‘Aa hadinentu dinagalu’

· KK PRINTERS &PUBLISHERS
4.6
리뷰 10개
eBook
152
페이지

eBook 정보

ಭಾರತ ದೇಶದಲ್ಲಿ ಮಹಾಭಾರತದ ಬಗ್ಗೆ ಕೇಳಿಲ್ಲದವರೇ ಇಲ್ಲ. ಈ ಮಹಾಕಾವ್ಯದ ಕತೆ, ಪಾತ್ರಗಳು ಮತ್ತು ಸನ್ನಿವೇಶಗಳನ್ನು ಬಾಲ್ಯದಿಂದಲೂ ಕೇಳಿ, ಓದಿ, ಅಧ್ಯಯನ ಮಾಡಿ ಎಲ್ಲರಿಗೂ ಅದರ ಬಗ್ಗೆ ಸಹಜ ಜ್ಞಾನವಿದೆಯೇನೋ ಅನ್ನುವಷ್ಟರ ಮಟ್ಟಿಗೆ ಇದು ಪ್ರಚಲಿತವಾಗಿದೆ. ಆದರೂ, ಮಹಾಭಾರತದ ಬಗ್ಗೆ ಎಲ್ಲರೂ ತಿಳಿದಿರುವುದು ಬಹಳಷ್ಟು ಕಡಿಮೆಯೇ ಆಗಿರುತ್ತದೆ. ಏಕೆಂದರೆ ಹದಿನೆಂಟು ಪರ್ವಗಳಲ್ಲಿ ಒಂದು ಲಕ್ಷ ಶ್ಲೋಕಗಳಲ್ಲಿ ಬೃಹತ್ತಾಗಿ ವ್ಯಾಪಿಸಿಕೊಂಡಿರುವ ಅದನ್ನು ಆಮೂಲಾಗ್ರವಾಗಿ ಓದಿರುವವರು ಬಹಳ ಕಡಿಮೆ. ಪಾಂಡವರ ಹುಟ್ಟು, ಬೆಳವಣಿಗೆ, ಬಾಲ್ಯ, ವಿದ್ಯಾಭ್ಯಾಸ, ಧೃತರಾಷ್ಟçನ ಮಕ್ಕಳ ದಾಯಾದಿ ಮಾತ್ಸರ್ಯ, ಪಾಂಡು ಸುತರನ್ನು ಮುಗಿಸಿ ಬಿಡಲು ಅವರು ಹೂಡುವ ಸಂಚುಗಳು, ಯುಧಿಷ್ಠಿರಾದಿಗಳು ಆ ಸಂಚುಗಳಿAದ ಗೆದ್ದು ಬರುವುದು, ದ್ರೌಪತಿಯ ಸ್ವಯಂವರ, ಪಾಂಡವರು ಪಡುವ ವನವಾಸ ಅಜ್ಞಾತವಾಸಗಳ ಕಷ್ಟಗಳು - ಹೀಗೆ ಕಥೆಯ ಒಂದೊAದು ಘಟ್ಟವೂ ಒಂದೊAದು ಬೃಹತ್ಗçಂಥವಾಗಲು ಯೋಗ್ಯವಿದ್ದು ಜನಸಾಮಾನ್ಯರಿಗೆ ತಲುಪುತ್ತಿರುವುದು ಮುಷ್ಟಿಯಷ್ಟು ಸಾರವಷ್ಟೆ.

ಮಹಾಭಾರತ ಯುದ್ಧವೆಂದೇ ಹೆಸರುವಾಸಿಯಾಗಿರುವ ಪಾಂಡವ ಕೌರವರ ಯುದ್ಧವೂ ಆ ಮಹಾಕಾವ್ಯದ ಒಂದು ಅತಿ ಮುಖ್ಯ ಘಟಕವೆ. ಆ ಯುದ್ಧವು ಜಗತ್ತಿನಲ್ಲಿ ಈವರೆವಿಗೆ ನಡೆದಿರುವ ಎಲ್ಲ ಯುದ್ಧಗಳಿಗಿಂತಲೂ ಅತಿಘೋರವಾದುದು, ಅತಿ ಭಯಂಕರವಾದುದು ಮತ್ತು ಅತಿ ಭೀಕರವಾದುದು ಎಂದು ಹೇಳಲಾಗಿದೆ. ಆ ಯುದ್ಧದಲ್ಲಿ ದುರ್ಯೋಧನನ ಪಕ್ಷದಲ್ಲಿ ಹನ್ನೊಂದು ಅಕ್ಷೌಹಿಣಿ ಸೈನ್ಯವೂ, ಯುಧಿಷ್ಠಿರನ ಪಕ್ಷದಲ್ಲಿ ಏಳು ಅಕ್ಷೌಹಿಣಿ ಸೈನ್ಯವೂ ಭಾಗಿಯಾಗಿದ್ದವಂತೆ.

