Emoji Bhashe [ಇಮೋಜಿ ಭಾಷೆ]

· Chanda Pustaka
ඉ-පොත
126
පිටු

මෙම ඉ-පොත ගැන

ದೃಕ್-ದೃಶ್ಯ-ವಿವೇಕ ಎಂಬ ಸುಪ್ರಸಿದ್ಧ ಪಠ್ಯವು ಹೇಳುವ ಪ್ರಕಾರ, ನಾವೆಲ್ಲ ಹಲವು ಕಣ್ಣುಗಳಲ್ಲಿ ನೋಡುತ್ತೇವೆ: ನಮ್ಮಲ್ಲಿ ಹಲವರಿಗೆ ಕನ್ನಡಕವು ಮೊದಲನೆಯ ಕಣ್ಣಾದರೆ, ಅದು ತೋರಿಸಿದ್ದನ್ನು ನೋಡುವುದು ಅದರೊಳಗಿನ ಕಣ್ಣು. ಮತ್ತು ಆ ಕಣ್ಣು ಕಂಡಿದ್ದನ್ನು ಕಾಣುವುದು ಮನಸ್ಸು, ಮತ್ತು ಆ ಮನಸ್ಸನ್ನು ಕಾಣುವುದು ಪ್ರಜ್ಞೆ. ಕರ್ಕಿ ಕೃಷ್ಣಮೂರ್ತಿಯವರ ಈ ಬರಹಗಳಲ್ಲಿ ನಮ್ಮೊಳಗೇ ಅಂತರ್ಗತವಾಗಿರುವ ಇಂಥ ಬಹುನೋಟಗಳ ಬೆರಕೆ ಕಾಣಸಿಗುತ್ತದೆ. ಇಂಥ ಹಲವು ಕಾಣ್ಕೆಗಳನ್ನು ಈ ಪ್ರಬಂಧಗಳು ಸಮಾನಾಂತರವಾಗಿ ಹೆಣೆಯುತ್ತ, ಈ ವಿಭಿನ್ನ ಕಣ್ಣುಗಳ ಇತಿಮಿತಿ ಗಳೆಲ್ಲವನ್ನೂ ಸಮಾನ ಅವಧಾರಣೆಯಿಂದ ನಮ್ಮ ಮುಂದಿರಿಸುತ್ತ, ನಮಗೆ ದಕ್ಕುವ ನಿಜವನ್ನು ಹುಡುಕಿಕೊಳ್ಳುವ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಕರ್ಕಿಯವರ ಬರಹಗಳಿಗೆ ಅವರ ನೋಟದ ಮಿತಿಯನ್ನೂ ಮೀರಿದ ವ್ಯಾಪ್ತಿ ಒದಗಿದೆಯೆಂಬುದು ಈ ಪ್ರಬಂಧಗಳ ಒಂದು ಹೆಗ್ಗಳಿಕೆಯಾದರೆ, ಇವುಗಳನ್ನೋದುತ್ತ ನಾವು ನಮ್ಮದೇ ಪ್ರಬಂಧಗಳನ್ನು ಹೆಣೆದುಕೊಳ್ಳಬಹುದು ಎಂಬುದು ಇನ್ನೊಂದು ಅನುಕೂಲ. ಇವತ್ತಿನ ಕಾಲವೇ ಇಂಥ ನೋಟಗಳ ಬಹುತ್ವವನ್ನು ಬೇಡುತ್ತಿದೆಯೋ ಎನ್ನಿಸುವಷ್ಟು ಈ ಬರಹಗಳು ತಾವು ನೋಡುವ ಸಂಗತಿಗಳೊಂದಿಗೆ ಸಮಾಗಮಿಸಿವೆ.

- ಕೆ.ವಿ. ಅಕ್ಷರ 


A Kannada book from Chanda Pustaka / ಛಂದ ಪುಸ್ತಕ

කර්තෘ පිළිබඳ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಊರಿನವರು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಸದ್ಯಕ್ಕೆ ಬೆಂಗಳೂರು ನಿವಾಸಿ.  

‘ಮಳೆ ಮಾರುವ ಹುಡುಗ’, ‘ಗಾಳಿಗೆ ಮೆತ್ತಿದ ಬಣ್ಣ’ ಹಾಗೂ ‘ದಿಬ್ಬದಿಂದ ಹತ್ತಿರ ಆಗಸಕ್ಕೆ’ ಇವರ ಕಥಾಸಂಕಲನಗಳು. ‘ಚುಕ್ಕಿ ಬೆಳಕಿನ ಜಾಡು’ ಕಾದಂಬರಿ. ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ, ಸ್ವಸ್ತಿ ಪ್ರಕಾಶನದ ಸನ್ಮಾನ ಪಡೆದಿದ್ದಾರೆ. ಪ್ರಜಾವಾಣಿ ದೀಪಾವಳಿ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನೂ ಒಳಗೊಂಡಂತೆ ಇವರ ಕಥೆಗಳಿಗೆ ಹಲವು ಮನ್ನಣೆಗಳು ದೊರೆತಿವೆ.


karkikrishnamurthy@gmail.com | 97311 09144

මෙම ඉ-පොත අගයන්න

ඔබ සිතන දෙය අපට කියන්න.

කියවීමේ තොරතුරු

ස්මාර්ට් දුරකථන සහ ටැබ්ලට්
Android සහ iPad/iPhone සඳහා Google Play පොත් යෙදුම ස්ථාපනය කරන්න. එය ඔබේ ගිණුම සමඟ ස්වයංක්‍රීයව සමමුහුර්ත කරන අතර ඔබට ඕනෑම තැනක සිට සබැඳිව හෝ නොබැඳිව කියවීමට ඉඩ සලසයි.
ලැප්ටොප් සහ පරිගණක
ඔබට ඔබේ පරිගණකයේ වෙබ් බ්‍රව්සරය භාවිතයෙන් Google Play මත මිලදී ගත් ශ්‍රව්‍යපොත්වලට සවන් දිය හැක.
eReaders සහ වෙනත් උපාංග
Kobo eReaders වැනි e-ink උපාංග පිළිබඳ කියවීමට, ඔබ විසින් ගොනුවක් බාගෙන ඔබේ උපාංගයට එය මාරු කිරීම සිදු කළ යුතු වේ. ආධාරකරු ඉ-කියවනයට ගොනු මාරු කිරීමට විස්තරාත්මක උදවු මධ්‍යස්ථාන උපදෙස් අනුගමනය කරන්න.