"Google ಸ್ಲೈಡ್‌ಗಳ ಅಪ್ಲಿಕೇಶನ್ ಮೂಲಕ ನಿಮ್ಮ Android ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಪ್ರಸ್ತುತಿಗಳನ್ನು ರಚಿಸಿ, ಎಡಿಟ್ ಮಾಡಿ ಮತ್ತು ಇತರರ ಸಹಯೋಗದೊಂದಿಗೆ ಕೆಲಸ ಮಾಡಿ. ಸ್ಲೈಡ್‌ಗಳ ಮೂಲಕ ನೀವು ಈ ಕೆಳಗಿನ ಕೆಲಸಗಳನ್ನು ಮಾಡಬಹುದು:
- ಹೊಸ ಪ್ರಸ್ತುತಿಗಳನ್ನು ರಚಿಸುವುದು ಅಥವಾ ಈಗಾಗಲೇ ಇರುವ ಫೈಲ್‌ಗಳನ್ನು ಎಡಿಟ್ ಮಾಡುವುದು
- ಪ್ರಸ್ತುತಿಗಳನ್ನು ಹಂಚಿಕೊಳ್ಳುವುದು ಮತ್ತು ಒಂದೇ ಸಮಯದಲ್ಲಿ, ಒಂದೇ ಪ್ರಸ್ತುತಿಯಲ್ಲಿ ಇತರರೊಂದಿಗೆ ಕೆಲಸ ಮಾಡುವುದು.
- ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ - ಆಫ್‌ಲೈನ್‌ನಲ್ಲೂ ಕೆಲಸ ಮಾಡಬಹುದು
-ಕಾಮೆಂಟ್‌ಗಳನ್ನು ಸೇರಿಸುವುದು ಮತ್ತು ಪ್ರತಿಕ್ರಿಯೆ ನೀಡುವುದು.
- ಸ್ಲೈಡ್‌ಗಳನ್ನು ಸೇರಿಸುವುದು ಮತ್ತು ಮರುವ್ಯವಸ್ಥಿತಗೊಳಿಸುವುದು, ಪಠ್ಯ ಹಾಗೂ ಆಕಾರಗಳನ್ನು ಫಾರ್ಮ್ಯಾಟ್ ಮಾಡುವುದು ಮತ್ತು ಇನ್ನೂ ಹಲವು ಕಾರ್ಯಗಳನ್ನು ಮಾಡಬಹುದು.
- ನಿಮ್ಮ ಮೊಬೈಲ್ ಸಾಧನದಿಂದಲೇ ನೇರವಾಗಿ ಪ್ರಸ್ತುತಪಡಿಸಿ
- ನೀವು ಮಾಡಿದ ಕೆಲಸ ಕಳೆದುಹೋಗುವ ಕುರಿತು ಚಿಂತಿಸಬೇಡಿ – ನೀವು ಟೈಪ್ ಮಾಡುತ್ತಿರುವಂತೆಯೇ, ಎಲ್ಲವನ್ನೂ ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ.
- Explore ಮೂಲಕ ಸುಂದರ ಸ್ಲೈಡ್‌ಗಳನ್ನು ಕ್ಷಣದಲ್ಲೇ ಸಿದ್ಧಪಡಿಸಬಹುದು.
- ಸ್ಲೈಡ್‌ಗಳನ್ನು ವೀಡಿಯೊ ಕರೆಗಳಲ್ಲಿ ಪ್ರಸ್ತುತಪಡಿಸಬಹುದು - ನಿಗದಿಪಡಿಸಿದ ಸಭೆಗಳು ಸ್ವಯಂಚಾಲಿತವಾಗಿ ಕಾಣಿಸಿಕೊಳ್ಳುತ್ತವೆ
- PowerPoint ಫೈಲ್‌ಗಳನ್ನು ತೆರೆಯಬಹುದು, ಎಡಿಟ್ ಮಾಡಬಹುದು ಮತ್ತು ಉಳಿಸಬಹುದು
ಅನುಮತಿಗಳ ಸೂಚನೆ
ಕ್ಯಾಲೆಂಡರ್: ಕ್ಯಾಲೆಂಡರ್ ಆಹ್ವಾನಗಳಿಂದ ವೀಡಿಯೊ ಕರೆಗಳಿಗೆ ಸೇರಲು ಇದನ್ನು ಬಳಸಲಾಗುತ್ತದೆ.
ಕ್ಯಾಮರಾ: ವೀಡಿಯೊ ಕರೆಗಳಲ್ಲಿ ಕ್ಯಾಮರಾ ಮೋಡ್‌ಗಾಗಿ ಮತ್ತು ಕ್ಯಾಮರಾ ಮೂಲಕ ತೆಗೆದಿರುವ ಚಿತ್ರಗಳನ್ನು ಸೇರಿಸಲು ಇದನ್ನು ಬಳಸಲಾಗುತ್ತದೆ.
ಸಂಪರ್ಕಗಳು: ಫೈಲ್‌ಗಳಿಗೆ ಸೇರಿಸಬೇಕಾದ ಮತ್ತು ಫೈಲ್‌ಗಳನ್ನು ಹಂಚಿಕೊಳ್ಳಬೇಕಾದ ಜನರ ಕುರಿತು ಸಲಹೆ ನೀಡಲು ಇದನ್ನು ಬಳಸಲಾಗುತ್ತದೆ.
ಮೈಕ್ರೋಫೋನ್: ವೀಡಿಯೊ ಕರೆಗಳಲ್ಲಿ ಆಡಿಯೊ ಪ್ರಸಾರ ಮಾಡಲು ಇದನ್ನು ಬಳಸಲಾಗುತ್ತದೆ.
ಸಂಗ್ರಹಣೆ: ಚಿತ್ರಗಳನ್ನು ಸೇರಿಸಲು ಮತ್ತು USB ಅಥವಾ SD ಸಂಗ್ರಹಣೆಯಿಂದ ಫೈಲ್‌ಗಳನ್ನು ತೆರೆಯಲು ಇದನ್ನು ಬಳಸಲಾಗುತ್ತದೆ."
ಅಪ್‌ಡೇಟ್ ದಿನಾಂಕ
ನವೆಂ 12, 2024