Google Kids Space

3.2
3.17ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಶಿಕ್ಷಕರು ಅನುಮೋದಿಸಿದ್ದಾರೆ
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google Kids Space ಎಂಬುದು 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಕಸ್ಟಮ್ ಹೋಮ್ ಸ್ಕ್ರೀನ್ ಮತ್ತು ಗುಣಮಟ್ಟದ ಕಂಟೆಂಟ್‌ನ ಲೈಬ್ರರಿಯನ್ನು ಹೊಂದಿರುವ ಟ್ಯಾಬ್ಲೆಟ್ ಅನುಭವವಾಗಿದೆ. ಮಕ್ಕಳು ವಿಶಿಷ್ಟ ಅವತಾರ್‌ಗಳ ಮೂಲಕ ತಮ್ಮ ಅನುಭವವನ್ನು ಕಸ್ಟಮೈಸ್ ಮಾಡಬಹುದು ಮತ್ತು ಅವರ ಆಸಕ್ತಿಗಳನ್ನು ಆಧರಿಸಿದ ಶಿಫಾರಸುಗಳನ್ನು ಸ್ವೀಕರಿಸಬಹುದು, ಅದೇ ವೇಳೆ ಪೋಷಕ ನಿಯಂತ್ರಣಗಳ ಮೂಲಕ ಪೋಷಕರು ಮಿತಿಗಳನ್ನು ಸೆಟ್ ಮಾಡಬಹುದಾಗಿದೆ.

Google Kids Space ಗೆ ನಿಮ್ಮ ಮಗುವಿನ Google ಖಾತೆ ಮತ್ತು ಹೊಂದಾಣಿಕೆಯಾಗುವ Android ಸಾಧನದ ಅಗತ್ಯವಿರುತ್ತದೆ.


ಶಿಕ್ಷಕರು ಅನುಮೋದಿಸಿರುವ ಆ್ಯಪ್‌ಗಳು ಮತ್ತು ಗೇಮ್‌ಗಳು
Google Kids Space ನಲ್ಲಿ ಶಿಕ್ಷಕರು ಹಾಗೂ ಮಕ್ಕಳ ಶಿಕ್ಷಣ ತಜ್ಞರು ಮತ್ತು ಮೀಡಿಯಾ ತಜ್ಞರ ಅನುಮೋದನೆ ಪಡೆದಿರುವ Google Play ನಲ್ಲಿನ ಆ್ಯಪ್‌ಗಳು ಮತ್ತು ಗೇಮ್‌ಗಳಿರುತ್ತವೆ. ಶಿಕ್ಷಕರು ಅನುಮೋದಿಸಿರುವ ಆ್ಯಪ್‌ಗಳು ವಯಸ್ಸಿಗೆ ಅನುಗುಣವಾಗಿರುತ್ತವೆ, ಅವುಗಳನ್ನು ವಿವೇಚನಾಪೂರ್ಣವಾಗಿ ವಿನ್ಯಾಸಗೊಳಿಸಲಾಗಿದ್ದು, ಮೋಜಿನ ಅಥವಾ ಸ್ಪೂರ್ತಿದಾಯಕ ಕಂಟೆಂಟ್ ಹೊಂದಿರುತ್ತವೆ.

Google Kids Space ಶಿಫಾರಸುಗಳನ್ನೂ ಮೀರಿದ ಅನುಕೂಲವನ್ನು ಬಯಸುವ ಪೋಷಕರಿಗಾಗಿ, ನೀವು ಪೋಷಕರ ಮೆನುವಿನ ಮೂಲಕ Google Play Store ನಿಂದ ಇನ್ನೂ ಹೆಚ್ಚಿನ ಕಂಟೆಂಟ್ ಸೇರಿಸಬಹುದು.

ಮಕ್ಕಳ ಪುಸ್ತಕ ತಜ್ಞರು ಖುದ್ದಾಗಿ ಆರಿಸಿರುವ ಪುಸ್ತಕಗಳು
ಓದುವಿಕೆಯನ್ನು ಪ್ರೀತಿಸುವಂತೆ ಪ್ರೋತ್ಸಾಹಿಸಲು Play Books ನಿಂದ ಕ್ಯಾಟಲಾಗ್ ಒಂದನ್ನು ಜಾಣ್ಮೆಯಿಂದ ಕ್ಯುರೇಟ್ ಮಾಡಲಾಗಿದೆ. ಸುಂದರ ಶೀರ್ಷಿಕೆಗಳು ಮತ್ತು ನಿಮಗೆ ಪರಿಚಿತವಾಗಿರುವ ಪಾತ್ರಗಳೂ ಸೇರಿದಂತೆ, ಟ್ರಕ್‌ಗಳಿಂದ ಹಿಡಿದು ಬ್ಯಾಲೆ ನೃತ್ಯದವರೆಗಿನ ವಿಷಯಗಳನ್ನು ಒಳಗೊಂಡಿರುವ ಕ್ಲಾಸಿಕ್ ಪುಸ್ತಕಗಳು ಹಾಗೂ ಹೊಚ್ಚ ಹೊಸ ಕತೆಗಳು ಲಭ್ಯವಿವೆ. ಮಕ್ಕಳು ಹೊಸ ಆಸಕ್ತಿಗಳನ್ನು ಕಂಡುಕೊಳ್ಳಬಹುದು ಅಥವಾ ತಮ್ಮ ಮೆಚ್ಚಿನ ಕೆಲವು ಕಥೆಗಳನ್ನು ಮತ್ತೆಮತ್ತೆ ಓದಬಹುದು.

