ಲಗಾನ್

2002 • 224 ನಿಮಿಷಗಳು
PG
ರೇಟಿಂಗ್
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಲಗಾನ್ ಭಾರೀ ಬಂಡವಾಳದ ೨೦೦೧ರ ಒಂದು ಹಿಂದಿ ಕ್ರೀಡಾಪ್ರಧಾನ ಚಲನಚಿತ್ರ. ಇದನ್ನು ಆಶುತೋಷ್ ಗೋವಾರೀಕರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಆಮಿರ್ ಖಾನ್‌ ನಿರ್ಮಿಸಿದ್ದಾರೆ. ಮುಖ್ಯಪಾತ್ರಗಳಲ್ಲಿ ಆಮಿರ್ ಖಾನ್ ಮತ್ತು ನವನಟಿ ಗ್ರೇಸಿ ಸಿಂಗ್ ನಟಿಸಿದ್ದಾರೆ. ಬ್ರಿಟಿಷ್ ನಟರಾದ ರೇಚಲ್ ಶೆಲಿ ಮತ್ತು ಪೌಲ್ ಬ್ಲ್ಯಾಕ್‍ಥಾರ್ನ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಆಗ ಅಭೂತಪೂರ್ವವಾಗಿದ್ದ ₹೨೫೦ million ಮಿಲಿಯನ್ ಬಂಡವಾಳದಲ್ಲಿ ತಯಾರಾದ ಈ ಚಲನಚಿತ್ರವು ಆಮಿರ್ ಖಾನ್ ಪ್ರೊಡಕ್ಷನ್ಸ್‌ನ ಮೊದಲ ಯೋಜನೆಯಾಗಿತ್ತು. ಈ ಚಿತ್ರವನ್ನು ಭುಜ್ ಹತ್ತಿರದ ಹಳ್ಳಿಗಳಲ್ಲಿ ಚಿತ್ರೀಕರಿಸಲಾಗಿತ್ತು.
ಚಿತ್ರವು ಭಾರತದ ವಸಾಹತುಶಾಹಿ ಬ್ರಿಟಿಷ್ ರಾಜ್‍ನ ವಿಕ್ಟೋರಿಯನ್ ಅವಧಿಯ ಹಿನ್ನೆಲೆ ಹೊಂದಿದೆ. ಕಥೆಯು ಒಂದು ಚಿಕ್ಕ ಹಳ್ಳಿಯ ಬಗ್ಗೆ ಆಗಿದ್ದು ಇದರ ನಿವಾಸಿಗಳು ಹೆಚ್ಚಿನ ತೆರಿಗೆಗಳಿಂದ ಪೀಡಿತರಾಗಿದ್ದಾಗ, ಒಬ್ಬ ಅಹಂಕಾರಿ ಅಧಿಕಾರಿಯು ತೆರಿಗೆಗಳನ್ನು ತಪ್ಪಿಸಲು ಪಣವಾಗಿ ಅವರಿಗೆ ಕ್ರಿಕೆಟ್ ಆಟವಾಡುವ ಸವಾಲೊಡ್ಡುತ್ತಾನೆ. ಇದರಿಂದ ಆ ಜನರು ಒಂದು ಅಸಾಧಾರಣ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕಥೆಯು ಈ ಪರಿಸ್ಥಿತಿಯ ಸುತ್ತ ತಿರುಗುತ್ತದೆ. ಹಳ್ಳಿಯವರು ಈ ವಿದೇಶಿ ಆಟವನ್ನು ಕಲಿಯುವ ಪ್ರಯಾಸದ ಕಾರ್ಯವನ್ನು ಎದುರಿಸುತ್ತಾರೆ ಮತ್ತು ತಮ್ಮ ಹಳಿಯ ಹಣೆಬರಹವನ್ನು ಬದಲಾಯಿಸುವ ಫಲಿತಾಂಶಕ್ಕಾಗಿ ಆಡುವ ಸಂದರ್ಭ ಏರ್ಪಡುತ್ತದೆ.
ಲಗಾನ್ ವಿಮರ್ಶಾತ್ಮಕ ಮೆಚ್ಚುಗೆಯನ್ನು ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು, ಜೊತೆಗೆ ಅನೇಕ ಭಾರತೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆಯಿತು. ಮದರ್ ಇಂಡಿಯಾ ಮತ್ತು ಸಲಾಮ್ ಬಾಂಬೆ!
ರೇಟಿಂಗ್
PG