Vaidehi Kathaguccha: ವೈದೇಹಿ ಕಥಾಗುಚ್ಛ: ಆಯ್ದ ೨೫ ಕಥೆಗಳು

· Akshara Prakashana
5.0
2条评价
电子书
413

关于此电子书

ವೈದೇಹಿಯವರು ಕಾವ್ಯ, ನಾಟಕ, ಕಾದಂಬರಿ, ಪ್ರಬಂಧ ಮೊದಲಾದ ಹಲವು ಪ್ರಕಾರಗಳಲ್ಲಿ ಬರೆದಿದ್ದಾರಾದರೂ ಅವರ ಬರಹದ ಬದುಕಿನ ಉದ್ದಕ್ಕೂ ಬಹು ಸಂಖ್ಯೆಯಲ್ಲಿ ಪ್ರಕಟವಾಗಿರುವುದು ಕಥೆಗಳು. ೧೯೭೯ರಲ್ಲಿ ಅವರ ಮೊದಲ ಕಥಾಸಂಕಲನ 'ಮರ ಗಿಡ ಬಳ್ಳಿ' ಪ್ರಕಟವಾಗಿದ್ದರೆ, ಈಚೆಗೆ ೨೦೧೬ರಲ್ಲಿ ಅವರ ಕಥಾಸಂಕಲನ 'ಕತೆ ಕತೆ ಕಾರಣ' ಪ್ರಕಟಗೊಂಡಿದೆ. ಈ ಎರಡು ಸಂಕಲನಗಳೂ ಸೇರಿ ಒಟ್ಟು ಏಳು ಕಥಾಸಂಕಲನಗಳಲ್ಲಿ ಅವರು ೨೦೧೬ರವರೆಗೆ ಒಟ್ಟು ತೊಂಬತ್ತೊಂದು ಕಥೆಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯದ ವಿದ್ಯಾರ್ಥಿಗಳು, ಓದುಗರು ಮತ್ತು ಅಭ್ಯಾಸಕರ ಅನುಕೂಲಕ್ಕಾಗಿ ಅವರ ಈವರೆಗಿನ ಎಲ್ಲ ಕತೆಗಳನ್ನು ಒಟ್ಟಾಗಿಸಿ "ವೈದೇಹಿ ಕಥೆಗಳು ೧೯೭೯-೨೦೧೬" ಹೆಸರಿನಲ್ಲಿ ಪ್ರಕಟಿಸಲಾಗಿದೆ.

"ವೈದೇಹಿ ಕಥಾಗುಚ್ಛ"ದ ಮೂಲಕ ಈ ಸಂಕಲನದಿಂದ ಆಯ್ದ ೨೫ ಕಥೆಗಳು 'ಈ-ಪುಸ್ತಕ' ರೂಪದಲ್ಲಿ ಓದುಗರಿಗೂ ಅಭ್ಯಾಸಕಾರರಿಗೂ ಲಭ್ಯವಾಗುತ್ತಿವೆ. ಇದು 'ಈ-ಪುಸ್ತಕ' ರೂಪದಲ್ಲಿ ಮಾತ್ರ ಲಭ್ಯವಿರುತ್ತದೆ.

ಸಮಕಾಲೀನ ಲೇಖಕರನ್ನು ಮೆಚ್ಚುವುದು ಕಷ್ಟ. ಬರೆಯುವ ನನ್ನಂಥವನಿಗೂ ಬೇರೆ ಬರಹಗಾರರಿಗೂ ನಡುವೆ ತಿಳಿವಳಿಕೆ, ಸ್ನೇಹ ಇತ್ಯಾದಿಯೆಲ್ಲ ಇರಬಹುದು. ಅವೆಲ್ಲಕ್ಕಿಂತ ಹೆಚ್ಚಾಗಿ ಸ್ಪರ್ಧೆ, ಸವಾಲು ಇರುತ್ತದೆ. ಇವು ಅನೇಕ ಸಲ ಅಸೂಯೆಯ ಮಟ್ಟಕ್ಕಿಳಿಯುತ್ತವೆ. ಆದರೆ ನಾನು ನಿಜಕ್ಕೂ ಕಂಡ ನನ್ನ ಕಾಲದ ಒಳ್ಳೆಯ ಲೇಖಕರು ನನ್ನಲ್ಲಿ ಅಚ್ಚರಿ, ಹೊಸ ಗ್ರಹಿಕೆ ಹುಟ್ಟಿಸುತ್ತಾರೆ. ಬರೆಯುವ ಹೆಮ್ಮೆಯನ್ನು ಹೆಚ್ಚಿಸುತ್ತಾರೆ. ಅಂಥವರಲ್ಲಿ ವೈದೇಹಿ ಒಬ್ಬರು.

- ಪಿ. ಲಂಕೇಶ್

('ಈಕೆಯ ಕ್ರಿಯಾಶೀಲ ಲೇಖನಿ'ಟೀಕೆ ಟಿಪ್ಪಣಿ ಸಂಪುಟ ೧)

A Kannada book by Akshara Prakashana / ಅಕ್ಷರ ಪ್ರಕಾಶನ

评分和评价

5.0
2条评价

作者简介

Janaki Srinivasa Murthy (ಜಾನಕಿ ಶ್ರೀನಿವಾಸ ಮೂರ್ತಿ) (born as Vasanti on 12 February 1945), popularly known by her nickname Vaidehi (ವೈದೇಹಿ) is an Indian writer and well-known writer of modern Kannada language fiction. Vaidehi is one of the most successful women writers in the language and a recipient of prestigious national and state-level literary awards. She has won the Sahitya Akademi Award for her collection of short stories, Krauncha Pakshigalu in 2009.

为此电子书评分

欢迎向我们提供反馈意见。

如何阅读

智能手机和平板电脑
只要安装 AndroidiPad/iPhone 版的 Google Play 图书应用,不仅应用内容会自动与您的账号同步,还能让您随时随地在线或离线阅览图书。
笔记本电脑和台式机
您可以使用计算机的网络浏览器聆听您在 Google Play 购买的有声读物。
电子阅读器和其他设备
如果要在 Kobo 电子阅读器等电子墨水屏设备上阅读,您需要下载一个文件,并将其传输到相应设备上。若要将文件传输到受支持的电子阅读器上,请按帮助中心内的详细说明操作。