ಬದಾಯಿ ಹೋ

2018
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಬಧಾಯಿ ಹೋ ೨೦೧೮ರ ಒಂದು ಹಿಂದಿ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಅಮಿತ್ ಶರ್ಮಾ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ನೀನಾ ಗುಪ್ತಾ, ಗಜರಾಜ್ ರಾವ್, ಸುರೇಖಾ ಸಿಕ್ರಿ ಮತ್ತು ಸಾನ್ಯಾ ಮಲ್ಹೋತ್ರಾ ನಟಿಸಿದ್ದಾರೆ. ಇದು ಗರ್ಭಿಣಿಯಾಗುವ ಮಧ್ಯಮ ವಯಸ್ಸಿನ ದಂಪತಿ ಮತ್ತು ಅದರಿಂದ ತಮ್ಮ ಪ್ರೌಢ ಪುತ್ರನು ನಿರಾಶನಾಗುವ ಕಥೆಯನ್ನು ಹೇಳುತ್ತದೆ. ಚಿತ್ರವನ್ನು ವಿನೀತ್ ಜೈನ್, ಹೇಮಂತ್ ಭಂಡಾರಿ ಮತ್ತು ಆಲೆಯಾ ಸೇನ್ ಜಂಗ್ಲಿ ಪಿಕ್ಚರ್ಸ್ ಹಾಗೂ ಕ್ರೋಮ್ ಪಿಕ್ಚರ್ಸ್ ಲಾಂಛನದಡಿ ತಯಾರಿಸಿದ್ದಾರೆ. ಈ ಚಿತ್ರವನ್ನು ಶಾಂತನು ಶ್ರೀವಾಸ್ತವ ಮತ್ತು ಅಕ್ಷತ್ ಘಿಲ್ಡಿಯಾಲ್ ಬರೆದಿದ್ದಾರೆ.
ಬಧಾಯಿ ಹೋ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ವಾಣಿಜ್ಯಿಕ ಯಶಸ್ಸಾಗಿ ಹೊರಹೊಮ್ಮಿತು. ₹29 ಕೋಟಿಯ ಬಂಡವಾಳದಲ್ಲಿ ತಯಾರಾದ ಇದು ₹221 ಕೋಟಿಗಿಂತಲೂ ಹೆಚ್ಚು ಹಣಗಳಿಸಿತು, ಇದು ೨೦೧೮ರ ೯ನೇ ಅತಿ ಹೆಚ್ಚು ಹಣ ಗಳಿಸಿದ ಬಾಲಿವುಡ್ ಚಿತ್ರವಾಗಿ ಹೊರಹೊಮ್ಮಿತು. ೬೪ನೇ ಫಿಲ್ಮ್‌ಫ಼ೇರ್ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ಗುಪ್ತಾರಿಗೆ ವಿಮರ್ಶಕರ ಅತ್ಯುತ್ತಮ ನಟಿ, ಸಿಕ್ರಿಗೆ ಅತ್ಯುತ್ತಮ ಪೋಷಕ ನಟಿ, ಮತ್ತು ರಾವ್‍ರಿಗೆ ಅತ್ಯುತ್ತಮ ಪೋಷಕ ನಟ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿತು. ಇದು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಗೆದ್ದಿತು: ಹಿತಕರ ಮನೋರಂಜನೆಯನ್ನು ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಮತ್ತು ಸಿಕ್ರಿಗೆ ಅತ್ಯುತ್ತಮ ಪೋಷಕ ನಟಿ.