ಅಕ್ಷರಾ(Akshara) ಫೌಂಡೇಶನ್ ರವರ ಬಿಲ್ಡಿಂಗ್ ಬ್ಲಾಕ್ಸ್ ಆಪ್ ಉಚಿತ ಗಣಿತ ಕಲಿಕೆಯ ಆಪ್ ಆಗಿದ್ದು, ಇದು ಮಕ್ಕಳಿಗಾಗಿ ಶಾಲೆಯಲ್ಲಿ ಕಲಿತ ಗಣಿತದ ಪರಿಕಲ್ಪನೆಗಳನ್ನು, ಗಣಿತದ ಮೋಜಿನ ಆಟಗಳಂತೆ ಅಭ್ಯಾಸ ಮಾಡಲು ನೆರವಾಗುತ್ತದೆ. ಇದನ್ನು ಬೇಸಿಕ್-ಲೆವೆಲ್ ಸ್ಮಾರ್ಟ್ ಫೋನ್ ಗಳಲ್ಲಿ, ಆನ್ ಲೈನ್(ONLINE) ಮತ್ತು ಆಫ್ ಲೈನ್(OFFLINE) ನಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. NCF2005, NCERT ಮಾರ್ಗದರ್ಶನಗಳಿಗೆ ಮ್ಯಾಪ್ ಮಾಡಲ್ಪಟ್ಟಿದ್ದು, ಇದು ಪ್ರಸ್ತುತ 5 ಭಾಷೆಗಳಲ್ಲಿ ಲಭ್ಯವಿದೆ ಮತ್ತು ಒಟ್ಟು 250+ ಪ್ರತ್ಯಕ್ಷಜನಿತ ಉಚಿತ ಗಣಿತ ಆಟಗಳನ್ನು ನೀಡುತ್ತದೆ.
ಶಾಲೆಗಳಲ್ಲಿ ಮಕ್ಕಳು ಸಾಮಾನ್ಯವಾಗಿ ವಾರದಲ್ಲಿ 2 ಗಂಟೆಗಳಿಗಿಂತ ಕಡಿಮೆ ಕಾಲ ಗಣಿತ ಕಲಿಕೆಗೆ ಒಳಗಾಗುತ್ತಾರೆ. ಇದಲ್ಲದೆ, ಅವರಲ್ಲಿ ಅನೇಕರು ಮನೆಯಲ್ಲಿ ಕಲಿಕೆಯ ವಾತಾವರಣವನ್ನು ಹೊಂದಿರುವುದಿಲ್ಲ. ಈ ಉಚಿತ ಗಣಿತ ಕಲಿಕೆ ಆಪ್ 1-5 ತರಗತಿಯ ಮಕ್ಕಳಿಗೆ ಗಣಿತದ ಅಭ್ಯಾಸ ಮಾಡಲು ಮತ್ತು ಗಣಿತಶಾಸ್ತ್ರವನ್ನು ಕಲಿಯಲು ನೆರವಾಗುತ್ತದೆ.
ಉಚಿತ ಗಣಿತ ಕಲಿಕೆ ಆಪ್ ಕೆಳಗಿನವುಗಳನ್ನು ಒಳಗೊಂಡಿದೆ:
▶ ತರಗತಿ 5 ರ ಗಣಿತ
▶ ತರಗತಿ 4 ರ ಗಣಿತ
▶ ತರಗತಿ 3 ರ ಗಣಿತ
▶ ತರಗತಿ 2 ರ ಗಣಿತ
▶ ತರಗತಿ 1 ರ ಗಣಿತ
▶ಮಕ್ಕಳಿಗಾಗಿ ಗಣಿತದ ಆಟಗಳು ಮತ್ತು
▶ ಮೋಜುಭರಿತ ಗಣಿತದ ಆಟಗಳು
▶ಎಲ್ಲರಿಗೂ ಉಚಿತ ಗಣಿತದ ಆಟಗಳು
▶ ಹಿಂದಿ ಭಾಷೆಯಲ್ಲಿ ಗಣಿತ
▶ ಕನ್ನಡ ಭಾಷೆಯಲ್ಲಿ ಗಣಿತ
▶ ಒಡಿಯಾ ಭಾಷೆಯಲ್ಲಿ ಗಣಿತ ಮತ್ತು
▶ ಗುಜ್ರಾತಿ / ಗುಜರಾತಿ ಭಾಷೆಯಲ್ಲಿ ಗಣಿತ
ಪ್ರಮುಖ ವೈಶಿಷ್ಟ್ಯಗಳು:
✴ ಶಾಲೆಯಲ್ಲಿ ಕಲಿತ ಗಣಿತ ಪರಿಕಲ್ಪನೆಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದೆ
✴ ಶಾಲಾ ಪಠ್ಯಕ್ರಮದ ಗೇಮಿಂಗ್ ರೂಪಾಂತರ - NCF 2005 ವಿಷಯಗಳಿಗೆ ಮ್ಯಾಪ್ ಮಾಡಲಾಗಿದೆ
✴ 6-12 ವಯಸ್ಸಿನ (ಗ್ರೇಡ್ 1 ರಿಂದ ಗ್ರೇಡ್ 5) ಮಕ್ಕಳಿಗೆ ಸೂಕ್ತವಾಗಿದೆ
✴ ಐದು ಭಾಷೆಗಳಲ್ಲಿ ಲಭ್ಯವಿದೆ - ಇಂಗ್ಲೀಷ್, ಕನ್ನಡ, ಹಿಂದಿ, ಒಡಿಯಾ ಮತ್ತು ಗುಜರಾತಿ
✴ ಕಟ್ಟುನಿಟ್ಟಾಗಿ ಗಣಿತ ಶಿಕ್ಷಣವನ್ನು ಅನುಸರಿಸುತ್ತದೆ, ಸರಿಯಾದ ಪರಿಕಲ್ಪನೆಗಳ ಮೂಲಕ ಮಗುವಿಗೆ ಕ್ರಮೇಣವಾಗಿ ಅರ್ಥ ಆಗುವಂತೆ ಹೇಳಿಕೊಡಲಾಗುತ್ತದೆ.