ಆ ಹದಿನೆಂಟು ದಿನಗಳ ಮಹಾ ಯುದ್ಧದಲ್ಲಿ ಭಾಗಿಯಾಗಿದ್ದ ವೀರ ಯೋಧರ ಪರಾಕ್ರಮಗಳು, ಅವರು ಮಾಡಿದ ಕಗ್ಗೊಲೆಗಳು, ಯುದ್ಧಭೂಮಿಯಲ್ಲಿ ಬಿದ್ದಿದ್ದ ಹೆಣಗಳ ರಾಶಿ, ಹರಿದು ಬಿದ್ದಿದ್ದ ಕವಚಗಳು, ಮುರಿದು ಬಿದ್ದಿದ್ದ ತೋಳುಗಳು, ತರಿದು ಬೀಳಿಸಲ್ಪಟ್ಟಿದ್ದ ತಲೆಗಳು, ಸತ್ತ ಆನೆಗಳ, ಕುದುರೆಗಳ ಶವಗಳು, ನದಿಯಂತೆ ಹರಿದಿದ್ದ ನೆತ್ತರು, ಕ್ಷತವಾಗಿದ್ದ ರಥಗಳು, ಧನುಸ್ಸುಗಳು, ಬಾಣಗಳು, ಕತ್ತಿ ಕಠಾರಿಗಳು, ಕೊಡಲಿಗಳು, ಬಲ್ಲೆಗಳು, ತೋಮರಗಳು, ಧ್ವಜ ಪತಾಕೆಗಳು - ಇವುಗಳ ವರ್ಣನೆಯು ಮೈನವಿರೇಳಿಸುತ್ತದೆ. 

ಮಹಾಕೃತಿಯ ಪಾತ್ರಗಳನ್ನೂ, ಸನ್ನಿವೇಶಗಳನ್ನೂ ಬೇರೆಬೇರೆ ಭೂ ಭಾಗಗಳÀಲ್ಲಿ ಬೇರೆಬೇರೆ ಕವಿಗಳು ತಮ್ಮ ನೆಲದ ಸಂಸ್ಕೃತಿಗೆ ಹೊಂದಿಸಿಕೊAಡೋ, ತಮ್ಮ ಮನೋಧರ್ಮಕ್ಕೆ ತಕ್ಕಂತೆ ಬಳಸಿಕೊಂಡೋ, ರಚಿಸಿಕೊಂಡ ಕೃತಿಗಳಿಂದಾಗಿ ಮೂಲಕಥೆಯನ್ನು ಮೀರಿದ ಎಷ್ಟೋ ಅಂಶಗಳು ಇಂದು ಪ್ರಚಲಿತವಿವೆ. ಕೆಲವು ಮಾಧ್ಯಮಗಳು ಬಿಂಬಿಸಿರುವ ಅಂಶಗಳನ್ನು ನೋಡಿದರೆ ಮಹಾಭಾರತದಲ್ಲಿನ ವೀರರು ವಸ್ತುರೂಪದ ಬಾಣಗಳನ್ನು ಬಳಸುತ್ತಲೇ ಇರಲಿಲ್ಲವೇನೋ, ಅವರು ಬಿಲ್ಲನ್ನು ಹಿಡಿದು ಮರ‍್ವಿಯನ್ನು ಎಳೆಯುತ್ತಿದ್ದ ಹಾಗೆಯೇ ಬಾಣವೊಂದು ಉದ್ಭವಿಸುತ್ತಿತ್ತೇನೋ ಅನ್ನಿಸುವಂತಾಗಿದೆ. ವಾಸ್ತವವಾಗಿ ಒಬ್ಬೊಬ್ಬ ಮಹಾರಥಿಯ ರಥದ ಹಿಂದೆ ಬಾಣಗಳನ್ನು ತುಂಬಿದ ಎಷ್ಟೋ ಬಂಡಿಗಳು ಸಾಗಿರುತ್ತಿದ್ದವಂತೆ. ಅಶ್ವತ್ಥಾಮನ ರಥದ ಹಿಂದೆ ಬಾಣಗಳನ್ನು ತುಂಬಿದ ಎಂಟನೂರು ಬಂಡಿಗಳು ಇದ್ದವು ಎಂದು ಒಂದು ಕಡೆ ಹೇಳಲಾಗಿದೆ. 

