ಜೀವನ ಚರಿತ್ರೆ : ದಾದಾಭಾಯಿ ನವರೋಜಿ / Jeevana Charitre: Dadabhai Naoroji

· Kannada works of D V Gundappa ಪುಸ್ತಕ 54 · Sriranga Digital Software Technologies Pvt. Ltd.
5.0
3 ವಿಮರ್ಶೆಗಳು
ಇ-ಪುಸ್ತಕ
24
ಪುಟಗಳು

ಈ ಇ-ಪುಸ್ತಕದ ಕುರಿತು

ದಾದಾಭಾಯಿ ನವರೋಜಿಯವರ ಈ ಸಂಕ್ಷೇಪವಾದ ಜೀವನ ಚರಿತ್ರೆ ಸುಮಾರು ೩೨ ವರ್ಷಗಳ ಹಿಂದೆ (೧೯೧೮) ಮೊದಲು ಪ್ರಕಟವಾದದ್ದು. ಈಗ ಅದನ್ನು ಅಲ್ಲಲ್ಲಿ ಸ್ವಲ್ಪ ವಿಸ್ತರಿಸಿ ಪರಿಷ್ಕಾರ ಮಾಡಿ ಪ್ರಕಟಿಸಿದೆ. ಒಂದು ಜನಾಂಗದ ಚರಿತ್ರೆ ಒಂದು ಮಹಾಪುರಾಣದಂತೆ. ಅದು ಒಂದು ದಿವಸದ ಅಥವಾ ಒಂದು ವರ್ಷದ ಕಥೆಯಲ್ಲ; ಒಬ್ಬ ಮನುಷ್ಯನ ಅಥವಾ ಒಂದು ಸಣ್ಣ ಗುಂಪಿನ ಕಥೆಯಲ್ಲ. ಅದು ಹತ್ತಾರು ವರ್ಷಕಾಲ ಸಾವಿರಾರು ಮಂದಿಯಿಂದ ಕೂಡಿ ನಡೆದುಕೊಂಡು ಬಂದಿರುವ ವಿಸ್ತಾರ ಪ್ರಸಂಗ. ಒಂದು ದೇಶದ ಜನತೆಯ ಜೀವನ ಒಂದು ದೊಡ್ಡ ನದಿಯ ಪ್ರವಾಹದಂತೆ. ಕಾವೇರೀನದಿ ಅದರ ಹುಟ್ಟುನಾಡಾದ ಕೊಡಗಿನಲ್ಲಿ ಸಣ್ಣ ಹೊಳೆಯಂತೆ ಕಾಣುತ್ತದೆ, ಸಮುದ್ರ ಸೇರುವ ಬಳಿ ಕೊಲ್ಲಡಂ ಎಂಬಲ್ಲಿ ಸಮುದ್ರದಂತೆ ಅಪಾರವಾಗುತ್ತದೆ. ಅದು ಹಾಗೆ ಬೆಳೆಯಲು ಅದರ ದಾರಿಯಲ್ಲಿ ನೂರಾರು ತೊರೆಗಳೂ ಹಳ್ಳಗಳೂ ಹೊಳೆಗಳೂ ಈ ಪಕ್ಕ ಆ ಪಕ್ಕಗಳಿಂದ ಹರಿದುಬಂದು ಅಲ್ಲಲ್ಲಿ ಅದರೊಳಕ್ಕೆ ಸೇರಿದ್ದು ಕಾರಣವಲ್ಲವೆ? ಹಾಗೆ ಕಾಲಾನುಕಾಲದಲ್ಲಿ ಆದ ಬೆಳೆವಣಿಗೆ ನಮ್ಮ ಸ್ವಾತಂತ್ರ್ಯ ಸಮಾರಂಭದ್ದು. ಈ ನದಿ ಗಾಂಧಿಘಟ್ಟದಲ್ಲಿ ಇಷ್ಟು ದೊಡ್ಡದಾಗಲು ಅದಕ್ಕೆ ಎಷ್ಟೋ ಉಪನದಿಗಳು ಸೇರಬೇಕಾದದ್ದಿತ್ತು. ಅದಕ್ಕೆ ಕಾಲ ಸಹಾಯ ಬೇಕಿತ್ತು. ಅಲ್ಲಿಯವರೆಗೆ ಆ ನದಿಯನ್ನು ಹರಿಯಿಸಿಕೊಂಡು ಬಂದು ಉಪನದಿಗಳ ಬರುವಿಕೆಗೆ ಅನುಕೂಲ್ಯವನ್ನುಂಟುಮಾಡಿದವರು ಗಾಂಧಿಯವರ ಪೂರ್ವಾಚಾರ್ಯರು. ಆ ಹಿರಿಯ ದೇಶಭಕ್ತರೂ ಗಾಂಧಿಯವರಂತೆಯೇ ನಮ್ಮ ಭಕ್ತಿ ಕೃತಜ್ಞತೆಗಳಿಗೆ ಅಧಿಕಾರಿಗಳಾಗಿದ್ದಾರೆ. ಅವರಲ್ಲಿ ಅಗ್ರಗಣ್ಯರು ದಾದಾಭಾಯಿ ನವರೋಜಿಯವರು.

