Family Link ಪೋಷಕ ನಿಯಂತ್ರಣಗಳು

1.6
325ಸಾ ವಿಮರ್ಶೆಗಳು
50ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Family Link ಪೋಷಕ ನಿಯಂತ್ರಣಗಳು ಫೋಷಕರಿಗಾಗಿ Family Link ನ ಕಂಪ್ಯಾನಿಯನ್ ಆ್ಯಪ್ ಆಗಿದೆ. ಮಕ್ಕಳು/ಹದಿಹರೆಯದವರು ಬಳಸುತ್ತಿರುವ ಸಾಧನದಲ್ಲಿ ಮಾತ್ರ ಈ ಆ್ಯಪ್ ಡೌನ್‌ಲೋಡ್ ಮಾಡಿ.

Google ನಿಂದ Family Link ಪೋಷಕ ನಿಯಂತ್ರಣಗಳ ಆ್ಯಪ್ ಬಳಸಿ. ಮಕ್ಕಳು ಚಿಕ್ಕವರಾಗಿರಲಿ ಅಥವಾ ಹದಿಹರೆಯದವರಾಗಿರಲಿ, ಅವರು ಕಲಿಯುವಾಗ, ಆಡುವಾಗ ಮತ್ತು ಆನ್‌ಲೈನ್‌ನಲ್ಲಿ ಎಕ್ಸ್‌ಪ್ಲೋರ್ ಮಾಡುವಾಗ ಅವರಿಗೆ ಮಾರ್ಗದರ್ಶನ ನೀಡಲು ನೆರವಾಗಲು, ನಿಮ್ಮ ಸ್ವಂತ ಸಾಧನದಿಂದ ದೂರದಿಂದಲೇ ಡಿಜಿಟಲ್ ಮೂಲ ನಿಯಮಗಳನ್ನು ಹೊಂದಿಸುವ ಅವಕಾಶವನ್ನು Family Link ಆ್ಯಪ್ ನೀಡುತ್ತದೆ. 13 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ (ಅಥವಾ ನಿಮ್ಮ ದೇಶದಲ್ಲಿನ ಸಮ್ಮತಿ ನೀಡಲು ಮಾನ್ಯವಾದ ವಯಸ್ಸು ), ನಿಮ್ಮ ಖಾತೆಯನ್ನು ಹೋಲುವ ಮತ್ತು ಬಹುತೇಕ Google ಸೇವೆಗಳಿಗೆ ಆ್ಯಕ್ಸೆಸ್ ಹೊಂದಿರುವ Google ಖಾತೆ ರಚಿಸಲು ಸಹ Family Link ಅನುಮತಿಸುತ್ತದೆ.


Family Link ಪೋಷಕ ನಿಯಂತ್ರಣಗಳ ಮೂಲಕ, ಕೆಳಗಿನವುಗಳನ್ನು ಮಾಡಬಹುದು:

ಅವರಿಗೆ ಒಳ್ಳೆಯ ವಿಷಯದ ಕುರಿತು ಮಾರ್ಗದರ್ಶನ ನೀಡುವುದು

• ಅವರ ಆ್ಯಪ್ ಚಟುವಟಿಕೆ ವೀಕ್ಷಿಸುವುದು - ಎಲ್ಲಾ ವೀಕ್ಷಣೆ ಅವಧಿಯು ಒಂದೇ ಆಗಿರುವುದಿಲ್ಲ. ನಿಮ್ಮ ಮಗು ತಮ್ಮ ಮೆಚ್ಚಿನ ಆ್ಯಪ್‌ಗಳಲ್ಲಿ ಎಷ್ಟು ಸಮಯ ಕಳೆಯುತ್ತಿದ್ದಾರೆ ಎಂದು ತೋರಿಸುವ ಚಟುವಟಿಕೆ ವರದಿಗಳ ಮೂಲಕ, ತಾವು Android ಸಾಧನದಲ್ಲಿ ನಡೆಸುವ ಚಟುವಟಿಕೆಗಳ ಕುರಿತು ಆರೋಗ್ಯಕರ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮ ಮಗುವಿಗೆ ನೆರವಾಗಿ. ದೈನಿಕ, ಸಾಪ್ತಾಹಿಕ ಅಥವಾ ಮಾಸಿಕ ವರದಿಗಳನ್ನು ನೋಡಬಹುದು.
• ಅವರ ಆ್ಯಪ್‌ಗಳನ್ನು ನಿರ್ವಹಿಸಿ - ಅನುಕೂಲಕರ ಅಧಿಸೂಚನೆ ನಿಮ್ಮ ಮಗು Google Play Store ನಿಂದ ಡೌನ್‌ಲೋಡ್ ಮಾಡಲು ಬಯಸುವ ಆ್ಯಪ್‌ಗಳನ್ನು ಅನುಮೋದಿಸುವ ಅಥವಾ ನಿರ್ಬಂಧಿಸುವ ಅವಕಾಶವನ್ನು ನೀಡುತ್ತವೆ. ಆ್ಯಪ್‌ನಲ್ಲಿನ ಖರೀದಿಗಳನ್ನು ಸಹ ನಿರ್ವಹಿಸಬಹುದು ಮತ್ತು ಅವರ ಸಾಧನದಲ್ಲಿನ ನಿರ್ದಿಷ್ಟ ಆ್ಯಪ್‌ ಮರೆಮಾಡಬಹುದು, ಇದೆಲ್ಲವನ್ನೂ ನಿಮ್ಮ ಸ್ವಂತ ಸಾಧನದಿಂದ ದೂರದಿಂದಲೇ ಮಾಡಬಹುದು.
• ಅವರ ಕುತೂಹಲವನ್ನು ತಣಿಸಿ - ಮಗುವಿಗೆ ಯಾವ ಆ್ಯಪ್‌ ಸೂಕ್ತವೆಂದು ನಿರ್ಧರಿಸುವುದು ಕಷ್ಟವಾಗಬಹುದು, ಹಾಗಾಗಿ Family Link ನಿಮಗೆ Android ನಲ್ಲಿ ಶಿಕ್ಷಕರು-ಶಿಫಾರಸು ಮಾಡಿದ ಆ್ಯಪ್‌ ತೋರಿಸುತ್ತದೆ, ಅವುಗಳನ್ನು ನೇರವಾಗಿ ನಿಮ್ಮ ಮಗುವಿನ ಸಾಧನಕ್ಕೆ ಸೇರಿಸಬಹುದು.


