೫೨೦೦ ವರ್ಷಗಳ ದೀರ್ಘ ಅಂತರಾಳದ ಬಳಿಕದ ಶ್ರೀಮದ್ ಭಗವದ್ ಗೀತೆಯ ಶಾಶ್ವತ ವ್ಯಾಖ್ಯೆ
ಶ್ರೀ ಕೃಷ್ಣನು ಯಾವ ಸಮಯದಲ್ಲಿ ಗೀತೆಯ ಉಪದೇಶ ಮಾಡಿದನೋ ಆಗ ಅವನ ಮನೋಗತ ಭಾವ ಏನಿದ್ದಿರಬಹುದು? ಮನೋಗತದ ಎಲ್ಲಾ ಭಾವಗಳನ್ನು ಹೇಳಿ ತೋರಿಸಲಿಕ್ಕೆ ಆಗುವುದಿಲ್ಲ. ಕೆಲವನ್ನು ಹೇಳಿಬಿಡಬಹುದು, ಕೆಲವು ಭಾವ - ಭಂಗಿಯಿಂದ ವ್ಯಕ್ತವಾಗುತ್ತದೆ ಮತ್ತು ಉಳಿದುದು ಪರ್ಯಾಪ್ತ ಕ್ರಿಯಾತ್ಮಕವಾಗಿರುತ್ತದೆ - ಅದನ್ನು ಈ ದಾರಿಯಲ್ಲಿ ನಡೆಯುವವನು ಮಾತ್ರ ಅನುಭವಿಸಬಹುದು. ಯಾವ ಮಟ್ಟದಲ್ಲಿ ಶ್ರೀ ಕೃಷ್ಣನು ನಿಂತಿದ್ದನೋ, ಕ್ರಮಶ: ನಡೆದು ಅದೇ ವ್ಯವಸ್ಥೆಯನ್ನು ಪ್ರಾಪ್ತಿ ಮಾಡಿಕೊಂಡ ಮಹಾಪುರುಷ ಮಾತ್ರ ಗೀತೆ ಏನು ಅನ್ನುತ್ತದೆ ಎಂದು ತಿಳಿದುಕೊಳ್ಳುವನು, ಅವರು ಗೀತೆಯನ್ನು ಮಾತ್ರ ಉದ್ಗರಿಸುವುದಿಲ್ಲ, ಅವರ ಭಾವಗಳನ್ನು ತೋರಿಸಿಕೊಡುವರು ಏಕೆಂದರೆ, ಅಂದು ಶ್ರೀ ಕೃಷ್ಣನ ಮುಂದಿದ್ದ ಅದೇ ದೃಶ್ಯವು, ವರ್ತಮಾನದ ಮಹಾ ಪುರುಷನ ಸಮ್ಮುಖದಲ್ಲಿಯೂ ಇದೆ. ಆದುದರಿಂದಲೇ ಅವನು ನೋಡುತ್ತಿದ್ದಾನೆ, ತೋರಿಸುತ್ತಿದ್ದಾನೆ, ಒಳಗಿಂದೊಳಗೇ ಜಾಗ್ರತಗೊಳಿಸುತ್ತಿದ್ದಾನೆ, ಆ ದಾರಿಯಲ್ಲಿ ಅವನೇ ನಡೆಸುತ್ತಾನೆ ಕೂಡ.
'ಪರಮ ಪೂಜ್ಯ ಪರಮ ಹಂಸಜೀ ಮಹಾರಾಜ್' ಕೂಡ ಅದೇ ಮಟ್ಟದ ಓರ್ವ ಮಹಾಪುರುಷರಾಗಿದ್ದರು. ಅವರ ವಾಣಿ ಮತ್ತು ಅಂತರ್ ಪ್ರೇರಣೆಯಿಂದ, ;ಗೀತೆಗೆ ಯಾವ ಅರ್ಥ ಸಿಕ್ಕಿತೋ, ಅದರ ಸಂಕಲನವೇ 'ಯಥಾರ್ಥ ಗೀತಾ'.
-ಸ್ವಾಮಿ ಅಡಗಡಾನಂದ