಿಸಿದ್ದಾರೆ. ಅವರ ತಂದೆ ನಾಸಿರ್ ಹುಸೇನ್ ಇದನ್ನು ಬರೆದು ನಿರ್ಮಾಣ ಮಾಡಿದ್ದಾರೆ. ಮುಖ್ಯಪಾತ್ರಗಳಲ್ಲಿ ಅವರ ಸೋದರಸಂಬಂಧಿ ಆಮಿರ್ ಖಾನ್‌ ಮತ್ತು ಜೂಹಿ ಚಾವ್ಲಾ ನಟಿಸಿದ್ದಾರೆ. ಚಿತ್ರವು ೨೯ ಎಪ್ರಿಲ್ ೧೯೮೮ರಂದು ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಇದು ಒಂದು ಪ್ರಮುಖ ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಬ್ಲಾಕ್‍ಬಸ್ಟರ್ ಆಯಿತು. ಈ ಚಿತ್ರವು ಆಮಿರ್ ಖಾನ್ ಮತ್ತು ಜೂಹಿ ಚಾವ್ಲಾರನ್ನು ಭಾರಿ ಜನಪ್ರಿಯ ತಾರೆಗಳನ್ನಾಗಿ ಮಾಡಿತು. ಕಥಾವಸ್ತುವು ಲೈಲಾ ಮತ್ತು ಮಜನು, ಹೀರ್ ರಾಂಝಾ, ಮತ್ತು ರೋಮಿಯೋ ಜೂಲಿಯೆಟ್‍ನಂತಹ ಶ್ರೇಷ್ಠ ದುರಂತಾಂತ್ಯದ ಪ್ರಣಯಪ್ರಧಾನ ಕಥೆಗಳ ಆಧುನಿಕ ದಿನದ ನಿರೂಪಣೆಯಾಗಿತ್ತು. ಬಾಲಿವುಡ್‍ನಲ್ಲಿ ಪ್ರಣಯಪ್ರಧಾನ ಸಂಗೀತಾತ್ಮಕ ಚಿತ್ರಶೈಲಿಯನ್ನು ಪುನಃ ಸೃಷ್ಟಿಸಿದ ಈ ಚಿತ್ರವು, ಹಿಂದಿ ಸಿನಿಮಾದ ಇತಿಹಾಸದಲ್ಲಿ ಮೈಲಗಲ್ಲಾಗಿತ್ತು ಮತ್ತು ೧೯೯೦ರ ದಶಕದಲ್ಲಿ ಹಿಂದಿ ಸಿನಿಮವನ್ನು ವ್ಯಾಖ್ಯಾನಿಸಿದ ಬಾಲಿವುಡ್ ಸಂಗೀತಮಯ ಪ್ರಣಯಪ್ರಧಾನ ಚಲನಚಿತ್ರಗಳಿಗೆ ಮಾದರಿಯನ್ನು ಸ್ಥಾಪಿಸಿತು.
ಈ ಚಿತ್ರಕ್ಕಾಗಿ ಆನಂದ್-ಮಿಲಿಂದ್ ಸಂಯೋಜಿಸಿದ್ದ ಮತ್ತು ಮಜ್‍ರೂಹ್ ಸುಲ್ತಾನ್‍ಪುರಿ ಬರೆದಿದ್ದ ಸಾಹಿತ್ಯವಿರುವ ಧ್ವನಿವಾಹಿನಿಯು ಅಷ್ಟೇ ಯಶಸ್ವಿಯಾಗಿತ್ತು, ಮತ್ತು ೧೯೮೦ರ ದಶಕದ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನ ಸಂಗ್ರಹಗಳ ಪೈಕಿ ಒಂದಾಯಿತು. ಇದರ ೮ ದಶಲಕ್ಷಕ್ಕಿಂತೆ ಹೆಚ್ಚು ಧ್ವನಿವಾಹಿನಿ ಸಂಗ್ರಹದ ಪ್ರತಿಗಳು ಮಾರಾಟವಾದವು. "ಪಾಪಾ ಕೆಹತೆ ಹೇ" ಹಾಡು ಈ ಧ್ವನಿಸಂಗ್ರಹದ ಅತಿ ಜನಪ್ರಿಯ ಹಿಟ್ ಹಾಡಾಗಿತ್ತು.