ಭಗವದ್ಗೀತೆಯು ಮೋಕ್ಷಶಾಸ್ತ್ರ ಮಾತ್ರವಲ್ಲ, ಜೀವನಶಾಸ್ತ್ರವೂ ಹೌದು. ಮೋಕ್ಷವನ್ನು ಉದ್ದೇಶದಲ್ಲಿರಿಸಿಕೊಳ್ಳದ ಸಾಮಾನ್ಯ ಜನರಿಗೂ ಗೀತೆಯಿಂದ ಪ್ರಯೋಜನವುಂಟು. ಲೋಕಜೀವನದ ವಿಷಯದಲ್ಲಿ ಗೌರವಬುದ್ಧಿಯನ್ನೂ ಕರ್ತವ್ಯಾ ಚರಣೆಯಲ್ಲಿ ಉತ್ಸಾಹವನ್ನೂ ಆಪತ್ಕಾಲದಲ್ಲಿ ಧೈರ್ಯವನ್ನೂ ಸಂಶಯಗ್ರಸ್ತರಾದಾಗ ಮನಸ್ಸಿಗೆ ನೆಮ್ಮದಿಯನ್ನೂ ಉಂಟುಮಾಡಬಲ್ಲದ್ದು ಗೀತೆ. ಹೀಗೆ ಜನಸಾಮಾನ್ಯದ ಆವಶ್ಯಕತೆಯ ದೃಷ್ಟಿಯಿಂದ ಗೀತೆಯನ್ನು ನೋಡುವುದು ಪ್ರಕೃತ ಗ್ರಂಥದ ಉದ್ದೇಶ.
ಭಗವದ್ಗೀತೆಯು ಮೋಕ್ಷಶಾಸ್ತ್ರ ಮಾತ್ರವಲ್ಲ, ಜೀವನಶಾಸ್ತ್ರವೂ ಹೌದು. ಮೋಕ್ಷವನ್ನು ಉದ್ದೇಶದಲ್ಲಿರಿಸಿಕೊಳ್ಳದ ಸಾಮಾನ್ಯ ಜನರಿಗೂ ಗೀತೆಯಿಂದ ಪ್ರಯೋಜನವುಂಟು. ಲೋಕಜೀವನದ ವಿಷಯದಲ್ಲಿ ಗೌರವಬುದ್ಧಿಯನ್ನೂ ಕರ್ತವ್ಯಾ ಚರಣೆಯಲ್ಲಿ ಉತ್ಸಾಹವನ್ನೂ ಆಪತ್ಕಾಲದಲ್ಲಿ ಧೈರ್ಯವನ್ನೂ ಸಂಶಯಗ್ರಸ್ತರಾದಾಗ ಮನಸ್ಸಿಗೆ ನೆಮ್ಮದಿಯನ್ನೂ ಉಂಟುಮಾಡಬಲ್ಲದ್ದು ಗೀತೆ. ಹೀಗೆ ಜನಸಾಮಾನ್ಯದ ಆವಶ್...