ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯುಲಾಂಗ್ಚ)

· Ravi Hanj
5.0
12 reviews
Ebook
200
Pages
Eligible

About this ebook

ಯಾವುದೇ ಸಿದ್ಧ ಮಾದರಿಯ ಸಾಹಿತ್ಯ ಪ್ರಕಾರಗಳಿಗೆ ನಿಲುಕದೆ ತನ್ನದೇ ವೈಶಿಷ್ಟ್ಯವನ್ನು ಹೊಂದಿರುವ ಮಾನವಿಕ ಕೃತಿ, ಅಗಣಿತ ಅಲೆಮಾರಿ ಯಾನೆ ವೂಶಿಯನ್ ಡಿ ಲ್ಯುಲಾಂಗ್ಚ.  ಕಾದಂಬರಿಯೆಂದರೆ ಕಾದಂಬರಿ, ಪ್ರವಾಸ ಕಥನವೆಂದರೆ ಪ್ರವಾಸ ಕಥನ, ಆಡಳಿತ ವ್ಯವಸ್ಥೆಗಳ ವಿಶ್ಲೇಷಣಾ ಗ್ರಂಥವೆಂದರೆ ವಿಶ್ಲೇಷಣಾ ಗ್ರಂಥ, ಇತಿಹಾಸ-ವರ್ತಮಾನದ ಕಲಾಜು ಎಂದರೆ ಕಲಾಜು, ಸೃಜನಶೀಲವೆಂದರೆ ಸೃಜನಶೀಲ, ಸೃಜನೇತರವೆಂದರೆ ಸೃಜನೇತರ! ಅಥವಾ ಮೂಗೆಳೆಯಲು ಎನ್ನಾರೈಗಳ ವಿಲಾಸವೆಂದರೆ ವಿಲಾಸ, ಕಲಾಯಿಯೆಂದರೆ ಕಲಾಯಿ, ಖಯಾಲಿಯೆಂದರೆ ಖಯಾಲಿ, ಶೋಕಿಯೆಂದರೆ ಶೋಕಿ, ಜೋಕೆಯೆಂದರೆ ಜೋಕೆ! ತರಾಜು ನಿಮ್ಮದೆ! ಇದು ಕೇವಲ ಸತ್ಯ ಮತ್ತು ವಾಸ್ತವಿಕ ಸತ್ಯಗಳನ್ನು ಮಾತ್ರ ಹೊಂದಿರುವ ಮಾನವಿಕ ಪುಸ್ತಿಕೆ. ಸತ್ಯ ಕಟುವೆಂಬುದು ಎಷ್ಟು ಸತ್ಯವೋ, ಸತ್ಯಂ ಶಿವಂ ಸುಂದರಂ ಸಹ ಅಷ್ಟೇ ಸತ್ಯ! 

ಚೀನೀ ಯಾತ್ರಿಕ ಹುಯೆನ್ ತ್ಸಾಂಗ್ ಸಾಗಿಬಂದಿದ್ದ ಹಾದಿಯಲ್ಲಿ ಭಿನ್ನ ಸಾಮಾಜಿಕ ಹಿನ್ನೆಲೆಯ ಮೂವರು ಮಿತ್ರರು (ಒಬ್ಬ ಚೀನೀ, ಭಾರತೀಯ ಮತ್ತು ಒಬ್ಬ ಅಮೆರಿಕನ್) ಪ್ರವಾಸ ಕೈಗೊಂಡು ಚೈನಾ-ಭಾರತ, ಇತಿಹಾಸ-ವರ್ತಮಾನ, ಕಮ್ಯುನಿಸ್ಟ್-ಪ್ರಜಾಪ್ರಭುತ್ವ, ಮತ್ತು ಜನಾಶಯ-ನಿರಾಶಯಗಳನ್ನು ವಿಶ್ಲೇಷಣೆಗೊಳಪಡಿಸಿ ಅನಾವರಣಗೊಳಿಸುವುದರೊಂದಿಗೆ ಪ್ರವಾಸದ ರಸಾಸ್ವಾದಗಳ ಅನುಭವವನ್ನೂ ಮೇಳೈಸಿಕೊಂಡು ಸಮ್ಮಿಳಿತಗೊಂಡಿರುವ ಕೃತಿ, ವೂಶಿಯನ್ ಡಿ ಲ್ಯುಲಾಂಗ್ಚ, ಯಾನೆ ಅಗಣಿತ ಅಲೆಮಾರಿ ಉರ್ಫ್ The Infinite Wanderer!

