ಜಿಂದಗಿ ನಾ ಮಿಲೇಗಿ ದುಬಾರ

2011 • 154 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಜಿಂದಗಿ ನಾ ಮಿಲೇಗಿ ದೋಬಾರಾ ೨೦೧೧ರ ಒಂದು ಹಿಂದಿ ಸ್ನೇಹ ಮತ್ತು ರಸ್ತೆ ಪ್ರಯಾಣಾಧಾರಿತ ಚಲನಚಿತ್ರ. ಇದನ್ನು ಜ಼ೋಯಾ ಅಖ್ತರ್ ನಿರ್ದೇಶಿಸಿದರು ಮತ್ತು ಎಕ್ಸೆಲ್ ಎಂಟರ್ಟೇನ್‍‍ಮೆಂಟ್‍ನ ಫರಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ನಿರ್ಮಿಸಿದರು. ಚಿತ್ರದಲ್ಲಿ ಹೃತಿಕ್‌ ರೋಷನ್‌, ಅಭಯ್ ಡಿಯೋಲ್, ಫ಼ರ್ಹಾನ್ ಅಖ್ತರ್, ಕಟ್ರೀನಾ ಕೈಫ಼್ ಮತ್ತು ಕಲ್ಕಿ ಕೆಕ್ಲ್ಞಾರನ್ನು ಒಳಗೊಂಡಿರುವ ಸಮೂಹ ಪಾತ್ರವರ್ಗವಿದೆ. ಇದನ್ನು ₹550 ದಶಲಕ್ಷದಷ್ಟು ಬಂಡವಾಳದಲ್ಲಿ ಸ್ಪೇನ್, ಭಾರತ, ಈಜಿಪ್ಟ್ ಮತ್ತು ಯುನೈಟಡ್ ಕಿಂಗ್ಡಮ್‍ನಲ್ಲಿ ಚಿತ್ರೀಕರಿಸಲಾಯಿತು. ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಶಂಕರ್-ಎಹಸಾನ್-ಲಾಯ್ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ಜಾವೇದ್ ಅಕ್ತರ್ ಬರೆದರು.
ಚಿತ್ರದ ಕಥೆಯು ಮೂರು ವಾರಗಳ ರಸ್ತೆ ಪ್ರಯಾಣಕ್ಕಾಗಿ ಮತ್ತೆ ಸೇರುವ ಮೂರು ಬಾಲ್ಯದ ಗೆಳೆಯರಾದ ಅರ್ಜುನ್, ಕಬೀರ್ ಹಾಗೂ ಇಮ್ರಾನ್‍ರನ್ನು ಅನುಸರಿಸುತ್ತದೆ. ಅವರು ಸ್ಪೇನ್‍ಗೆ ಪ್ರಯಾಣ ಮಾಡಿ ಅಲ್ಲಿ ಲೈಲಾನನ್ನು ಭೇಟಿಯಾಗುತ್ತಾರೆ. ಅವಳು ಅರ್ಜುನ್‍ನನ್ನು ಪ್ರೀತಿಸತೊಡಗಿ ಅವನಿಗೆ ಅವನ ಕೆಲಸಮಾಡುವ ತೀವ್ರ ಅಪೇಕ್ಷೆಯನ್ನು ಹತ್ತಿಕ್ಕಲು ನೆರವಾಗುತ್ತಾಳೆ. ಕಬೀರ್ ಮತ್ತು ಅವನ ನಿಶ್ಚಿತ ವಧು ನತಾಶಾ ಗಮನಾರ್ಹ ಮನಸ್ತಾಪಗಳನ್ನು ಅನುಭವಿಸುತ್ತಾರೆ. ಅವರ ಪ್ರಯಾಣದ ವೇಳೆ, ಪ್ರತಿಯೊಬ್ಬ ಸ್ನೇಹಿತನು ಆ ಗುಂಪು ಭಾಗವಹಿಸಲು ಒಂದು ಅಪಾಯಕಾರಿ ಕ್ರೀಡೆಯನ್ನು ಆಯ್ಕೆಮಾಡುತ್ತಾನೆ.
ವಿಳಂಬದ ನಂತರ ಜ಼ಿಂದಗಿ ನಾ ಮಿಲೇಗಿ ದೋಬಾರಾ ೧೫ ಜುಲೈ ೨೦೧೧ರಂದು ಬಿಡುಗಡೆಯಾಯಿತು. ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಮತ್ತು ₹1.53 ಬಿಲಿಯನ್‍ನಷ್ಟು ಗಳಿಸಿತು.