ಆ ಯುದ್ಧದಲ್ಲಿ ಭಾಗಿಗಳಾದ ಅರ್ಜುನ, ಯುಧಿಷ್ಠಿರ, ಭೀಮ, ಕರ್ಣ, ದುರ್ಯೋಧನ, ದ್ರೋಣ, ಕೃಪ, ಅಶ್ವತ್ಥಾಮ ಮುಂತಾದವರೆಲ್ಲ ಮೈತುಂಬಾ ಬಾಣಗಳನ್ನು ಚುಚ್ಚಿಸಿಕೊಂಡು, ಗಾಯಗೊಂಡು, ಬಳಲಿ, ಮೂರ್ಛಿತರಾದ ಸನ್ನಿವೇಶಗಳು ಎಷ್ಟೋ ಇವೆ. ಬಾಣಾಘಾತಗಳು ಮತ್ತು ಗಾಯಗಳು ಕೃಷ್ಣನನ್ನೂ ಬಿಟ್ಟಿರಲಿಲ್ಲ. ಮಹಾಭಾರತದಲ್ಲಿನ ಇಂತಹ ಬಹಳಷ್ಟು ವಾಸ್ತವಾಂಶಗಳು ಬರುಬರುತ್ತ ಅಲೌಕಿಕವಾಗಿ ವಿಜೃಂಭಿಸಲ್ಪಟ್ಟಿವೆ.

ಭೀಬತ್ಸವಾದ ಆ ಯುದ್ಧದ ಸಾರಾಂಶವನ್ನು ಹಿಡಿದು ವಿಸ್ತೃತಗೊಳಿಸದೆ, ಉತ್ಪೆçÃಕ್ಷೆಗೊಳಿಸದೆ, ಒಗ್ಗರಣೆ ಹಾಕದೆ, ಕೆಲವೇ ಪುಟಗಳಲ್ಲಿ ಕೂಡಿಡುವ ಒಂದು ಕಿರುಪ್ರಯತ್ನವಾಗಿ ಈ ಕೃತಿ, ‘ಆ ಹದಿನೆಂಟು ದಿನಗಳು’ ವನ್ನು ಓದುಗರ ಮಡಿಲಿಗಿಡಲಾಗಿದೆ.

평가 및 리뷰

4.6
리뷰 10개

저자 정보

ಆ ಹದಿನೆಂಟು ದಿನಗಳ ಮಹಾ ಯುದ್ಧದಲ್ಲಿ ಭಾಗಿಯಾಗಿದ್ದ ವೀರ ಯೋಧರ ಪರಾಕ್ರಮಗಳು, ಅವರು ಮಾಡಿದ ಕಗ್ಗೊಲೆಗಳು, ಯುದ್ಧಭೂಮಿಯಲ್ಲಿ ಬಿದ್ದಿದ್ದ ಹೆಣಗಳ ರಾಶಿ, ಹರಿದು ಬಿದ್ದಿದ್ದ ಕವಚಗಳು, ಮುರಿದು ಬಿದ್ದಿದ್ದ ತೋಳುಗಳು, ತರಿದು ಬೀಳಿಸಲ್ಪಟ್ಟಿದ್ದ ತಲೆಗಳು, ಸತ್ತ ಆನೆಗಳ, ಕುದುರೆಗಳ ಶವಗಳು, ನದಿಯಂತೆ ಹರಿದಿದ್ದ ನೆತ್ತರು, ಕ್ಷತವಾಗಿದ್ದ ರಥಗಳು, ಧನುಸ್ಸುಗಳು, ಬಾಣಗಳು, ಕತ್ತಿ ಕಠಾರಿಗಳು, ಕೊಡಲಿಗಳು, ಬಲ್ಲೆಗಳು, ತೋಮರಗಳು, ಧ್ವಜ ಪತಾಕೆಗಳು - ಇವುಗಳ ವರ್ಣನೆಯು ಮೈನವಿರೇಳಿಸುತ್ತದೆ. 

