Keertinatha Kurtakoti Avara Aayda Barahagalu: ಕೀರ್ತಿನಾಥ ಕುರ್ತಕೋಟಿ ಅವರ ಆಯ್ದ ಬರಹಗಳು

Modala Odu - ಮೊದಲ ಓದು Book null · Akshara Prakashana
5.0
1 review
eBook
179
Pages

About this eBook

ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ - ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

A Kannada book by Akshara Prakashana / ಅಕ್ಷರ ಪ್ರಕಾಶನ

Ratings and reviews

5.0
1 review

About the author

ಕೀರ್ತಿನಾಥ ಕುರ್ತಕೋಟಿಯವರು ೧೩, ಅಕ್ಟೋಬರ್ ೧೯೨೮ರಂದು ಗದಗ ಸಮೀಪದ ಕುರ್ತಕೋಟಿಯಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಗದಗದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ಮುಂದೆ ಸುಮಾರು ಮೂರು ದಶಕಗಳ ಕಾಲ ಗುಜರಾತಿನ ಆನಂದದ ವಲ್ಲಭ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು; ನಿವೃತ್ತಿಯ ನಂತರ ಧಾರವಾಡದಲ್ಲಿ ಬಂದು ನೆಲೆಸಿದರು. ಹಲವು ಭಾಷೆಗಳ ಸಾಹಿತ್ಯದ ಕುರಿತು ಮಾತಾಡಬಲ್ಲವರಾಗಿದ್ದ ಕೀರ್ತಿಯವರು ತಮ್ಮ ವಿದ್ವತ್ತು ಮತ್ತು ವಿಮರ್ಶೆಗಳಿಂದ ಪ್ರಸಿದ್ಧರು. ಬರವಣಿಗೆಯಷ್ಟೇ ತಮ್ಮ ವಾಗ್ಮಿತೆಗೂ ಪ್ರಸಿದ್ಧರಾಗಿದ್ದ ಇವರು ’ಯುಗಧರ್ಮ ಹಾಗೂ ಸಾಹಿತ್ಯದರ್ಶನ’, ’ಬಾರೋ ಸಾಧನಕೇರಿಗೆ’, ’ಕುಮಾರವ್ಯಾಸ’, ’ಉರಿಯ ನಾಲಗೆ’, ’ಪ್ರತ್ಯಭಿಜ್ಞಾನ’, ’ಕನ್ನಡ ಸಾಹಿತ್ಯ ಸಂಗಾತಿ’, ’ಸಂಸ್ಕೃತಿ ಸ್ಪಂದನ’ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ. ಇವರು ೨೦೦೩ರಲ್ಲಿ ನಿಧನರಾದರು.

Rate this eBook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Centre instructions to transfer the files to supported eReaders.