✴ ಹೆಚ್ಚು ಆಕರ್ಷಕವಾಗಿದ್ದು - ಸರಳ ಅನಿಮೇಷನ್ ಗಳು, ನಿರೂಪಿಸಬಹುದಾದ ಪಾತ್ರಗಳು ಮತ್ತು ವರ್ಣರಂಜಿತ ವಿನ್ಯಾಸವನ್ನು ಹೊಂದಿದೆ
✴ ಎಲ್ಲಾ ಸೂಚನೆಗಳು, ಬಳಕೆಗೆ ಸುಲಭವಾಗುವಂತೆ ಆಡಿಯೊ ಆಧಾರಿತವಾಗಿವೆ
✴ 6 ಮಕ್ಕಳು ಈ ಆಟವನ್ನು ಒಂದೇ ಸಾಧನದಲ್ಲಿ ಆಡಬಹುದು
✴ 250 ಕ್ಕೂ ಹೆಚ್ಚು ಪರಸ್ಪರ ಪ್ರಭಾವ ಬೀರುವ ಚಟುವಟಿಕೆಗಳು ಇವೆ (ಕೂಲ್ ಮ್ಯಾಥ್ ಆಟಗಳು)
✴ ಪ್ರಾಕ್ಟಿಸ್ ಮ್ಯಾಥ್ ಮೋಡ್ ಹೊಂದಿದೆ - ಕಲಿತ ಪರಿಕಲ್ಪನೆಗಳನ್ನು ಬಲಪಡಿಸಲು ಮತ್ತು ಮ್ಯಾಥ್ ಚಾಲೆಂಜ್ ಮೋಡ್ - ಕಲಿಕೆಯ ಮಟ್ಟವನ್ನು ನಿರ್ಣಯಿಸಲು
✴ ಯಾವುದೇ ಒಳ-ಆಪ್ ಖರೀದಿಗಳು, ಅಪ್ಸೆಲ್ ಗಳು ಅಥವಾ ಜಾಹೀರಾತುಗಳಿಲ್ಲ
✴ ಅತ್ಯಂತ ಬೇಸಿಕ್-ಲೆವೆಲ್ ಸ್ಮಾರ್ಟ್ ಫೋನ್ ಗಳಲ್ಲಿ, ಆನ್ ಲೈನ್(ONLINE) ಮತ್ತು ಆಫ್ ಲೈನ್(OFFLINE) ನಲ್ಲಿ ಕಾರ್ಯನಿರ್ವಹಿಸುತ್ತದೆ.