ಮಹಾಕೃತಿಯ ಪಾತ್ರಗಳನ್ನೂ, ಸನ್ನಿವೇಶಗಳನ್ನೂ ಬೇರೆಬೇರೆ ಭೂ ಭಾಗಗಳÀಲ್ಲಿ ಬೇರೆಬೇರೆ ಕವಿಗಳು ತಮ್ಮ ನೆಲದ ಸಂಸ್ಕೃತಿಗೆ ಹೊಂದಿಸಿಕೊAಡೋ, ತಮ್ಮ ಮನೋಧರ್ಮಕ್ಕೆ ತಕ್ಕಂತೆ ಬಳಸಿಕೊಂಡೋ, ರಚಿಸಿಕೊಂಡ ಕೃತಿಗಳಿಂದಾಗಿ ಮೂಲಕಥೆಯನ್ನು ಮೀರಿದ ಎಷ್ಟೋ ಅಂಶಗಳು ಇಂದು ಪ್ರಚಲಿತವಿವೆ. ಕೆಲವು ಮಾಧ್ಯಮಗಳು ಬಿಂಬಿಸಿರುವ ಅಂಶಗಳನ್ನು ನೋಡಿದರೆ ಮಹಾಭಾರತದಲ್ಲಿನ ವೀರರು ವಸ್ತುರೂಪದ ಬಾಣಗಳನ್ನು ಬಳಸುತ್ತಲೇ ಇರಲಿಲ್ಲವೇನೋ, ಅವರು ಬಿಲ್ಲನ್ನು ಹಿಡಿದು ಮರ‍್ವಿಯನ್ನು ಎಳೆಯುತ್ತಿದ್ದ ಹಾಗೆಯೇ ಬಾಣವೊಂದು ಉದ್ಭವಿಸುತ್ತಿತ್ತೇನೋ ಅನ್ನಿಸುವಂತಾಗಿದೆ. ವಾಸ್ತವವಾಗಿ ಒಬ್ಬೊಬ್ಬ ಮಹಾರಥಿಯ ರಥದ ಹಿಂದೆ ಬಾಣಗಳನ್ನು ತುಂಬಿದ ಎಷ್ಟೋ ಬಂಡಿಗಳು ಸಾಗಿರುತ್ತಿದ್ದವಂತೆ. ಅಶ್ವತ್ಥಾಮನ ರಥದ ಹಿಂದೆ ಬಾಣಗಳನ್ನು ತುಂಬಿದ ಎಂಟನೂರು ಬಂಡಿಗಳು ಇದ್ದವು ಎಂದು ಒಂದು ಕಡೆ ಹೇಳಲಾಗಿದೆ. 

ಆ ಯುದ್ಧದಲ್ಲಿ ಭಾಗಿಗಳಾದ ಅರ್ಜುನ, ಯುಧಿಷ್ಠಿರ, ಭೀಮ, ಕರ್ಣ, ದುರ್ಯೋಧನ, ದ್ರೋಣ, ಕೃಪ, ಅಶ್ವತ್ಥಾಮ ಮುಂತಾದವರೆಲ್ಲ ಮೈತುಂಬಾ ಬಾಣಗಳನ್ನು ಚುಚ್ಚಿಸಿಕೊಂಡು, ಗಾಯಗೊಂಡು, ಬಳಲಿ, ಮೂರ್ಛಿತರಾದ ಸನ್ನಿವೇಶಗಳು ಎಷ್ಟೋ ಇವೆ. ಬಾಣಾಘಾತಗಳು ಮತ್ತು ಗಾಯಗಳು ಕೃಷ್ಣನನ್ನೂ ಬಿಟ್ಟಿರಲಿಲ್ಲ. ಮಹಾಭಾರತದಲ್ಲಿನ ಇಂತಹ ಬಹಳಷ್ಟು ವಾಸ್ತವಾಂಶಗಳು ಬರುಬರುತ್ತ ಅಲೌಕಿಕವಾಗಿ ವಿಜೃಂಭಿಸಲ್ಪಟ್ಟಿವೆ.

이 eBook 평가

의견을 알려주세요.

읽기 정보

스마트폰 및 태블릿
AndroidiPad/iPhoneGoogle Play 북 앱을 설치하세요. 계정과 자동으로 동기화되어 어디서나 온라인 또는 오프라인으로 책을 읽을 수 있습니다.
노트북 및 컴퓨터
컴퓨터의 웹브라우저를 사용하여 Google Play에서 구매한 오디오북을 들을 수 있습니다.
eReader 및 기타 기기
Kobo eReader 등의 eBook 리더기에서 읽으려면 파일을 다운로드하여 기기로 전송해야 합니다. 지원되는 eBook 리더기로 파일을 전송하려면 고객센터에서 자세한 안내를 따르세요.