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

5.0
3 ವಿಮರ್ಶೆಗಳು

ಈ ಇ-ಪುಸ್ತಕಕ್ಕೆ ರೇಟಿಂಗ್ ನೀಡಿ

ನಿಮ್ಮ ಅಭಿಪ್ರಾಯವೇನು ಎಂದು ನಮಗೆ ತಿಳಿಸಿ.

ಮಾಹಿತಿ ಓದುವಿಕೆ

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌‌ಗಳು
Android ಮತ್ತು iPad/iPhone ಗೆ Google Play ಪುಸ್ತಕಗಳ ಅಪ್ಲಿಕೇಶನ್‌ ಇನ್‌ಸ್ಟಾಲ್ ಮಾಡಿ. ಇದು ನಿಮ್ಮ ಖಾತೆಯನ್ನು ಸ್ವಯಂಚಾಲಿತವಾಗಿ ಸಿಂಕ್‌ ಮಾಡುತ್ತದೆ ಮತ್ತು ನೀವು ಎಲ್ಲೇ ಇರಿ ಆನ್‌ಲೈನ್‌ ಅಥವಾ ಆಫ್‌ಲೈನ್‌ನಲ್ಲಿ ಪುಸ್ತಕಗಳನ್ನು ಓದಲು ಅನುಮತಿಸುತ್ತದೆ.
ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳು
Google Play ನಲ್ಲಿ ಖರೀದಿಸಿದ ಆಡಿಯೋಬುಕ್‌ಗಳನ್ನು ನಿಮ್ಮ ವೆಬ್‌ ಬ್ರೌಸರ್‌ನ ಕಂಪ್ಯೂಟರ್‌ನ ಲ್ಲಿ ಆಲಿಸಬಹುದು.
eReaders ಮತ್ತು ಇತರ ಸಾಧನಗಳು
Kobo ಇ-ರೀಡರ್‌ಗಳಂತಹ ಇ-ಇಂಕ್ ಸಾಧನಗಳ ಕುರಿತು ಓದಲು, ನೀವು ಫೈಲ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಅದನ್ನು ನಿಮ್ಮ ಸಾಧನಕ್ಕೆ ವರ್ಗಾಯಿಸಬೇಕು. ಫೈಲ್‌ಗಳು ಮತ್ತು ಬೆಂಬಲಿತ ಇ-ರೀಡರ್‌ಗಳನ್ನು ವರ್ಗಾವಣೆ ಮಾಡಲು ವಿವರವಾದ ಸಹಾಯ ಕೇಂದ್ರ ಸೂಚನೆಗಳನ್ನು ಅನುಸರಿಸಿ.

ಸರಣಿಗಳನ್ನು ಮುಂದುವರಿಸಿ

D V Gundappa ಅವರ ಇನ್ನಷ್ಟು

ಅದೇ ರೀತಿಯ ಇ-ಪುಸ್ತಕಗಳು