ಸಮೃದ್ಧ ಕಂಟೆಂಟ್ ಹೊಂದಿರುವ ಶಿಫಾರಸು ಮಾಡಿದ ವೀಡಿಯೊಗಳು
ಹ್ಯಾಂಡ್ಸ್-ಆನ್ ಸೃಜನಶೀಲತೆ ಮತ್ತು ಆಟವನ್ನು ಪ್ರೋತ್ಸಾಹಿಸುವ YouTube Kids ನ ವೀಡಿಯೊಗಳ ಮೂಲಕ ಮಕ್ಕಳು ಹೊಸತನ್ನು ಅನ್ವೇಷಿಸುವ ಸ್ಪೂರ್ತಿ ಪಡೆಯಬಹುದು ಹಾಗೂ ತಮ್ಮ ಕೌಶಲ್ಯಗಳನ್ನು ಅಭ್ಯಾಸ ಮಾಡಬಹುದು. ಸರಳ ರೇಖಾಚಿತ್ರದಿಂದ ಹಿಡಿದು ತಮಾಷೆಯ ವಿಜ್ಞಾನದ ಪ್ರಾಜೆಕ್ಟ್‌ಗಳವರೆಗೆ ಎಲ್ಲಾ ವಿಚಾರಗಳ ಬಗೆಗಿನ ವೀಡಿಯೊಗಳು ಅವರಿಗೆ ಸಿಗುತ್ತವೆ. ಕಲಿಯುವುದು, ಹಾಡುವುದು ಅಥವಾ ನಗುವುದು, ಮಕ್ಕಳು ಏನೇ ಮಾಡಲು ಬಯಸಿದರೂ, ಅವರು ತಮಗಿಷ್ಟದ ವಿಷಯಗಳು ಮತ್ತು ಪಾತ್ರಗಳ ಕುರಿತಾದ ವೀಡಿಯೊಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು.

ಮಕ್ಕಳ ಕುತೂಹಲವನ್ನು ಮನಸ್ಸಿನಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ
ಪ್ರಾಣಿಗಳೇ ಇರಲಿ ಅಥವಾ ಕಲಾ ಪ್ರಾಜೆಕ್ಟ್‌ಗಳೇ ಆಗಿರಲಿ, ಮಕ್ಕಳು ತಮಗಿಷ್ಟದ ಸಂಗತಿಗಳಲ್ಲಿ ಪುಟ್ಟ ಪರಿಣತರಾಗುತ್ತಾರೆ. ಹೊಸ ಮತ್ತು ತೊಡಗಿಸಿಕೊಳ್ಳುವ ವಿಧಾನಗಳ ಮೂಲಕ ಅವರ ಇತ್ತೀಚಿನ ಆಕರ್ಷಣೆಗಳನ್ನು ಎಕ್ಸ್‌ಪ್ಲೋರ್ ಮಾಡಲು ಮತ್ತು ಇನ್ನೂ ಹೆಚ್ಚು ಕಲಿಯುವುದಕ್ಕೆ ಅವರಿಗೆ ಸಹಾಯ ಮಾಡಲು Google Kids Space ಅನ್ನು ವಿನ್ಯಾಸಗೊಳಿಸಲಾಗಿದೆ. ಮಕ್ಕಳು ತಮ್ಮದೇ ಆದ ಪಾತ್ರವನ್ನು ರಚಿಸುವ ಮೂಲಕ ತಮ್ಮ ಅನುಭವವನ್ನು ಕಸ್ಟಮೈಸ್ ಸಹ ಮಾಡಬಹುದು, ಅವರು ಲಾಗಿನ್ ಮಾಡಿದಾಗ ಈ ಪಾತ್ರ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಪೋಷಕರ ನಿಯಂತ್ರಣಗಳ ಮೂಲಕ ಮಿತಿಗಳನ್ನು ಸೆಟ್ ಮಾಡಿ
Google ನ Family Link ಆ್ಯಪ್‌ನಲ್ಲಿರುವ ಪೋಷಕ ನಿಯಂತ್ರಣಗಳ ಸಹಾಯದಿಂದ ನೀವು ನಿಮ್ಮದೇ ಸ್ವಂತ ಸಾಧನವನ್ನು ಬಳಸಿಕೊಂಡು, Google Play ಇಂದ ಪಡೆದ ಕಂಟೆಂಟ್ ನಿರ್ವಹಣೆ, ವೀಕ್ಷಣಾ ಅವಧಿಯ ಮಿತಿಗಳನ್ನು ಸೆಟ್ ಮಾಡುವಿಕೆ ಮತ್ತು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಮ್ಮ ಮಗುವಿನ ಅನುಭವವನ್ನು ನಿರ್ದೇಶಿಸಬಹುದು.

