ಇದು ಸಮಾಜಕಾರ್ಯದ ನಿಘಂಟು; ಕೇವಲ ಕೆಲವು ಶಬ್ದಾರ್ಥಗಳನ್ನು ನೀಡುತ್ತದೆಯಲ್ಲದೆ ಸಮಾಜಕಾರ್ಯದಲ್ಲಿ ಬಳಸುವ ಎಲ್ಲ ಪಾರಿಭಾಷಿಕ, ಮತ್ತಿತರ ಶಬ್ದಗಳನ್ನಾಗಲಿ ಅವುಗಳ ವ್ಯಾಖ್ಯಾನವನ್ನಾಗಲಿ ಒಳಗೊಂಡಿಲ್ಲ. ಅಂಥ ನಿಘಂಟೂ ಅತ್ಯಗತ್ಯ ಎಂಬುದು ನನ್ನ ಅಭಿಪ್ರಾಯವಾದರೂ ಅಂಥ ನಿಘಂಟನ್ನು ಸಿದ್ಧಪಡಿಸುವುದು ಸದ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದುಕೊಂಡು ಕೆಲವು ಉಪಯುಕ್ತ ಶಬ್ದಗಳ ಕನ್ನಡ ಅರ್ಥವನ್ನು ಮಾತ್ರವೇ ಈ ಪುಸ್ತಿಕೆಯಲ್ಲಿ ನೀಡಲಾಗಿದೆ.