Ooremba Udara: ಊರೆಂಬ ಉದರ: ಒಂದು ಸಂಕೇತಿ ಗ್ರಾಮದ ವೃತ್ತಾಂತ

Akshara Prakashana
5,0
1 сын-пикир
Электрондук китеп
256
Барактар

Учкай маалымат

ಜೀವನದ ಮುಖ್ಯ ಕರ್ತವ್ಯ ಮುಗಿದ ಮೇಲೆ ಹಿರಿಯ ಜೀವವೊಂದು ಜಗಲಿಯಲ್ಲಿ ಮನೆ ಮಂದಿಯೊಂದಿಗೆ, ತನ್ನ ಸಂದಕಾಲದ ಮಾಯೆಯನ್ನು ಮೆಲುಕುವಂತೆ ಸುರುವಾಗುವ ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನ್ನಿಸದಂತೆ, ಮುಂದಣ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ ಪ್ರಸ್ತಾಪವಾಗಿದೆ. ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪ್ರಾಪ್ತವಾಗಿದೆ. ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯೇ ಅಲ್ಲ ಆಗಿಸಿದೆ.

- ವೈದೇಹಿ

ಒಂದು ಊರಿನಲ್ಲಿ ಬದುಕಿ ಬಾಳಿದ ಲೇಖಕಿಯ ಸ್ಮೃತಿಚಿತ್ರ, ಹಾಗೆಯೇ ಒಂದು ಸಮುದಾಯದ ಆಹಾರ ಪದ್ಧತಿಯನ್ನು ಕುರಿತ ಪಾಕಶಾಸ್ತ್ರದ ಕೈಪಿಡಿ. ಹೀಗೆ, ಲೇಖಕಿಯು ತನ್ನ ಬಾಲ್ಯದ ಸ್ಮೃತಿಗಳನ್ನು ಹಾಗೂ ತನ್ನ ಸಮುದಾಯದ ವಿಶಿಷ್ಟ ಖಾದ್ಯಗಳ ತಯಾರಿಕೆಯ ವಿವರಗಳನ್ನು ಒಂದು ಹದದಲ್ಲಿ ಬೆರೆಸಿ ಈ ಕಥನವನ್ನು ಕಟ್ಟಿಕೊಟ್ಟಿದ್ದಾರೆ.

- ಸಿ.ಎನ್. ರಾಮಚಂದ್ರನ್

'ಊರೆಂಬ ಉದರ' ಉದರಕ್ಕೆ ಸುಗ್ರಾಸಭೋಜನ! ಮನಕ್ಕೆ ಆಪ್ಯಾಯಮಾನ ಮಾಹಿತಿಪೂರ್ಣ, ರಸಪೂರ್ಣ, ಮಹತ್ವಪೂರ್ಣಕೃತಿ.

- ಮಾಲತಿ ಶರ್ಮಾ

ಪುಸ್ತಕದಲ್ಲಿನ ವ್ಯಕ್ತಿಚಿತ್ರಣಗಳು ನನಗೆ ಗೊರೂರ ರಾಮಸ್ವಾಮಿ ಅಯ್ಯಂಗಾರರನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಈ ಕಥಾನಕದಲ್ಲಿ ಚರಿತ್ರೆ, ಸಮಾಜಶಾಸ್ತ್ರ ಹಾಗೂ ಆಹಾರ ತಯಾರಿಕೆಗೆ ಸಂಬಂಧಪಟ್ಟ 'ರಸಾ'ಯನ ಶಾಸ್ತ್ರ ಎಲ್ಲವನ್ನೂ ಕಾಣಬಹುದಾಗಿದೆ.

- ಎಂ. ಶ್ರೀಧರಮೂರ್ತಿ

A Kannada book by Akshara Prakashana / ಅಕ್ಷರ ಪ್ರಕಾಶನ

Баалар жана сын-пикирлер

5,0
1 сын-пикир

Бул электрондук китепти баалаңыз

Оюңуз менен бөлүшүп коюңуз.

Окуу маалыматы

Смартфондор жана планшеттер
Android жана iPad/iPhone үчүн Google Play Китептер колдонмосун орнотуңуз. Ал автоматтык түрдө аккаунтуңуз менен шайкештелип, кайда болбоңуз, онлайнда же оффлайнда окуу мүмкүнчүлүгүн берет.
Ноутбуктар жана компьютерлер
Google Play'ден сатылып алынган аудиокитептерди компьютериңиздин веб браузеринен уга аласыз.
eReaders жана башка түзмөктөр
Kobo eReaders сыяктуу электрондук сыя түзмөктөрүнөн окуу үчүн, файлды жүктөп алып, аны түзмөгүңүзгө өткөрүшүңүз керек. Файлдарды колдоого алынган eReaders'ке өткөрүү үчүн Жардам борборунун нускамаларын аткарыңыз.