Kengulabi: Veshya Jagattina Anavarana

Ashok K R
4.3
리뷰 7개
eBook
457
페이지

eBook 정보

ವೇಶ್ಯಾವೃತ್ತಿಯ ಬಗ್ಗೆ ಕನ್ನಡದಲ್ಲಿ ಇದೇ ಮೊದಲ ಕೃತಿಯೇನಲ್ಲ. ಈ ಮೊದಲು ಬಸವರಾಜ ಕಟ್ಟಿಮನಿಯವರ 'ಬೀದಿಗೆ ಬಿದ್ದವಳು', ಎಂ.ಕೆ.ಇಂದಿರಾ ಅವರ 'ಗೆಜ್ಜೆಪೂಜೆ', ತರಾಸು ಅವರ 'ಮಸಣದ ಹೂವು' ಸೇರಿದಂತೆ ಇನ್ನೂ ಹಲವಾರು ಕೃತಿಗಳು ಬಂದಿವೆ. ತನ್ನೊಳಗೆ ಸಾವಿರಾರು ಕಥಾ ವಸ್ತುಗಳನ್ನು ಸದಾ ಹುಟ್ಟಿಸುವ ಫಲವಂತಿಕೆಯ ಭೂಮಿ ಈ ವೇಶ್ಯಾ ಜಗತ್ತು. ಈ ಜಗತ್ತಿನ ವರ್ತಮಾನದ ತಲ್ಲಣಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ ಅಷ್ಟೇ. 

평가 및 리뷰

4.3
리뷰 7개

저자 정보

 1980ರಲ್ಲಿ ಬಾಗಲಕೋಟೆ ಸಮೀಪದ ತುಳಸಿಗೇರಿಯಲ್ಲಿ ಹುಟ್ಟಿದ್ದು. ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಕಲಿಯುತ್ತಿದ್ದ ಬಿ.ಎ.ಅರ್ಧಕ್ಕೆ ಬಿಟ್ಟು, ಆಧ್ಯಾತ್ಮದ ಹುಚ್ಚು ಮತ್ತು ಗ್ರಾಮೀಣ ಅಭಿವೃದ್ಧಿ ಕನಸು ನೆತ್ತಿಗೇರಿಸಿಕೊಂಡು ಧಾರವಾಡ ಕರ್ನಾಟಕ ವಿ.ವಿ.ಯ ಗ್ರಾಮೀಣ ಅಭಿವೃದ್ಧಿ ಪದವಿ ಪೂರ್ಣ. ಅದೆ ಅವಧಿಯಲ್ಲಿ ಎಸ್‍ಎಸ್‍ವಾಯ್ ಟೀಚರ್ ಆಗಿ ಮೂರು ವರ್ಷಗಳವರೆಗೆ ಗ್ರಾಮೀಣ ಗುರುಕುಲಗಳನ್ನು ನಡೆಸುತ್ತ ಹಲವಾರು ಗ್ರಾಮೀಣ ಅಭಿವೃದ್ಧಿಯ ಪ್ರಯೋಗಗಳನ್ನು ನಡೆಸಿ ಕೆಲವೊಮ್ಮೆ ವೈಫಲ್ಯ, ಹಲವೊಮ್ಮೆ ಸಾಫಲ್ಯ ಕಂಡದ್ದು ದೊಡ್ಡ ಪಾಠ ಕಲಿಸಿಕೊಟ್ಟಿತು. ಅಲ್ಲಿಂದ ಬಿಟ್ಟೆದ್ದು, `ಭೈಪ್' ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಸತತ ಮೂರು ವರ್ಷಗಳ  ಹಲವಾರು ಹಳ್ಳಿಗಳ ಅಲೆದಾಟ. ಗ್ರಾಮೀಣ ಅಭಿವೃದ್ಧಿಯಲ್ಲಿ ಏನಾದರೂ ಸಾಧಿಸಬೇಕೆಂಬ ಹುಚ್ಚಿನಲ್ಲಿ ಸ್ವಂತದ್ದಾದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿ ಕೊರಳಿಗೆ ಕುತ್ತಾಗುವಷ್ಟರಮಟ್ಟಿಗೆ ಕೈ ಸುಟ್ಟಿಕೊಂಡ ಅನುಭವ.

