ಹುಲಿ ವೇಷ- ಕ ತೆ ಗ ಳು (Hulivesha- Kathegalu)

Ebook
206
Pages

About this ebook

ಅದೇ ಧ್ವನಿ  

ಯಶಸ್ಸಿನ ಮೆಟ್ಟಲೇರಿದ ಗಾಯಕ ಮನೋಜ್ ಗಂಟಲ ಶಸ್ತ್ರಚಿಕಿತ್ಸೆ ಒಳಗಾಗುತ್ತಾನೆ. ಅವನು ಹಾಡಲು ಅಶಕ್ತನಾದಾಗ ಮುಂದೇನಾಗುತ್ತದೆ?


ಹುಲಿ ವೇಷ 

ಭಾನು ಶೆಟ್ಟಿಯ ಹುಲಿವೇಷದ ದಂಡಿಗೆ 75ನೆಯ ವಾರ್ಷಿಕೋತ್ಸವದ ಸಂಭ್ರಮ, ಆದರೆ ಕರ್ನಾಟಕ ವಿಧಾನ ಸಭೆ ಚುನಾವಣೆಯ ಅನಿರೀಕ್ಷಿತ ಫಲಿತಾಂಶ.


ತಕ್ಷಕನ ದೋಷ 

ವಿದೇಶಕ್ಕೆ ಹೋಗುವ ಕನಸು ಕಟ್ಟಿದ್ದ ಕೇಶವ್ ಗೆ ಅದನ್ನು ನನಸಾಗಿಸುವ ಅದೃಷ್ಟ ಬಂದಿಲ್ಲ. ಇದಕ್ಕೆ ಸರ್ಪ ದೋಷ ಕಾರಣವೇ?


ಅವಳು ಅವನು ಮತ್ತು ಕೋಣೆ

ಅದೊಂದು ವಿಚಿತ್ರವಾದ ಕತ್ತಲ ಕೋಣೆ. ಅದರೊಳಗೆ ಇಬ್ಬರು ವಿಚಿತ್ರವಾದ ಬಂಧಿಗಳು. ಅವರು ಇದ್ದದ್ದಾದರೂ ಎಲ್ಲಿ?


ಬಂಗಾರದ ಬಳೆ 

ಸುಜಾತಾಳಿಗೆ ಬಂಗಾರದ ಬಳೆಯನ್ನು ಕೊಡಿಸುವ ಸಮಯ ನವೀನ್ ಗೆ ಕೂಡಿ ಬಂದಿದೆ. ಆದರೆ ವಿಧಿ ಇನ್ನೇನೋ ಬರೆದಿದೆ.


ನಿ.ಹೀ.ಸಂ 

ರಾತ್ರಿಯ ಹೊತ್ತು ನಿದ್ದೆ ಇಲ್ಲದೆ ಬಳಲುತ್ತಿದ್ದ ಸುಮಂತ್, ತನ್ನಂತೆ ಇರುವ ಇತರರನ್ನು ಹುಡುಕಿ ಒಂದು ಸಂಘವನ್ನೇ ತೆರೆಯುತ್ತಾನೆ.


ಕೀರ್ತಿ ಟ್ರಾವೆಲ್ಸ್ 

ಬೆಂಗಳೂರು-ಮಂಗಳೂರು ಬಸ್ ಪ್ರಯಾಣದಲ್ಲಿ ಪಕ್ಕದ ಸೀಟ್ನಲ್ಲಿ ಕುಳಿತಿರುವ ಹುಡುಗಿಯ ಜೊತೆ ಮಾತುಕತೆ, ರಚಿತ್ ನನ್ನು ಎಲ್ಲಿಗೆ ಕೊಂಡೊಯ್ಯಿತು?


About the author

ಮಂಗಳೂರಿನಲ್ಲಿ ಹುಟ್ಟಿ, ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿದ ವಿಠಲ್ ಶೆಣೈಯವರು, ಬೆಂಗಳೂರಿನ ಹಲವು ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಬರವಣಿಗೆಯ ಹುಚ್ಚು ಕಳೆದ ಏಳು-ಎಂಟು ವರ್ಷಗಳಿಂದ ಪ್ರಾರಂಭವಾಗಿ ಈಗ ಪುಸ್ತಕ ಪ್ರಕಾಶನದತ್ತ ತಮ್ಮ ಸಾಹಿತ್ಯ ಪ್ರಯಾಣವನ್ನು ಮುಂದುವರೆಸಿದ್ದಾರೆ. ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬಲ್ಗೇರಿಯ, ಸಿಂಗಾಪುರ್-ಗಳಂತಹ ದೇಶಗಳನ್ನು ಕೆಲಸದ ನಿಮಿತ್ತ ವಿಹರಿಸಿ, ವಿವಿಧ ಜನರೊಡನೆ ಬೆರೆತು, ಅಲ್ಲಿಯ ಕೆಲವು ಸೂಕ್ಷ್ಮತೆಗಳನ್ನು ಗಮನಿಸಿ ಅವುಗಳನ್ನು ಕಥೆ, ಪ್ರಬಂಧ ಮತ್ತು ಕಾದಂಬರಿಗಳಲ್ಲಿ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಯಂಡಮೂರಿ ವೀರೇಂದ್ರನಾಥ್, ಪೂರ್ಣಚಂದ್ರ ತೇಜಸ್ವಿ, ಕೆ.ಎನ್.ಗಣೇಶಯ್ಯ ನವರಂತಹ ಮಹಾನ್ ಲೇಖಕರ ಬರಹಗಳನ್ನು ಓದಿ ಪ್ರೇರೇಪಿತರಾಗಿದ್ದಾರೆ. ಸಾಫ್ಟ್ವೇರ್ ಕೋಡ್ ಮತ್ತು ಕಥೆಗಳನ್ನು ನಿಯತವಾಗಿ ಬರೆಯುತ್ತಾರೆ. 


Rate this ebook

Tell us what you think.

Reading information

Smartphones and tablets
Install the Google Play Books app for Android and iPad/iPhone. It syncs automatically with your account and allows you to read online or offline wherever you are.
Laptops and computers
You can listen to audiobooks purchased on Google Play using your computer's web browser.
eReaders and other devices
To read on e-ink devices like Kobo eReaders, you'll need to download a file and transfer it to your device. Follow the detailed Help Center instructions to transfer the files to supported eReaders.