ವೀಕ್ಷಣಾ ಅವಧಿಯ ಮೇಲೆ ಕಣ್ಣಿಡಿ

• ಮಿತಿ ಹೊಂದಿಸಿ - ಮಗುವಿಗೆ ಸೂಕ್ತ ವೀಕ್ಷಣಾ ಅವಧಿ ನಿರ್ಧರಿಸುವುದು ನಿಮಗೆ ಬಿಟ್ಟಿದ್ದು. ಮಗುವಿನ ಮೇಲ್ವಿಚಾರಣೆ ಮಾಡಿದ ಸಾಧನದಲ್ಲಿ ಸಮಯ ಮಿತಿ, ಮಲಗುವ ಸಮಯವನ್ನು ಹೊಂದಿಸಲು Family Link ಅವಕಾಶ ನೀಡುತ್ತದೆ, ಹೀಗೆ ಉತ್ತಮ ಸಮತೋಲನ ಕಂಡುಕೊಳ್ಳಲು ಅವರಿಗೆ ನೀವು ಸಹಾಯ ಮಾಡಬಹುದು.
• ಅವರ ಸಾಧನ ಲಾಕ್ ಮಾಡಿ - ಹೊರಗೆ ಆಟವಾಡುವ, ಊಟದ ಅಥವಾ ಒಟ್ಟಿಗೆ ಕಾಲ ಕಳೆಯುವ ಸಂದರ್ಭದಲ್ಲಿ ವಿರಾಮ ತೆಗೆದುಕೊಳ್ಳಲು ಮೇಲ್ವಿಚಾರಣೆ ಮಾಡಿದ ಸಾಧನವನ್ನು ನೀವು ದೂರದಿಂದಲೇ ಲಾಕ್ ಮಾಡಬಹುದು.


ಅವರು ಎಲ್ಲಿದ್ದಾರೆಂದು ನೋಡಿ

• ನಿಮ್ಮ ಮಗು ಪ್ರಯಾಣಿಸುತ್ತಿರುವಾಗ ಅವರಿರುವ ಸ್ಥಳ ಪತ್ತೆಹಚ್ಚಲು ಸಾಧ್ಯವಾದರೆ ಅನುಕೂಲವಾಗುತ್ತದೆ. ನಿಮ್ಮ ಮಗು ತಮ್ಮ Android ಸಾಧನವನ್ನು ಜೊತೆಯಲ್ಲಿ ಕೊಂಡೊಯ್ದಿರುವಾಗ ಅವರಿರುವ ಸ್ಥಳ ಪತ್ತೆಹಚ್ಚಲು ನೀವು Family Link ಬಳಸಬಹುದು.