2010ರಲ್ಲಿ ಪ್ರಕಟವಾದ ಮೊದಲ ಕಥಾ ಸಂಕಲನ ‘ಕತ್ತಲಗರ್ಭದ ಮಿಂಚು’ ಕೃತಿಗೆ ಕಸಾಪದ ಬಿಎಂಟಿಸಿ ಅರಳು ಪ್ರಶಸ್ತಿ, ಕಸಾಪ ಬಿಳಗಿ ದತ್ತಿ ಮತ್ತು ಅತ್ತಿಮಬ್ಬೆ ಪ್ರಶಸ್ತಿ ದಕ್ಕಿವೆ. ಇದಕ್ಕೂ ಮುನ್ನ ಎಂಟನೆ ತರಗತಿಯಲ್ಲಿ `ರೊಚ್ಚಿಗೆದ್ದ ನಾರಿ' ಎಂಬ ನಾಟಕ ಬರೆದದ್ದು, ಅದು ಊರೆಲ್ಲ ಸುದ್ದಿಯಾಗಿ ನಮ್ಮ ಶಾಲೆಯಲ್ಲಿ ಪ್ರದರ್ಶನ ಕಂಡದ್ದು ಮರೆಯದ ಅನುಭವ. `ದೇವರ ಹೆಸರಲ್ಲಿ' ಎಂಬ ಇನ್ನೊಂದು ನಾಟಕ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪೆÇ್ರೀತ್ಸಾಹ ಧನ ಪಡೆದುಕೊಂಡು ರವೀಂದ್ರ ಕಲಾ ಕ್ಷೇತ್ರದಲ್ಲಿ 2008ರಲ್ಲಿ ಪ್ರದರ್ಶನ ಗೊಂಡಿದೆ. ಅದೆ ವರ್ಷ ಬಿಜಾಪುರದ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ ನಾಟಕ  ರಚನಾ ಸ್ಪರ್ಧೆಯಲ್ಲಿ ದ್ವೀತಿಯ ಬಹುಮಾನ ಪಡೆದುಕೊಂಡಿದೆ.

ಇದಲ್ಲದೆ ಹಲವಾರು ಈವರೆಗಿನ 14 ಕಥಾಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿವೆ.

2011ರಲ್ಲಿ ಹೊರಬಂದ ಮೊದಲ ಕಾದಂಬರಿ ‘ಕೆಂಗುಲಾಬಿ’ಒಂದೆ ವರ್ಷದಲ್ಲಿ ಮರುಮುದ್ರಣ ಕಂಡಿದೆ. ಇದಕ್ಕೆ ಶಿವಮೊಗ್ಗ ಕರ್ನಾಟಕ ಸಂಘದಿಂದ ನೀಡಲಾಗುವ ಕುವೆಂಪು ಕಾದಂಬರಿ ಪುರಸ್ಕಾರ ಮತ್ತು ಕಸಾಪದ ಸಮೀರವಾಡಿ ದತ್ತಿ ಪ್ರಶಸ್ತಿಗಳು ದಕ್ಕಿವೆ. ಇದರ ಬಗ್ಗೆ ನಾಡಿನ 6 ಕಡೆ ಕಡೆ ಸಂವಾದಗಳು ನಡೆದಿವೆ.

2013ರಲ್ಲಿ 2ನೆ ಕಥಾ ಸಂಕಲನ “ಮಠದ ಹೋರಿ’ ಪ್ರಕಟಗೊಂಡಿದೆ. ಸಧ್ಯ ಕಾರವಾರದಲ್ಲಿ ವಿಜಯ ಕರ್ನಾಟಕದಲ್ಲಿ ವರದಿಗಾರನಾಗಿ ಕಾರ್ಯನಿರ್ವಹಣೆ.

이 eBook 평가

의견을 알려주세요.

읽기 정보

스마트폰 및 태블릿
AndroidiPad/iPhoneGoogle Play 북 앱을 설치하세요. 계정과 자동으로 동기화되어 어디서나 온라인 또는 오프라인으로 책을 읽을 수 있습니다.
노트북 및 컴퓨터
컴퓨터의 웹브라우저를 사용하여 Google Play에서 구매한 오디오북을 들을 수 있습니다.
eReader 및 기타 기기
Kobo eReader 등의 eBook 리더기에서 읽으려면 파일을 다운로드하여 기기로 전송해야 합니다. 지원되는 eBook 리더기로 파일을 전송하려면 고객센터에서 자세한 안내를 따르세요.