ರಾಮ್ ತೇರಿ ಗಂಗಾ ಮೈಲಿ

1985 • 170 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ರಾಮ್ ತೇರಿ ಗಂಗಾ ಮೆಯ್ಲಿ ೧೯೮೫ರ ಒಂದು ಹಿಂದಿ ಚಲನಚಿತ್ರ. ಇದನ್ನು ನಟ ನಿರ್ದೇಶಕ ರಾಜ್ ಕಪೂರ್ ನಿರ್ದೇಶಿಸಿದ್ದಾರೆ. ಚಿತ್ರದ ಮುಖ್ಯಪಾತ್ರಗಳಲ್ಲಿ ಮಂದಾಕಿನಿ ಹಾಗೂ ರಾಜೀವ್ ಕಪೂರ್ ನಟಿಸಿದ್ದಾರೆ. ಈ ಚಲನಚಿತ್ರಕ್ಕಾಗಿ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು.
ಮಂದಾಕಿನಿಯ ಸ್ತನ್ಯಪಾನ ಹಾಗೂ ಪಾರದರ್ಶಕ ಸೀರೆಯಲ್ಲಿ ಸ್ನಾನದ ದಿಟ್ಟ ದೃಶ್ಯಗಳಿಗಾಗಿ ಚಿತ್ರವು ಬಹಳ ವಿವಾದಾತ್ಮಕವಾಯಿತು. ಇದನ್ನು ಆಗ ಸಂಪ್ರದಾಯವಾದಿ ಭಾರತೀಯ ಸೆನ್ಸರ್ ಮಂಡಳಿಯು ಅನುಮತಿಸುತ್ತಿರಲಿಲ್ಲ. ಆದರೂ, ಇದು ಅ ವಯಸ್ಸಿನ ವರ್ಗೀಕರಣ ಪಡೆದಿತ್ತು. ಇದನ್ನು ನಂತರ ಅ/ವ ಎಂದು ತಿದ್ದುಪಡಿ ಮಾಡಲಾಯಿತು. ಇದು ರಾಜ್ ಕಪೂರ್ ನಿರ್ದೇಶನದ ಕೊನೆಯ ಚಿತ್ರವಾಗಿತ್ತು.
ರಾಮ್ ತೇರಿ ಗಂಗಾ ಮೆಯ್ಲಿ ಚಿತ್ರವನ್ನು ಭಾರತೀಯ ಸಿನಿಮಾದ 'ಸಾರ್ವಕಾಲಿಕ ಬ್ಲಾಕ್‍ಬಸ್ಟರ್‌ಗಳ' ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಂಬೈಯಲ್ಲಿ ಈ ಚಿತ್ರವು ವಜ್ರ ಮಹೋತ್ಸವವನ್ನು ಆಚರಿಸಿತು ಮತ್ತು ಇತರ ಪ್ರಮುಖ ನಗರಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿತು. ಈ ಚಿತ್ರವು ಆ ವರ್ಷ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವಾಗಿತ್ತು.