U.R. Ananthamurthy Kathaguccha: ಯು.ಆರ್. ಅನಂತಮೂರ್ತಿ ಕಥಾಗುಚ್ಛ: ಆಯ್ದ ೧೨ ಕಥೆಗಳು

Akshara Prakashana
4,0
1 arvostelu
E-kirja
332
sivuja

Tietoa tästä e-kirjasta

ಯು.ಆರ್. ಅನಂತಮೂರ್ತಿಯವರು ತಮ್ಮ ಜೀವಿತಾವಧಿಯಲ್ಲಿ ಬರೆದ ಎಲ್ಲ ಕಥೆಗಳ ಸಂಗ್ರಹ "ಯು.ಆರ್. ಅನಂತಮೂರ್ತಿ: ಸಮಸ್ತ ಕಥೆಗಳು" ಸಂಕಲನದಲ್ಲಿ ಆಯ್ದ ೧೨ ಕಥೆಗಳನ್ನು 'ಈ-ಪುಸ್ತಕ' ರೂಪದಲ್ಲಿ ಓದುಗರಿಗೂ ಅಭ್ಯಾಸಕಾರರಿಗೂ ಲಭ್ಯವಾಗುತ್ತಿವೆ. ಇದು 'ಈ-ಪುಸ್ತಕ' ರೂಪದಲ್ಲಿ ಮಾತ್ರ ಲಭ್ಯವಿರುತ್ತದೆ.

''...ಅನಂತಮೂರ್ತಿಯವರ ಪ್ರತಿಭೆ ಪ್ರಥಮವರ್ಗದ್ದು ಎಂದು ಈ ಸಂಕಲನ ಸಿದ್ಧಪಡಿಸುತ್ತದೆ. ಸೂಕ್ಷ ಬುದ್ಧಿ, ವಿಶಾಲವೂ ಪರಿಶುದ್ಧವೂ ಆದ ಅಭಿರುಚಿ, ಸಾಹಿತ್ಯ ವಿಚಾರಗಳಲ್ಲಿ ತೂಕವುಳ್ಳ ಮಾತನ್ನಾಡಬಲ್ಲಂಥ ಧೀರ ವಿಮರ್ಶ ಶಕ್ತಿ, ಕಲ್ಪನೆ, ಬಹುಶ್ರುತತ್ವ - ಇವು ಯಥೇಚ್ಛವಾಗಿರುವ ಈ ಲೇಖಕರಲ್ಲಿ ನನಗೆ ವೈಯಕ್ತಿಕವಾಗಿ ಹೇಳಬೇಕಾದರೆ ಸ್ನೇಹ ಮಾತ್ರವಲ್ಲ ಗೌರವವೂ ಉಂಟು. ಎಲ್ಲಕ್ಕಿಂತ ಹೆಚ್ಚಾಗಿ ಇವರಲ್ಲಿ ಕಂಡುಬರುವ ಆತ್ಮವಿಮರ್ಶ ಶಕ್ತಿ ದಂಗು ಬಡಿಸುವಂಥದು. ಅನಂತಮೂರ್ತಿಯವರ ಜೊತೆ ನಾನು ಕಾವ್ಯ ಸಾಹಿತ್ಯ ವಿಚಾರವಿನಿಮಯದಲ್ಲಿ ಅತ್ಯಂತ ಸಂತೋಷದಾಯಕವಾದ ಅನೇಕ ಗಂಟೆಗಳನ್ನು ಕಳೆದಿದ್ದೇನೆ. ಸಾಹಿತ್ಯ ವಿಷಯದಲ್ಲಿ ಇವರ ಅಭಿಪ್ರಾಯಗಳಿಗೆ ನಾನು ಬಹಳ ಬೆಲೆ ಕೊಡುತ್ತೇನೆ. ಇಂಥ ಲೇಖಕರ ವಿಷಯದಲ್ಲಿ ಒಂದು ಮಾತನ್ನು ಮಾತ್ರ ಧೈರ್ಯವಾಗಿ ಹೇಳಬಹುದು; ಇನ್ನೂ ಇನ್ನೂ ಉತ್ತಮವಾಗಿ ಇನ್ನಷ್ಟು ಶ್ರೀಮಂತ ಸಾಹಿತ್ಯವನ್ನು ಇವರು ಸೃಷ್ಟಿಸಬಹುದು; ಒಂದು ಪಕ್ಷ ಹಾಗಾಗದೇ ಹೋದರೂ ಈ ಲೇಖಕ ಸಾಹಿತ್ಯವಲ್ಲದ್ದನ್ನು ಎಂದೂ ಬರೆಯಲಾರ; ಯಾವ ಕೀರ್ತಿ ಪ್ರತಿಷ್ಠೆಯ ಆಕಾಂಕ್ಷೆಯಿಂದಲೂ ಅಪ್ರಾಮಾಣಿಕ ಕೃತಿರಚನೆಗೆ ಕೈ ಹಾಕಲಾರ. ಇಂಥ ಪ್ರಾಮಾಣಿಕ ಸಾಹಿತಿಗಳ ಸಂಖ್ಯೆ ಬಹಳ ಕಡಿಮೆ. ಅಂಥ ಕೆಲವೇ ಮಂದಿ ಕಲೆಗಾರರ ಪಂಕ್ತಿಯಲ್ಲಿ ಅನಂತಮೂರ್ತಿ ಆಗಲೇ ಸ್ಥಾನಗಳಿಸಿದ್ದಾರೆ. ಅಲ್ಲಿಂದ ಅವರಿಗೆ ಚ್ಯುತಿಯಿಲ್ಲ.''

- ಗೋಪಾಲಕೃಷ್ಣ ಅಡಿಗ

(ಅನಂತಮೂರ್ತಿಯವರ ಮೊದಲ ಕಥಾಸಂಕಲನದ ಮುನ್ನುಡಿಯಿಂದ)

A Kannada book by Akshara Prakashana / ಅಕ್ಷರ ಪ್ರಕಾಶನ

Arviot ja arvostelut

4,0
1 arvostelu

Tietoja kirjoittajasta

Udupi Rajagopalacharya Ananthamurthy (21 December 1932 – 22 August 2014) was an Indian contemporary writer and critic in the Kannada language. He was born in Thirtahalli Taluk and is considered as one of the pioneers of the Navya movement. He is the sixth writer to be honored with the Jnanpith Award for the Kannada language, the highest literary honor conferred in India. In 1998, he received the Padma Bhushan award from the Government of India. He was the vice-chancellor of Mahatma Gandhi University in Kerala during the late 1980s. He was one of the finalists of Man Booker International Prize for the year 2013. He remained a fervent critic of nationalistic political parties.

Arvioi tämä e-kirja

Kerro meille mielipiteesi.

Tietoa lukemisesta

Älypuhelimet ja tabletit
Asenna Google Play Kirjat ‑sovellus Androidille tai iPadille/iPhonelle. Se synkronoituu automaattisesti tilisi kanssa, jolloin voit lukea online- tai offline-tilassa missä tahansa oletkin.
Kannettavat ja pöytätietokoneet
Voit kuunnella Google Playsta ostettuja äänikirjoja tietokoneesi selaimella.
Lukulaitteet ja muut laitteet
Jos haluat lukea kirjoja sähköisellä lukulaitteella, esim. Kobo-lukulaitteella, sinun täytyy ladata tiedosto ja siirtää se laitteellesi. Siirrä tiedostoja tuettuihin lukulaitteisiin seuraamalla ohjekeskuksen ohjeita.