ಸೀಕ್ರೆಟ್ ಸೂಪರ್‌ಸ್ಟಾರ್‌

2017 • 150 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಸೀಕ್ರೆಟ್ ಸೂಪರ್‌ಸ್ಟಾರ್ ೨೦೧೭ರ ಒಂದು ಹಿಂದಿ ಸಂಗೀತಮಯ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ಅದ್ವೈತ್ ಚಂದನ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಾಣಶಾಲೆಯಡಿ ಆಮಿರ್ ಖಾನ್‌ ಮತ್ತು ಕಿರಣ್ ರಾವ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಜ಼ಾಯರಾ ವಸೀಮ್, ಮೆಹೆರ್ ವಿಜ್, ರಾಜ್ ಅರ್ಜುನ್ ಮತ್ತು ಆಮಿರ್ ಖಾನ್ ನಟಿಸಿದ್ದಾರೆ. ಈ ಚಿತ್ರವು ಗಾಯಕಿಯಾಗಲು ಬಯಸಿ ನಿಕಾಬ್‍ನಿಂದ ತನ್ನ ಗುರುತನ್ನು ಮರೆಮಾಚಿ ಯೂಟ್ಯೂಬ್‌‍ನಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುವ, ಒಬ್ಬ ಹದಿಹರೆಯದ ಹುಡುಗಿ ಪ್ರೌಢತ್ವಕ್ಕೆ ಬರುವ ಮತ್ತು ತನ್ನ ತಾಯಿ, ತಂದೆ ಹಾಗೂ ಮಾರ್ಗದರ್ಶಿಯೊಂದಿಗೆ ಅವಳ ಸಂಬಂಧಗಳ ಕಥೆಯನ್ನು ಹೇಳುತ್ತದೆ. ಈ ಚಿತ್ರವು ಸ್ತ್ರೀ ಸಮಾನತಾವಾದ, ಲಿಂಗ ಸಮಾನತೆ ಮತ್ತು ಗೃಹ ಹಿಂಸಾಚಾರ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ಕುರಿತಾಗಿದೆ.
ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ವಸೀಮ್ ಶ್ರೇಷ್ಠ ಸಾಧನೆಗಾಗಿ ರಾಷ್ಟ್ರೀಯ ಬಾಲ ಪ್ರಶಸ್ತಿಯನ್ನು ಗೆದ್ದರು. ೬೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸೀಕ್ರೆಟ್ ಸೂಪರ್‌ಸ್ಟಾರ್ ಅತ್ಯುತ್ತಮ ಚಲನಚಿತ್ರ, ಚಂದನ್‍ರಿಗೆ ಅತ್ಯುತ್ತಮ ನಿರ್ದೇಶಕ, ವಸೀಮ್‍ರಿಗೆ ಅತ್ಯುತ್ತಮ ನಟಿ ಮತ್ತು ಖಾನ್‍ರಿಗೆ ಅತ್ಯುತ್ತಮ ಪೋಷಕ ನಟ ಸೇರಿದಂತೆ ಹತ್ತು ನಾಮನಿರ್ದೇಶನಗಳನ್ನು ಪಡೆಯಿತು. ಈ ಚಿತ್ರವು ವಸೀಮ್‍ರಿಗೆ ವಿಮರ್ಶಕರ ಅತ್ಯುತ್ತಮ ನಟಿ, ವಿಜ್‍ರಿಗೆ ಅತ್ಯುತ್ತಮ ಪೋಷಕ ನಟಿ ಮತ್ತು ಮೆಘನಾ ಮಿಶ್ರಾರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಸೇರಿದಂತೆ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿತು.