Bharateeya Darshanagalu Mattu Bhashe: ಭಾರತೀಯ ದರ್ಶನಗಳು ಮತ್ತು ಭಾಷೆ

· Akshara Prakashana
5,0
2 recensioner
E-bok
204
Sidor

Om den här e-boken

ಭಾಷೆ ಅಂದರೆ ಅದೆಂಥ ವಸ್ತು? ಅದು ಸಂವೇದನೆಯನ್ನೋ ಅನುಭವವನ್ನೋ ಸಂವಹನೆ ಮಾಡುವ ಮಾಧ್ಯಮವೆ? ಅಥವಾ ಸ್ವತಃ ಸಂವೇದನೆ-ಅನುಭವಗಳ ನಿರ್ಮಾತೃವೆ? ಭಾಷೆ ಹುಟ್ಟಿದ್ದು ಹೇಗೆ? ಅರ್ಥ ಅಂದರೇನು? ಅರ್ಥ ಇರುವುದು ಪದಗಳಲ್ಲೋ ಅಥವಾ ವಾಕ್ಯಗಳಲ್ಲೋ? ಅರ್ಥಪ್ರತೀತಿ ಉಂಟಾಗುವುದು ಹೇಗೆ? ಪದಕ್ಕೂ ಮತ್ತು ಪದಾರ್ಥಕ್ಕೂ ನಡುವಿನ ಸಂಬಂಧ ಎಂಥದು? ಪದಗಳು ಮತ್ತು ವಾಕ್ಯಗಳು ನಿರ್ದಿಷ್ಟ ಅರ್ಥಗಳನ್ನು ನಿರೂಪಿಸುವ ವಿಧಾನ ಯಾವುದು? ಭಾರತದ ದರ್ಶನ ಪರಂಪರೆಗಳಲ್ಲಿ ಈ ಎಲ್ಲ ಬಗೆಯ ಪ್ರಶ್ನೆಗಳನ್ನು ಕೇಂದ್ರವಾಗಿಟ್ಟುಕೊಂಡು ತುಂಬ ಗಹನವಾದ ಮತ್ತು ಸೂಕ್ಷ್ಮವಾದ ಚರ್ಚೆಗಳು ನಡೆದಿವೆ. ಅಂಥ ಜಿಜ್ಞಾಸೆಗಳನ್ನು ಅವುಗಳ ದಾರ್ಶನಿಕ ಹಿನ್ನೆಲೆಯ ಸಮೇತ ಗುರುತಿಸುತ್ತ, ಇವತ್ತಿನ ವಿದ್ಯಾರ್ಥಿಗಳಿಗೂ ವಿದ್ವಾಂಸರಿಗೂ ಬದುಕು-ಭಾಷೆ ಕುರಿತ ಆ ಚರ್ಚೆ ಉಪಯುಕ್ತವಾಗುವಂತೆ ಸರಳವಾಗಿ ಪುನರ್ ನಿರೂಪಿಸುವ ಅನನ್ಯ ಪುಸ್ತಕ ಇದು.

A Kannada book by Akshara Prakashana / ಅಕ್ಷರ ಪ್ರಕಾಶನ

Betyg och recensioner

5,0
2 recensioner

Om författaren

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಜೋಗಿನ್ಮನೆಯವರು. ಸಂಸ್ಕೃತದಲ್ಲಿ ಎಂ.ಎ. ಪದವೀಧರರು. ಸಿದ್ದಾಪುರದ ಮಹಾತ್ಮಾಗಾಂಧೀ ಶತಾಬ್ದಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಮತ್ತು ಪ್ರಾಂಶುಪಾಲರಾಗಿ ಸೇವೆ. ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತ, ವೇಷಧಾರಿ. ತತ್ವಶಾಸ್ತ್ರ, ಅಲಂಕಾರಶಾಸ್ತ್ರ, ಮೊದಲಾದ ಶಾಸ್ತ್ರೀಯ ವಿಷಯಗಳಲ್ಲಿ ಇವರ ಕೆಲವು ಗ್ರಂಥಗಳೂ, ಹಲವು ಲೇಖನಗಳೂ ಪ್ರಕಟವಾಗಿವೆ. ‘ಭಾರತೀಯ ತತ್ತ್ವಶಾಸ್ತ್ರ ಪ್ರವೇಶ’, ‘ಶಬ್ದ ಮತ್ತು ಜಗತ್ತು’, ‘ಬಾಲರಾಮಾಯಣ’ - ಮೊದಲಾದವು ಇವರ ಪ್ರಕಟಿತ ಪುಸ್ತಕಗಳು. ಹದಿನೈದು ಯಕ್ಷಗಾನ ಪ್ರಸಂಗಗಳನ್ನು ಇವರು ಬರೆದಿದ್ದಾರೆ.

Betygsätt e-boken

Berätta vad du tycker.

Läsinformation

Smartphones och surfplattor
Installera appen Google Play Böcker för Android och iPad/iPhone. Appen synkroniseras automatiskt med ditt konto så att du kan läsa online eller offline var du än befinner dig.
Laptops och stationära datorer
Du kan lyssna på ljudböcker som du har köpt på Google Play via webbläsaren på datorn.
Läsplattor och andra enheter
Om du vill läsa boken på enheter med e-bläck, till exempel Kobo-läsplattor, måste du ladda ned en fil och överföra den till enheten. Följ anvisningarna i hjälpcentret om du vill överföra filerna till en kompatibel läsplatta.