ಚೈನಾದ ಕಮ್ಯುನಿಸ್ಟ್ ಸರ್ಕಾರ ಹೇಗೆ ತನ್ನ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಬಂಡವಾಳಶಾಹಿಯಾಗಿದೆ ಮತ್ತು ಭಾರತದ ಸಾಂವಿಧಾನಿಕ ಮೂಲಭೂತ ಹಕ್ಕುಗಳು ಮೂಲಭೂತವಾಗಿಯೇ ಹೇಗೆ ಅನುಷ್ಠಾನದಲ್ಲಿ ಚ್ಯುತಿಗೊಂಡು ಅಸಂವಿಧಾನಿಕವಾಗಿವೆ ಎಂದು ವಾಸ್ತವ ಘಟನೆಗಳ ಮೂಲಕ ತೆರೆದಿಡುತ್ತ ಚಿಂತನೆಗೆ ಹಚ್ಚುವ ಕೃತಿ ಇದಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಚೈನಾದ ಅಭಾಸಗಳನ್ನು, ಭಾರತದ ವಿಪರ್ಯಾಸಗಳನ್ನು ಆಯಾಯ ದೇಶಗಳ ಸೈದ್ಧಾಂತಿಕ ಆಡಳಿತ ವ್ಯವಸ್ಥೆಯ ಪರಿಮಿತಿಯಲ್ಲೇ ತೆರೆದಿಡುವ ಕನ್ನಡದ ಏಕೈಕ ಕೃತಿ, ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯೂಲಾಂಗ್ಚ)!


“This book was produced with ePustaka - Ink and Weave initiative by Techfiz Inc. (https://techfiz.com) Reach us via info@techfiz.com.”

Ratings and reviews

5.0
12 reviews
Ashok Kadapla
September 26, 2020
Its very interesting book and provides more insight to Chinese culture during Hiuen Tsang
Did you find this helpful?
Dr.Rajeshwari B S
September 21, 2020
Nice one
Did you find this helpful?
Mahadev swamy
September 21, 2020
great book
Did you find this helpful?

About the author

ದಾವಣಗೆರೆ ಮೂಲದ ಶಿಕಾಗೋ ವಾಸಿ ರವಿ ಹಂಜ್ ಅವರು ಮೂಲತಃ ಮ್ಯಾನೇಜ್ಮೆಂಟ್ ತಜ್ಞರು. ಹವ್ಯಾಸವಾಗಿ ಬ್ಲಾಗು ಬರಹದಿಂದ ಆರಂಭಗೊಂಡ ಅವರ ಸಾಹಿತ್ಯ ಕೃಷಿ "ಹುಯೆನ್ ತ್ಸಾಂಗನ ಮಹಾಪಯಣ" ಎಂಬ ಗಮನಾರ್ಹ ಕೃತಿಯನ್ನು ರಚಿಸುವಲ್ಲಿಗೆ ದಾಪುಗಾಲು ಹಾಕಿ ಈಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ತಮ್ಮ ಈ ಕೃತಿಗೆ ಪಡೆದುಕೊಂಡಿದ್ದಾರೆ.

ಸೃಜನೇತರ ಸಾಹಿತ್ಯ ಮತ್ತು ಸಂಶೋಧನೆಯೆಡೆಗೆ ಆಕರ್ಷಿತರಾಗಿರುವ ಇವರು ಇತ್ತೀಚೆಗೆ "ಭಾರತ ಒಂದು ಮರುಶೋಧನೆ" ಎಂಬ ಮತ್ತೊಂದು ಕೃತಿಯನ್ನು ಬರೆದಿದ್ದಾರೆ. ಅದಲ್ಲದೆ ಪೂರ್ಣಚಂದ್ರ ತೇಜಸ್ವಿಯವರ "ಜುಗಾರಿ ಕ್ರಾಸ್", "ಪರಿಸರದ ಕತೆ" ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ತಮ್ಮ ಪ್ರಾಥಮಿಕ ಶಿಕ್ಷಣವನ್ನು ದಾವಣಗೆರೆಯ ಸಂಗಮೇಶ್ವರ ಪಾಠಶಾಲೆ, ಸಿಟಿ ಮಿಡ್ಲ್ ಸ್ಕೂಲ್, ಮತ್ತು ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಓದಿರುವ ಇವರು ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಇಂದ ಎಂ.ಸಿ.ಎ ಪದವಿ ಗಳಿಸಿದ್ದಾರೆ.

Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.