ಪ್ರಮುಖ ಮಾಹಿತಿ

• ನಿಮ್ಮ ಮಗುವಿನ ಸಾಧನವನ್ನು ಆಧರಿಸಿ Family Link ನ ಪರಿಕರಗಳಲ್ಲಿ ವ್ಯತ್ಯಾಸವಾಗಬಹುದು. families.google.com/familylink/setup ನಲ್ಲಿ ಹೊಂದಾಣಿಕೆಯಾಗುವ ಸಾಧನ ಪಟ್ಟಿ ನೋಡಿ
• ನಿಮ್ಮ ಮಗು Google Play ನಿಂದ ಮಾಡುವ ಖರೀದಿಗಳು ಮತ್ತು ಡೌನ್‌ಲೋಡ್‌ಗಳನ್ನು ನಿರ್ವಹಿಸಲು Family Link ಸಹಾಯ ಮಾಡುತ್ತದೆಯಾದರೂ, ಆ್ಯಪ್ ಅಪ್‌ಡೇಟ್‌ (ಅನುಮತಿಗಳನ್ನು ವಿಸ್ತರಿಸುವ ಅಪ್‌ಡೇಟ್‌ಗಳೂ ಸೇರಿದಂತೆ), ನೀವು ಈ ಹಿಂದೆ ಅನುಮೋದಿಸಿರುವ ಆ್ಯಪ್‌ ಅಥವಾ ಕುಟುಂಬದ ಲೈಬ್ರರಿಯಲ್ಲಿ ಹಂಚಿಕೊಳ್ಳಲಾದ ಆ್ಯಪ್‌ ಇನ್‌ಸ್ಟಾಲ್ ಮಾಡಲು ಅವರಿಗೆ ಅನುಮೋದನೆ ಅಗತ್ಯವಿರುವುದಿಲ್ಲ. ಪೋಷಕರು ತಮ್ಮ ಮಗು ಇನ್‌ಸ್ಟಾಲ್ ಮಾಡಿರುವ ಆ್ಯಪ್‌ ಮತ್ತು ಆ್ಯಪ್ ಅನುಮತಿಗಳನ್ನು Family Link ನಲ್ಲಿ ನಿಯಮಿತವಾಗಿ ಪರಿಶೀಲಿಸಬೇಕು.
• ನಿಮ್ಮ ಮಗುವಿನ ಮೇಲ್ವಿಚಾರಣೆ ಮಾಡಿದ ಸಾಧನದಲ್ಲಿನ ಆ್ಯಪ್‌ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಅವರು ಬಳಸಬಾರದೆಂದು ನೀವು ಬಯಸುವ ಆ್ಯಪ್‌ ನಿಷ್ಕ್ರಿಯಗೊಳಿಸಬೇಕು. ಮೊದಲೇ-ಇನ್‍ಸ್ಟಾಲ್ ಮಾಡಿದ ಕೆಲವು ಆ್ಯಪ್‌ ನಿಷ್ಕ್ರಿಯಗೊಳಿಸಲು ನಿಮಗೆ ಸಾಧ್ಯವಾಗದಿರಬಹುದು ಎಂಬುದನ್ನು ಗಮನಿಸಿ.
• ನಿಮ್ಮ ಮಗು ಅಥವಾ ಹದಿಹರೆಯದ ಮಗುವಿನ ಸಾಧನದ ಸ್ಥಳವನ್ನು ನೋಡಲು, ಅದು ಆನ್‌ ಆಗಿರಬೇಕು, ಇತ್ತೀಚೆಗೆ ಸಕ್ರಿಯವಾಗಿರಬೇಕು ಮತ್ತು ಇಂಟರ್ನೆಟ್‌ಗೆ ಕನೆಕ್ಟ್ ಆಗಿರಬೇಕು.
• ಶಿಕ್ಷಕರು-ಶಿಫಾರಸು ಮಾಡಿದ ಆ್ಯಪ್‌ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ನಿರ್ದಿಷ್ಟ ವಯಸ್ಸಿನ ಮಕ್ಕಳ ಪೋಷಕರ Android ಸಾಧನದಲ್ಲಿ ಮಾತ್ರ ಲಭ್ಯ.
• Family Link ನಿಮ್ಮ ಮಗುವಿನ ಆನ್‍ಲೈನ್ ಅನುಭವವನ್ನು ನಿರ್ವಹಿಸುವ ಪರಿಕರಗಳನ್ನು ಒದಗಿಸುತ್ತದೆಯಾದರೂ, ಅದು ಇಂಟರ್ನೆಟ್ ಅನ್ನು ಸುರಕ್ಷಿತವಾಗಿಸುವುದಿಲ್ಲ. ಬದಲಿಗೆ, ಪೋಷಕರಿಗೆ ತಮ್ಮ ಮಕ್ಕಳು ಇಂಟರ್ನೆಟ್ ಅನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಆಯ್ಕೆ ನೀಡುವ ಹಾಗೂ ಇಂಟರ್ನೆಟ್ ಬಳಕೆಯ ಕುರಿತ ಸಂವಾದವನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.
ಅಪ್‌ಡೇಟ್‌ ದಿನಾಂಕ
ಜೂನ್ 3, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ವೈಯಕ್ತಿಕ ಮಾಹಿತಿ, ಆ್ಯಪ್‌ ಚಟುವಟಿಕೆ ಮತ್ತು 2 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

1.5
299ಸಾ ವಿಮರ್ಶೆಗಳು
Mahadevappa DS
ಡಿಸೆಂಬರ್ 31, 2020
Very useful
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

ಹಲವಾರು ಸ್ಥಿರತೆ ಸುಧಾರಣೆಗಳು ಮತ್ತು ದೋಷ ಪರಿಹಾರಗಳು.