ಪ್ರಮುಖ ಮಾಹಿತಿ
Google Kids Space ನಿಮ್ಮ ಮಗುವಿನ ಟ್ಯಾಬ್ಲೆಟ್‌ನ ಹೋಮ್ ಸ್ಕ್ರೀನ್ ಅನ್ನು ಬದಲಿಸುತ್ತದೆ ಮತ್ತು ಅದರ ಬದಲಿಗೆ ತಮಗೆ ಗೊತ್ತಿರುವ ಮತ್ತು ತಮಗೆ ಇಷ್ಟವಾಗುವ ಕಂಟೆಂಟ್ ಅನ್ನು ಆ್ಯಪ್‌ಗಳು ಮತ್ತು ಗೇಮ್‌ಗಳು, ವೀಡಿಯೊಗಳು ಹಾಗೂ ಪುಸ್ತಕಗಳಿಗೆ ಸಂಬಂಧಿಸಿದ ಟ್ಯಾಬ್‌ಗಳಾಗಿ ವ್ಯವಸ್ಥಿತಗೊಳಿಸಲು ಮಕ್ಕಳಿಗೆ ನೆರವಾಗುವ ಅನುಭವವನ್ನು ಒದಗಿಸುತ್ತದೆ. Google Kids Space ಅನ್ನು ಪೋಷಕರ ಮೆನುವಿನಿಂದ ಯಾವಾಗ ಬೇಕಾದರೂ ಆಫ್ ಮಾಡಬಹುದು.

Google Kids Space ಗೆ ನಿಮ್ಮ ಮಗುವಿನ Google ಖಾತೆಯ ಅಗತ್ಯವಿರುತ್ತದೆ. ಪೋಷಕರ ನಿಯಂತ್ರಣಗಳಿಗೆ, ಬೆಂಬಲಿತ Android, Chromebook ಅಥವಾ iOS ಸಾಧನಗಳಲ್ಲಿ Family Link ಆ್ಯಪ್‌ನ ಅಗತ್ಯವಿರುತ್ತದೆ. ಪ್ರದೇಶವನ್ನು ಆಧರಿಸಿ ಫೀಚರ್‌ಗಳ ಲಭ್ಯತೆಯಲ್ಲಿ ವ್ಯತ್ಯಾಸವಾಗಬಹುದು. Google Kids Space ಆಯ್ದ Android ಟ್ಯಾಬ್ಲೆಟ್‌ಗಳಲ್ಲಿ ಲಭ್ಯವಿದೆ. Google Kids Space ನಲ್ಲಿ Google Assistant ಲಭ್ಯವಿರುವುದಿಲ್ಲ.

ಪುಸ್ತಕಗಳು ಮತ್ತು ವೀಡಿಯೊ ಕಂಟೆಂಟ್ ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು. ವೀಡಿಯೊ ಕಂಟೆಂಟ್ YouTube Kids ಆ್ಯಪ್‌ನ ಲಭ್ಯತೆಗೆ ಒಳಪಟ್ಟಿರುತ್ತದೆ. ಪುಸ್ತಕಗಳ ಕಂಟೆಂಟ್‌ಗೆ Play Books ಆ್ಯಪ್‌ನ ಅಗತ್ಯವಿರುತ್ತದೆ. ಆ್ಯಪ್‌ಗಳು, ಪುಸ್ತಕಗಳು ಮತ್ತು ವೀಡಿಯೊ ಕಂಟೆಂಟ್‌ನ ಲಭ್ಯತೆಯು ಸೂಚನೆಯಿಲ್ಲದೆಯೇ ಬದಲಾಗಬಹುದು.
ಅಪ್‌ಡೇಟ್‌ ದಿನಾಂಕ
ಜೂನ್ 3, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಹಣಕಾಸು ಮಾಹಿತಿ ಮತ್ತು 3 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಪ್ಲೇ ಕುಟುಂಬಗಳ ನೀತಿಯನ್ನು ಅನುಸರಿಸಲು ಬದ್ಧವಾಗಿದೆ
ಸ್ವತಂತ್ರ ಭದ್ರತಾ ವಿಮರ್ಶೆ

ಹೊಸದೇನಿದೆ

ಹಲವಾರು ದೋಷ ಪರಿಹಾರಗಳು ಮತ್ತು ಸ್ಥಿರತೆ ಸುಧಾರಣೆಗಳು.