ಬದಲಾಪುರ್

2015 • 123 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಬದಲಾಪುರ್ 2015 ರ ಒಂದು ಹಿಂದಿ ನವ-ನ್ವಾರ್ ಸಾಹಸಪ್ರಧಾನ ರೋಮಾಂಚಕಾರಿ ಚಲನಚಿತ್ರ. ಇದನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದು ದಿನೇಶ್ ವಿಜನ್ ಹಾಗೂ ಸುನಿಲ್ ಲುಲ್ಲಾ ಮ್ಯಾಡಾಕ್ ಫಿಲ್ಮ್ಸ್ ಹಾಗೂ ಈರಾಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ಇಟಾಲಿಯನ್ ಬರಹಗಾರ ಮಾಸ್ಸಿಮೊ ಕಾರ್ಲೊಟ್ಟೊರ ಕಾದಂಬರಿ ಡೆತ್ಸ್ ಡಾರ್ಕ್ ಅಬಿಸ್ ಮೇಲೆ ಆಧಾರಿತವಾಗಿದೆ. ಈ ಚಿತ್ರದಲ್ಲಿ ವರುಣ್ ಧವನ್ ಮತ್ತು ನವಾಜ಼ುದ್ದೀನ್ ಸಿದ್ದೀಕಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಹೂಮಾ ಕುರೇಷಿ, ಯಾಮಿ ಗೌತಮ್, ವಿನಯ್ ಪಾಠಕ್, ದಿವ್ಯಾ ದತ್ತಾ ಮತ್ತು ರಾಧಿಕಾ ಆಪ್ಟೆ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 20 ಫೆಬ್ರವರಿ 2015 ರಂದು ಬಿಡುಗಡೆಯಾಯಿತು. ಬದಲಾಪುರ್ ವಿಶ್ವಾದ್ಯಂತ ಸುಮಾರು ₹ 813 ದಶಲಕ್ಷದಷ್ಟು ಗಳಿಸಿತು ಎಂದು ವರದಿಯಾಯಿತು.
ಈ ಚಿತ್ರವು 61 ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಇತರ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು.