ಉಡ್ತಾ ಪಂಜಾಬ್

2016 • 132 ನಿಮಿಷಗಳು
ಈ ಐಟಂ ಲಭ್ಯವಿಲ್ಲ

ಈ ಚಲನಚಿತ್ರದ ಕುರಿತು

ಉಡ್ತಾ ಪಂಜಾಬ್ 2016 ರ ಒಂದು ಹಿಂದಿ ಕರಾಳ ವಿನೋದ ಅಪರಾಧಪ್ರಧಾನ ಚಲನಚಿತ್ರ. ಅಭಿಷೇಕ್ ಚೌಬೆ ಇದರ ಸಹ-ಬರಹಗಾರರು ಮತ್ತು ನಿರ್ದೇಶಕರಾಗಿದ್ದಾರೆ. ಇದು ಸಡಿಲವಾಗಿ ಭಾರತದ ಪಂಜಾಬ್ ರಾಜ್ಯದ ಯುವಜನರ ಮಾದಕ ವ್ಯಸನವನ್ನು ಮತ್ತು ಅದರ ಸುತ್ತಲಿನ ವಿವಿಧ ಪಿತೂರಿಗಳನ್ನು ಆಧರಿಸಿದೆ ಮತ್ತು ಅದಕ್ಕೆ ಸಂಬಂಧಿತವಾಗಿದೆ. ಈ ಚಿತ್ರವನ್ನು ಅನುರಾಗ್ ಕಶ್ಯಪ್ ಅವರ ನಿರ್ಮಾಣಶಾಲೆ ಫ್ಯಾಂಟಮ್ ಫಿಲ್ಮ್ಸ್ ಸಹಯೋಗದೊಂದಿಗೆ ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ತಮ್ಮ ಲಾಂಛನವಾದ ಬಾಲಾಜಿ ಮೋಷನ್ ಪಿಕ್ಚರ್ಸ್‌ನಡಿ ನಿರ್ಮಾಣ ಮಾಡಿದ್ದಾರೆ. ಇದು ಶಾಹಿದ್ ಕಪೂರ್, ಆಲಿಯಾ ಭಟ್, ಕರೀನಾ ಕಪೂರ್ ಮತ್ತು ದಿಲ್ಜಿತ್ ದೋಸಾಂಜ್ ಅವರನ್ನೊಳಗೊಂಡ ಸಮೂಹ ಪಾತ್ರವರ್ಗವನ್ನು ಹೊಂದಿದೆ.
4 ಜೂನ್ 2016ರಂದು, ಚಿತ್ರದಲ್ಲಿ ತೋರಿಸಲ್ಪಟ್ಟ ವಿಷಯಗಳು ಸಾಮಾನ್ಯ ಪ್ರೇಕ್ಷಕರಿಗೆ ತುಂಬ ಅಶ್ಲೀಲವಾಗಿವೆಯೆಂದು ಹೇಳಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರದ ಬಿಡುಗಡೆಯ ಮೇಲೆ ತಡೆಯಾಜ್ಞೆಯನ್ನು ಕೋರಿತು. ಇದರ ಪರಿಣಾಮವಾಗಿ, ಚಿತ್ರದಲ್ಲಿ ಒಟ್ಟು 89 ಕಡಿತಗಳನ್ನು ಮಾಡಲು ನಿರ್ಮಾಪಕರಿಗೆ ನಿರ್ದೇಶನ ನೀಡಲಾಯಿತು. ಆದಾಗ್ಯೂ, 13 ಜೂನ್ 2016 ರಂದು, ಬಾಂಬೆ ಹೈಕೋರ್ಟ್ ತಡೆಯಾಜ್ಞೆಯನ್ನು ಅಮಾನ್ಯಗೊಳಿಸಿ ಚಿತ್ರಕಥೆಯಲ್ಲಿ ಒಂದೇ ಕಡಿತದೊಂದಿಗೆ ಚಿತ್ರದ ರಾಷ್ಟ್ರೀಯ ಬಿಡುಗಡೆಗೆ ಅನುಮತಿ ನೀಡಿತು. ಈ ಚಿತ್ರವು 17 ಜೂನ್ 2016 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ₹470 ದಶಲಕ್ಷ ಬಂಡವಾಳದಲ್ಲಿ ತಯಾರಾದ ಉಡ್ತಾ ಪಂಜಾಬ್ ವಿಶ್ವಾದ್ಯಂತ ಸುಮಾರು ₹960 ದಶಲಕ್ಷದಷ್ಟು ಗಳಿಸಿತು. ಇದು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆಯಿತು.