ಕೊರೊನಾಲಜಿ: ಕೋವಿಡ್-೧೯ ಕುರಿತ ಮಾಹಿತಿ 'ಗುಳಿಗೆ'ಗಳ ಸಂಕಲನ

· Ejnana Trust
4.2
4 ግምገማዎች
ኢ-መጽሐፍ
81
ገጾች

ስለዚህ ኢ-መጽሐፍ

ಕಳೆದ ವರ್ಷ ಯಾರಾದರೂ "ವೈರಸ್ ಬಂತು" ಎಂದಿದ್ದರೆ ನಾವು "ಕಂಪ್ಯೂಟರಿಗೋ ಮೊಬೈಲಿಗೋ?" ಎಂದು ಕೇಳಿರುತ್ತಿದ್ದೆವೇನೋ. ಆದರೆ ಕೆಲವು ತಿಂಗಳುಗಳಿಂದ ಇಡೀ ವಿಶ್ವವನ್ನೇ ಕೊರೆಯುತ್ತಿರುವ ಕೊರೊನಾ ಚಿಂತೆ ನಮ್ಮ ಚಿಂತನೆಯಲ್ಲಿ ಗಮನಾರ್ಹ ಬದಲಾವಣೆ ತಂದಿದೆ. ಹುಷಾರಿಲ್ಲದ ಸಮಯ ಬಿಟ್ಟಂತೆ ನಾವು ಯಾವತ್ತಿಗೂ ಗಂಭೀರವಾಗಿ ತೆಗೆದುಕೊಳ್ಳದ, ಒಂದು ರೀತಿಯಲ್ಲಿ 'ಟೇಕನ್-ಫಾರ್-ಗ್ರಾಂಟೆಡ್' ಆಗಿದ್ದ ಜೀವಜಗತ್ತು ಕೂಡ ಇದೀಗ ನಮ್ಮಲ್ಲಿ ಕುತೂಹಲ ಮೂಡಿಸುತ್ತಿದೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕಾಳಜಿ, ಪ್ರಪಂಚದಲ್ಲಿ ಇದೇನು ನಡೆಯುತ್ತಿದೆ ಎಂಬ ಆತಂಕ - ಹೀಗೆ ಕಾರಣ ಏನೇ ಇದ್ದರೂ, ಈ ಕುತೂಹಲ ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕಣ್ಣಿಗೆ ಕಾಣದಷ್ಟು ಸಣ್ಣ ರೋಗಾಣುಗಳು ಇಷ್ಟೆಲ್ಲ ಅನಾಹುತ ಮಾಡುವುದು ಹೇಗೆ? ಅವು ದಾಳಿಯಿಟ್ಟಿರುವ ಬೆನ್ನಲ್ಲೇ ಸಾಲುಸಾಲಾಗಿ ಕೇಳಸಿಗುತ್ತಿರುವ ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಸದ್ಯದ ಮತ್ತು ಮುಂದೆ ಬರಬಹುದಾದ ಇಂಥದ್ದೇ ಇನ್ನಿತರ ಆತಂಕಗಳನ್ನು ಎದುರಿಸಲು ನಾವು ಸಜ್ಜಾಗುವುದು ಹೇಗೆ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲು ನಿಮಗೆ ನೆರವಾಗುವ ಅಕ್ಷರಶಃ 'ಸಣ್ಣ' ಪ್ರಯತ್ನವೇ ಕೊರೊನಾಲಜಿ. ಕೊರೊನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಕೇಳಸಿಗುತ್ತಿರುವ ವಿಷಯಗಳ ಬಗ್ಗೆ ಈ ಸಂಕಲನ ನಿಮಗೆ ಸಂಕ್ಷಿಪ್ತ ಮಾಹಿತಿಯ ‘ಗುಳಿಗೆ’ಗಳನ್ನು ನೀಡುತ್ತದೆ.

ደረጃዎች እና ግምገማዎች

4.2
4 ግምገማዎች

ስለደራሲው

ಟಿ.ಜಿ.ಶ್ರೀನಿಧಿ ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಬರೆಯುತ್ತಿರುವ ಲೇಖಕರಲ್ಲೊಬ್ಬರು. ಅವರು ವಿಜ್ಞಾನ - ತಂತ್ರಜ್ಞಾನ ಸಂವಹನಕ್ಕೆ ಮೀಸಲಾದ 'ಇಜ್ಞಾನ ಡಾಟ್ ಕಾಮ್' ಎಂಬ ಜಾಲತಾಣವನ್ನು ನಡೆಸುತ್ತಿದ್ದಾರೆ ಹಾಗೂ ಹಲವು ಪತ್ರಿಕೆಗಳ ಅಂಕಣಕಾರರಾಗಿದ್ದಾರೆ. ಈವರೆಗೆ ೧೫೦೦ಕ್ಕೂ ಹೆಚ್ಚು ಲೇಖನ ಹಾಗೂ ೧೬ ಪುಸ್ತಕಗಳನ್ನು ಬರೆದಿರುವ ಅವರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ, ವಿಜಯ ಕರ್ನಾಟಕ ಟಾಪ್ ೧೦ ಯುವ ಸಾಧಕರ ಪಟ್ಟಿಯಲ್ಲಿ ಸ್ಥಾನ, ಅತ್ಯುತ್ತಮ ಕನ್ನಡ ಬ್ಲಾಗ್ ಪುರಸ್ಕಾರ ಪಡೆದಿದ್ದಾರೆ.

ለዚህ ኢ-መጽሐፍ ደረጃ ይስጡ

ምን እንደሚያስቡ ይንገሩን።

የንባብ መረጃ

ዘመናዊ ስልኮች እና ጡባዊዎች
የGoogle Play መጽሐፍት መተግበሪያውንAndroid እና iPad/iPhone ያውርዱ። ከእርስዎ መለያ ጋር በራስሰር ይመሳሰላል እና ባሉበት የትም ቦታ በመስመር ላይ እና ከመስመር ውጭ እንዲያነቡ ያስችልዎታል።
ላፕቶፖች እና ኮምፒውተሮች
የኮምፒውተርዎን ድር አሳሽ ተጠቅመው በGoogle Play ላይ የተገዙ ኦዲዮ መጽሐፍትን ማዳመጥ ይችላሉ።
ኢሪደሮች እና ሌሎች መሳሪያዎች
እንደ Kobo ኢ-አንባቢዎች ባሉ ኢ-ቀለም መሣሪያዎች ላይ ለማንበብ ፋይል አውርደው ወደ መሣሪያዎ ማስተላለፍ ይኖርብዎታል። ፋይሎቹን ወደሚደገፉ ኢ-አንባቢዎች ለማስተላለፍ ዝርዝር የእገዛ ማዕከል መመሪያዎቹን ይከተሉ።