Shabda-Supaari: ಶಬ್ದ-ಸುಪಾರಿ: ಕವನ ಸಂಕಲನ

Akshara Prakashana
Ebook
121
Pages

About this ebook

...ಯಾವ ದೇಶ, ಕಾಲದ ಕವಿತೆಯು ಕೂಡ ಸಂವಹನ ಆಗೋದು, ತೀರಾ ನಿಧಾನವಾಗಿ. ಪ್ರತಿಯೊಂದು ಕವಿತೆ ಒಂದು ರಕ್ತದ ಬಾಟಲ್. ಅದನ್ನು ಕವಿಯೇ ತನ್ನದೇ ಭಾಷಿಕ ಸೂಜಿ, ನಳಿಕೆಗಳ ಮೂಲಕ ನಿಧಾನವಾಗಿ ತನ್ನ ಕವಿತೆಯಲ್ಲಿ ಸಂಗ್ರಹಿಸುತ್ತಾನೆ. ನಂತರ ಅದನ್ನು ಓದುಗ ತನ್ನ ರಕ್ತಕ್ಕೆ ಸೇರಿಸಿಕೊಳ್ಳಬೇಕು ಎನಿಸಿದರೆ ಆತನೂ ಅದನ್ನು ತನ್ನದೇ ಆದ ಸೂಜಿ, ನಳಿಕೆಗಳ ಮೂಲಕವೇ ಅಷ್ಟೇ ನಿಧಾನವಾಗಿ, ಹನಿ ಹನಿಯಾಗಿ ಒಳಗೆ ಬಿಟ್ಟುಕೊಳ್ಳಬೇಕಾಗುತ್ತದೆ. ಏನಿದ್ದರೂ ಚುಚ್ಚುವ ಸೂಜಿ ಒಳಸೇರಿಸುವ ನಳಿಕೆ, ಇವುಗಳ ಋಣಾನುಬಂಧ ಕಾರಯಿತ್ರೀಗೂ ತಪ್ಪಿದ್ದಲ್ಲ, ಭಾವಯಿತ್ರಿಗೂ ತಪ್ಪಿದ್ದಲ್ಲ. ಇಷ್ಟಕ್ಕೂ ಎಲ್ಲರ ರಕ್ತ ಎಲ್ಲರಿಗೂ ಹೊಂದುವುದಿಲ್ಲ ಅನ್ನೋ ತಾತ್ವಿಕ ಸತ್ಯವನ್ನಂತು ನಾವು ಗಮನಿಸಲೇಬೇಕಾಗುತ್ತದೆ. ನನ್ನ ಮೈಯಲ್ಲಿ ಹರಿಯುವ ರಕ್ತ ನನ್ನದಷ್ಟೇ ಅಲ್ಲ ಅನ್ನೋ ಅರಿವು, ಕಾವ್ಯ ಚರಿತ್ರೆಯ ಸಂಕರಗಳ ಸಂಕಥನಗಳ ಸಂಕಟಗಳಲ್ಲಿಯೆ ನಿಯತವಾಗಿದೆ...

(ಲೇಖಕರ ಸಂದರ್ಶನದಿಂದ ಆಯ್ದ ಮಾತುಗಳು)

A Kannada book by Akshara Prakashana / ಅಕ್ಷರ ಪ್ರಕಾಶನ

About the author

ಆನಂದ ಝುಂಜರವಾಡ (೨೫-೬-೧೯೫೨) ಮೂಲತಃ ಬಾಗಿಲುಕೋಟೆಯವರು. ಮಾಧ್ವ ಹಾಗೂ ಮಹಾರಾಷ್ಟ್ರದ ಸಂತ ಪರಂಪರೆಯ ದಟ್ಟ ವಾತಾವರಣವಿದ್ದ ಮನೆತನದ ಪರಿಸರದಲ್ಲಿ, ಸಾವಿರಾರು ಗ್ರಂಥರಾಶಿಗಳ ಸಾಂಗತ್ಯದಲ್ಲಿ ಬೆಳೆದ ಬಾಲ್ಯ ಅವರದು. ಅರೆಬರೆ ಶಿಕ್ಷಣ, ಲೋಕೋಪಯೋಗಿ ಇಲಾಖೆಯಲ್ಲಿ ಮೈಲುಗೂಲಿ ಆಗಿ ರಸ್ತೆಗೆ ಕುದಿವ ಡಾಂಬರನ್ನು ಸುರಿವ ಅನುಭವ, ಇವರ ಸೃಷ್ಟಿಶೀಲತೆಗೆ ಭಾಷೆಯ ದಾರಿಯನ್ನು ನಿರ್ಮಿಸಿಕೊಳ್ಳುವ ರೂಪಕವಾಗಿಯೂ ಒಳಮನಸ್ಸಿನ ಗುಪಿತವಾಗಿ ಇಂಗಿರಬೇಕು. ಇವರ ಹಲವಾರು ಕಾವ್ಯ ಸಂಗ್ರಹಗಳು ಪ್ರಕಟವಾಗಿವೆ. `ಪ್ರೇತಕಾಂಡ' ಒಂದು ಹಂತದವರೆಗಿನ ಅವರ ಸಮಗ್ರ ಕಾವ್ಯ ಸಂಗ್ರಹವಾದರೂ ನಂತರವೂ ಇನ್ನೂ ಮೂರು ಸಂಕಲನಗಳು ಪ್ರಕಟವಾಗಿವೆ. ಪ್ರಸನ್ನವೆಂಕಟದಾಸರ ಬದುಕನ್ನು ಕುರಿತು ಇವರು ಬರೆದ ನಾಟಕ `ಹಕ್ಕಿಯ ಹೆಗಲೇರಿ' ಪ್ರಯೋಗಗಳನ್ನು ಕಾಣುತ್ತಲೇ ಇದೆ. ಹಲವು ಚಿಂತನಶೀಲ ಬರಹಗಳ ಸಂಗ್ರಹಗಳೂ ಪ್ರಕಟವಾಗಿವೆ. ಟಿಳಕರ `ಗೀತಾ ರಹಸ್ಯ'ದ ಆಲೂರರ, ಕೆರೂರು ವಾಸುದೇವಾಚಾರ್ಯರ ಅನುವಾದದ ಎರಡನೇ ಆವೃತ್ತಿಯನ್ನು ಇವರು ಸಂಪಾದಿಸಿಕೊಟ್ಟಿದ್ದಾರೆ. ೩೭ ವರ್ಷ ನ್ಯಾಯಾಂಗದಲ್ಲಿ ಕರಣಿಕರಾಗಿ ದುಡಿದು, ಈಗ ನಿವೃತ್ತ ಬದುಕನ್ನು ಅವರ ಪ್ರೀತಿಯ ಕವಿ ಬೇಂದ್ರೆ ಅವರ ನೆಲೆಯಾದ ಧಾರವಾಡದಲ್ಲಿ ನಡೆಸಿದ್ದಾರೆ. ಪು.ತಿ.ನ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಮುದ್ದಣ್ಣ ಪ್ರಶಸ್ತಿ, ದಿನಕರ ದೇಸಾಯಿ ಪ್ರಶಸ್ತಿ, ಗಳಗನಾಥ ಪ್ರಶಸ್ತಿ ಇವು ಅವರಿಗೆ ಸಂದ ಹಲವು ಪ್ರಶಸ್ತಿಗಳಲ್ಲಿ ಕೆಲವು.

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.