✴ 1 GB RAM ಹೊಂದಿರುವ ಸ್ಮಾರ್ಟ್ ಫೋನ್ ಗಳಲ್ಲಿ ಮತ್ತು ಆಂಡ್ರಾಯ್ಡ್ -ಆಧಾರಿತ ಟ್ಯಾಬ್ಲೆಟ್ ಗಳಲ್ಲಿ ಎಲ್ಲಾ ಆಟಗಳನ್ನು ಪರೀಕ್ಷಿಸಲಾಗಿದೆ
ಆಪ್ ವಿಷಯಗಳು ಕೆಳಗಿನವುಗಳನ್ನು ಒಳಗೊಂಡಿದೆ:
◾ ನಂಬರ್ ಸೆನ್ಸ್ - ಮಕ್ಕಳಿಗಾಗಿ ಸಂಖ್ಯೆ ಗುರುತಿಸುವಿಕೆ, ಸಂಖ್ಯೆ ಟ್ರೇಸಿಂಗ್, ಸೀಕ್ವೆನ್ಸ್, ಗಣಿತ ಕಲಿಯಿರಿ
◾ ಎಣಿಕೆ - ಫಾರ್ವರ್ಡ್, ಬ್ಯಾಕ್ ವರ್ಡ್, ಕಾಣೆಯಾದ ಸಂಖ್ಯೆಗಳನ್ನು ಕಂಡುಹಿಡಿಯಿರಿ, ಮೊದಲು ಮತ್ತು ನಂತರ, ಪ್ಲೇಸ್ ವ್ಯಾಲ್ಯೂ, ಭಿನ್ನರಾಶಿಗಳು(ಫ್ರ್ಯಾಕ್ಶನ್ಸ್) - 1, 2, ಮತ್ತು 3 ಅಂಕಿಯ ಸಂಖ್ಯೆಗಳಿಗಾಗಿ
◾ ಹೋಲಿಕೆ - ಹೆಚ್ಚು, ಕಡಿಮೆ, ಸಮಾನ, ಆರೋಹಣ ಕ್ರಮ, ಅವರೋಹಣ ಕ್ರಮ,
◾ ಸಂಖ್ಯೆ ರಚನೆ - 1,2 ಮತ್ತು 3 ಅಂಕಿಯ ಸಂಖ್ಯೆಗಳಿಗಾಗಿ
◾ ಸಂಖ್ಯೆ ಲೆಕ್ಕಾಚಾರಗಳು - ಕೂಡಿಸುವ ಮತ್ತು ಕಳೆಯುವ ಆಟಗಳು, ಗುಣಾಕಾರ ಆಟಗಳು, ವಿಭಾಗವನ್ನು ಕಲಿಯಿರಿ - 1, 2, ಮತ್ತು 3 ಅಂಕಿ ಸಂಖ್ಯೆಗಳಿಗೆ
◾ಅಳತೆಗಳನ್ನು ತಿಳಿಯಿರಿ - ಆಕಾರ/ಗಾತ್ರದ ಸಂಬಂಧಗಳು - ದೂರ-ಹತ್ತಿರ, ಕಿರಿದಾದ-ಅಗಲವಾದ, ಸಣ್ಣ-ದೊಡ್ಡ, ಸಣ್ಣ-ದಪ್ಪ, ಎತ್ತರದ-ಚಿಕ್ಕದಾದ, ಭಾರವಾದ-ತೆಳುವಾದ
◾ ಉದ್ದ - ಅಪ್ರಮಾಣಿತ ಘಟಕಗಳು ಮತ್ತು ಪ್ರಮಾಣಿತ ಘಟಕಗಳೊಂದಿಗೆ ಅಳತೆ - ಸೆಂಟಿಮೀಟರ್ (cm) ಮತ್ತು ಮೀಟರ್ (m) ನಲ್ಲಿ
◾ ತೂಕ - ಅಪ್ರಮಾಣಿತ ಮತ್ತು ಪ್ರಮಾಣಿತ ಘಟಕಗಳೊಂದಿಗೆ ಅಳತೆ - ಗ್ರಾಂ (g), ಕಿಲೋಗ್ರಾಂ (kg) ನಲ್ಲಿ
◾ ಘನ ಅಳತೆ - ಸಾಮರ್ಥ್ಯ - ಅಪ್ರಮಾಣಿತ ಘಟಕಗಳು, ಪ್ರಮಾಣಿತ ಘಟಕ - ಮಿಲಿಲೀಟರ್ (ml), ಲೀಟರ್ (l)
ಸಮಯ
◾ ಕ್ಯಾಲೆಂಡರ್ - ಕ್ಯಾಲೆಂಡರ್ ನ ಭಾಗಗಳನ್ನು ಗುರುತಿಸಿ - ದಿನಾಂಕ, ದಿನ, ವರ್ಷ, ವಾರದ ದಿನಗಳು, ತಿಂಗಳು
◾ ಗಡಿಯಾರ - ಗಡಿಯಾರದ ಭಾಗಗಳನ್ನು ಗುರುತಿಸಿ, ಸಮಯವನ್ನು ಓದಿ, ಸಮಯವನ್ನು ತೋರಿಸುವುದು
◾ ಕಳೆದ ಸಮಯ - ದಿನದ ಘಟನೆಗಳ ಅನುಕ್ರಮ
◾ಆಕಾರಗಳು - 2D- ಆಕಾರಗಳು, 3D- ಆಕಾರಗಳು, ಪ್ರತಿಫಲನ, ತಿರುಗುವಿಕೆ, ಸಿಮೆಟ್ರಿ, ಪ್ರದೇಶ, ಪರಿಧಿ, ವಲಯ - ತ್ರಿಜ್ಯ, ವ್ಯಾಸ
ಉಚಿತ ಬಿಲ್ಡಿಂಗ್ ಬ್ಲಾಕ್ಸ್ ಆಪ್, ಭಾರತದಲ್ಲಿ ಚಾರಿಟಿ ಸಂಸ್ಥೆ / ಎನ್ ಜಿ ಒ ಆಗಿರುವ ಅಕ್ಷರಾ(Akshara) ಫೌಂಡೇಶನ್ ಅವರದ್ದು.
The free Building Blocks app is by Akshara Foundation which is a charity organization/ NGO in India.
ಅಪ್‌ಡೇಟ್ ದಿನಾಂಕ
ಫೆಬ್ರ 13, 2024